ಆ್ಯಪ್ನಗರ

ಎಟಿಎಂಗೆ ಬಂದ ಈತ ಕದ್ದ ವಸ್ತು ಯಾವುದು ಗೊತ್ತಾ?ವಿಡಿಯೋ ನೋಡಿದ್ರೆ ನಗ್ತೀರಿ ನೀವು!

ಈತ ಕದ್ದ ವಸ್ತುವನ್ನು ಕಂಡು ಈಗ ಜನ ಬಿದ್ದು ಬಿದ್ದು ನಗುತ್ತಿದ್ದಾರೆ. ಈತನ ಕಳ್ಳತನದ ವಿಡಿಯೋ ಕೂಡಾ ಈಗ ವೈರಲ್ ಆಗುತ್ತಿದೆ.

Vijaya Karnataka Web 30 Mar 2020, 5:15 pm
ಆ ವ್ಯಕ್ತಿ ಎಟಿಎಂಗೆ ಹಣ ಡ್ರಾ ಮಾಡಲು ಬಂದಿದ್ದ. ಆಗ ಅವನ ಕಣ್ಣಿಗೆ ಬಿದ್ದಿತ್ತು ಅದೊಂದು ವಸ್ತು...! ಹೀಗಾಗಿ, ಸಿಕ್ಕಿದ್ದೇ ಛಾನ್ಸ್‌ ಅಂತ ಆತ ಆ ವಸ್ತುವನ್ನು ಹಿಡ್ಕೊಂಡು ಕ್ಷಣಾರ್ಧದಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದ...! ಅಷ್ಟಕ್ಕೂ ಆತ ಕದ್ದಿದ್ದೇನು ಅಂತ ಒಮ್ಮೆ ನೋಡಿ...
Vijaya Karnataka Web Image by Peggy und Marco Lachmann-Anke from Pixabay
| Representative image | Image by Peggy und Marco Lachmann-Anke from Pixabay


Also Read : Coronavirus: ತನ್ನಿಬ್ಬರು ಮಕ್ಕಳಿಗೆ ಈ ಡಾಕ್ಟರ್ ಕಳುಹಿಸಿದ ಸಂದೇಶ ನೋಡಿದರೆ ಕಣ್ಣೀರು ಬರುತ್ತದೆ!


ನೋಡಿದ್ರಲ್ಲಾ... ಆತ ಕದ್ದಿದ್ದೇನು ಗೊತ್ತಾ...? ಸ್ಯಾನಿಟೈಸರ್...! ಕೊರೊನಾ ವೈರಸ್ ಕಾಟ ಶುರುವಾದ ಬಳಿಕ ಹ್ಯಾಂಡ್ ಸ್ಯಾನಿಟೈಸರ್‌ ಬಹುಬೇಡಿಕೆಯ ವಸ್ತುವಾಗಿ ಮಾರ್ಪಟ್ಟಿದೆ. ಕೈಗಳ ಸ್ವಚ್ಛತೆಯ ದೃಷ್ಟಿಯಿಂದ ಎಲ್ಲರೂ ಹ್ಯಾಂಡ್ ಸ್ಯಾನಿಟೈಸರ್ ಬಳಸುತ್ತಿದ್ದಾರೆ. ಈ ಬಳಕೆ ಅದೆಷ್ಟರಮಟ್ಟಿಗೆ ಇದೆ ಎಂದರೆ ಈಗ ಎಲ್ಲೂ ಹ್ಯಾಂಡ್ ಸ್ಯಾನಿಟೈಸರೇ ಸಿಗುತ್ತಿಲ್ಲ. ಕೆಲ ದೇಶಗಳಲ್ಲಿ ಈ ಸ್ಯಾನಿಟೈಸರ್‌ಗಾಗಿ ಅಕ್ಷರಶಃ ಹೊಡೆದಾಟವೇ ನಡೆದಿದೆ. ಬಹುಶಃ ಈತನೂ ಸ್ಯಾನಿಟೈಸರ್ ಹುಡುಕಿ ಹುಡುಕಿ ಸುಸ್ತಾಗಿ ಸಿಕ್ಕ ಅವಕಾಶವನ್ನು ಹೀಗೆ ಬಳಸಿಕೊಂಡಿದ್ದಾನೋ ಏನೋ...

Also Read : ಹೆಣ್ಮಗು ಹುಟ್ಟಬಾರದೆಂದು ಅದೊಂದು ಸಮಾಧಿಯ ತುಂಡನ್ನೇ ತೆಗೆಯುತ್ತಿದ್ದರು...!


ಪಾಕಿಸ್ತಾನದ ಪತ್ರಕರ್ತೆ ನೈಲಾ ಇನಾಯತ್ ಈ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಸುಮಾರು 32 ಸೆಕೆಂಡಿನ ಈ ವಿಡಿಯೋದಲ್ಲಿ ಎಟಿಎಂಗೆ ಹಣ ಡ್ರಾ ಮಾಡಲು ಬಂದಿದ್ದ ವ್ಯಕ್ತಿ ತನ್ನನ್ನು ಯಾರೂ ನೋಡುವುದಿಲ್ಲ ಎಂದು ಖಾತ್ರಿ ಮಾಡಿಕೊಂಡು ಪಕ್ಕದಲ್ಲೇ ಇದ್ದ ಸ್ಯಾನಿಟೈಸರ್ ಬಾಟಲಿಯನ್ನು ಹೊತ್ತೊಯ್ದಿದ್ದಾನೆ. ಆದರೆ, ತನ್ನ ಈ ಕೃತ್ಯವನ್ನು ಸೀಸಿ ಕ್ಯಾಮೆರಾ ನೀಟಾಗಿ ಸೆರೆ ಹಿಡಿಯುತ್ತದೆ ಎಂಬ ಬಗ್ಗೆ ಈತ ಬಹುಶಃ ಯೋಚಿಸಿರಲಿಕ್ಕಿಲ್ಲ ಅಥವಾ ಆದದ್ದಾಗಲಿ. ಏನಾದರೂ ಅದು ಮುಂದೆ ಅಲ್ವಾ. ಈಗ ಸ್ಯಾನಿಟೈಸರ್ ಸಿಕ್ಕಿತ್ತಲ್ವಾ ಎಂಬ ನೆಮ್ಮದಿಯಿಂದ ಈತ ಇದನ್ನು ಕೊಂಡು ಹೋಗಿದ್ದಾನೋ ಗೊತ್ತಿಲ್ಲ.

Also Read : ಆ ದೇಗುಲದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಆ ಚಮತ್ಕಾರದ ಕಾರಣ ಇನ್ನೂ ನಿಗೂಢ...!

ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಜೊತೆಗೆ, ನೆಟ್ಟಿಗರು ಇದೇ ರೀತಿಯ ಬೇರೆ ವಿಡಿಯೋಗಳನ್ನೂ ಶೇರ್ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ