ಇಂಟರ್ನೆಟ್ನಲ್ಲಿ ಪ್ರಾಣಿಗಳ ದೃಶ್ಯಗಳು ಕಾಣಸಿಗದ ದಿನಗಳೇ ಇಲ್ಲ. ಹೀಗೆ ಕಾಣಸಿಗುವ ಕೆಲವೊಂದು ದೃಶ್ಯಗಳು ಅಚ್ಚರಿ ಮೂಡಿಸುವ ಜತೆಗೆ ಮೊಗದಲ್ಲಿ ನಗುವರಳುವುದಕ್ಕೂ ಕಾರಣವಾಗುತ್ತವೆ. ಇದು ಕೂಡಾ ಅಂತಹದ್ದೇ ಒಂದು ದೃಶ್ಯ. ಮಹಿಳೆಯೊಬ್ಬರು ಕಾಂಗರೂಗಳ ಕಾಟಕ್ಕೆ ತಬ್ಬಿಬ್ಬಾದ ದೃಶ್ಯ ಇದು. ಗಾಲ್ಫ್ ಆಡುತ್ತಿದ್ದಾಗ ತನಗೆ ಎದುರಾದ ಅನಿರೀಕ್ಷಿತ ಪರಿಸ್ಥಿತಿ ಇವರಲ್ಲಿ ನಗು ತರಿಸಿತ್ತು...! ಆದರೆ, ಎದುರಿಗಿದ್ದ ದೊಡ್ಡ ತಂಡ ಮಾತ್ರ ತಮ್ಮದೇ ಖುಷಿಯಲ್ಲಿ ಕುಣಿಯುತ್ತಿತ್ತು...! ಈ `ತಂಡ'ದ ಖುಷಿ ಎಲ್ಲರಲ್ಲೂ ನಗು ತರಿಸಿತ್ತು. ಆಸ್ಟ್ರೇಲಿಯಾದ ಗಾಲ್ಫ್ ಕೋರ್ಸ್ನಲ್ಲಿ ಸೆರೆಯಾದ ದೃಶ್ಯವಿದು. ಹವ್ಯಾಸಿ ಗಾಲ್ಫ್ ಆಟಗಾರ್ತಿಯೊಬ್ಬರು ಇಲ್ಲಿ ಆಡುವುದಕ್ಕೆ ಸಿದ್ಧರಾಗುತ್ತಿದ್ದಂತೆಯೇ ಕಾಂಗರೂಗಳ ದೊಡ್ಡ ಗುಂಪೊಂದು ಇವರ ಎದುರಿಗೆ ಬಂದು ನಿಂತು ಅಚ್ಚರಿ ಮೂಡಿಸಿದ್ದವು. ಇದು ಈಕೆಯನ್ನು ಒಂದು ಕ್ಷಣ ದಿಗ್ಭ್ರಮೆಗೊಳಿಸಿತ್ತು. ವೆಂಡಿ ಪೊವಿಕ್ ಈ ಪರಿಸ್ಥಿತಿ ಎದುರಿಸಿದ್ದವರು.
ತನಗೆ ಎದುರಾದ ಈ ವಿಲಕ್ಷಣ ಪರಿಸ್ಥಿತಿಯ ವಿಡಿಯೋವನ್ನು ವೆಂಡಿ ಪೊವಿಕ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾಂಗರೂಗಳ ದೊಡ್ಡ ಹಿಂಡು ಹೀಗೆ ಒಟ್ಟಿಗೆ ಇಲ್ಲಿ ಕಾಣಿಸಿಕೊಂಡಿದ್ದನ್ನು ನಾನು ಹಿಂದೆ ಎಂದೂ ನೋಡಿರಲಿಲ್ಲ ಎಂದು ಇವರು ತಮ್ಮ ಕ್ಯಾಪ್ಶನ್ನಲ್ಲಿ ಉಲ್ಲೇಖಿಸಿದ್ದಾರೆ.
ವೆಂಡಿ ಪೊವಿಕ್ ಅವರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಂತೆಯೇ ಈ ಕ್ಲಿಪ್ ವಿವಿಧ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹರಿದಾಡುತ್ತಿದೆ. `ಗಾಲ್ಫ್ ಆಸ್ಟ್ರೇಲಿಯಾ' ಎಂಬ ಸರ್ಕಾರಿ ಕ್ರೀಡಾ ಸಂಸ್ಥೆ ಕೂಡಾ ಈ ವಿಡಿಯೋವನ್ನು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಇದಲ್ಲದೆ, ಇತರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಜತೆಗೆ, ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದ್ದು, ಎಲ್ಲರೂ ಬಲು ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.