ಜಿರಳೆ ಎಂದರೆ ಸಾಕಷ್ಟು ಮಂದಿಗೆ ಕಿರಿಕಿರಿ. ಮನೆಯಲ್ಲಿ ಒಂದು ಜಿರಳೆ ಕಂಡರೂ ಎಲ್ಲರೂ ಸಖತ್ ಟೆನ್ಶನ್ ಮಾಡಿಕೊಳ್ಳುತ್ತಾರೆ. ಜತೆಗೆ, ಈ ಜಿರಳೆಯಿಂದ ಮುಕ್ತಿ ಪಡೆಯಲು ಯತ್ನಿಸುತ್ತಾರೆ. ಅಂತೆಯೇ ಇವರಿಗೂ ಕೂಡಾ ಒಂದು ಜಿರಳೆ ಸಖತ್ ಕಾಟ ಕೊಟ್ಟಿತ್ತು. ಹೀಗಾಗಿ, ಜಿರಳೆಯನ್ನು ಹಿಡಿಯಲು ಇವರು ಶತ ಪ್ರಯತ್ನ ಮಾಡಿದ್ದರು...! ಹಾಗಂತ, ಇದು ಮನೆಯಲ್ಲಿ ಸೆರೆಯಾದ ದೃಶ್ಯ ಅಲ್ಲ, ಬದಲಾಗಿ ಸುರಂಗ ಮಾರ್ಗದಲ್ಲಿ ಸಾಗುತ್ತಿದ್ದ ಟ್ರೈನ್ನಲ್ಲಿ...! ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುವ ಸಾಕಷ್ಟು ದೃಶ್ಯಗಳು ನಮ್ಮಲ್ಲಿ ನಗುವರಳಿಸುತ್ತವೆ. ಅದೇ ಸಾಲಿಗೆ ಸೇರುವಂತಹ ದೃಶ್ಯ ಇದು. ಇದು ರೈಲಿನಲ್ಲಿ ಸಾಗುವಾಗ ಕಂಡ ಜಿರಳೆಯನ್ನು ಹಿಡಿಯಲು ವ್ಯಕ್ತಿಯೊಬ್ಬರು ಪ್ರಯತ್ನಿಸುತ್ತಿರುವ ದೃಶ್ಯ. ಈ ದೃಶ್ಯ ಸದ್ಯ ಎಲ್ಲರಲ್ಲೂ ನಗುವರಳಿಸಿದೆ.
subwaycreatures ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಆಗಿರುವ ದೃಶ್ಯ ಇದು. ಈ ಕ್ಲಿಪ್ನಲ್ಲಿ ಪ್ರಯಾಣಿಕರೊಬ್ಬರು ರೈಲಿನಲ್ಲಿ ಕಾಣಿಸಿಕೊಂಡಿದ್ದ ಜಿರಳೆಯನ್ನು ನೀರಿನ ಖಾಲಿ ಬಾಟಲಿಯಲ್ಲಿ ಹಿಡಿಯಲು ಪ್ರಯತ್ನಿಸುವ ದೃಶ್ಯವಿದೆ. ಆದರೆ, ಈ ಜಿರಳೆ ಅಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಈ ವ್ಯಕ್ತಿ ಪ್ರಯತ್ನಪಟ್ಟಷ್ಟು ಇದು ಅತ್ತಿಂದಿತ್ತ ಓಡಾಡುತ್ತಿತ್ತು. ಹೀಗಾಗಿ, ಇತರ ಪ್ರಯಾಣಿಕರು ಕೂಡಾ ಜಿರಳೆಗೆ ಹೆದರಿ ಅತ್ತಿಂದಿತ್ತ ಓಡುತ್ತಿದ್ದರಿಂದ ರೈಲು ಬೋಗಿಯಲ್ಲಿ ಗದ್ದಲ ಉಂಟಾಗಿತ್ತು.
ಸದ್ಯ ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜತೆಗೆ, ಲಕ್ಷಾಂತರ ವೀಕ್ಷಣೆ ಗಳಿಸುವಲ್ಲಿಯೂ ಈ ವಿಡಿಯೋ ಯಶಸ್ವಿಯಾಗಿದೆ. ನೆಟ್ಟಿಗರು ಕೂಡಾ ಬಲು ಕುತೂಹಲದಿಂದಲೇ ಈ ದೃಶ್ಯವನ್ನು ನೋಡುತ್ತಿದ್ದಾರೆ. ಜತೆಗೆ, ಈ ಬಗ್ಗೆ ಕೆಲವರು ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ನೀವು ಕೂಡಾ ಈ ದೃಶ್ಯವನ್ನು ಬಲು ಕುತೂಹಲದಿಂದಲೇ ನೋಡಿರಬಹುದು.