ಆ್ಯಪ್ನಗರ

ಹೊಂಚು ಹಾಕಿ ದಾಳಿ ಮಾಡುವ ಮಂಗ! ದೇವಸ್ಥಾನಕ್ಕೆ ಬಂದ ಈ ಮಹಿಳೆಗೆ ಸಂಕಟ!

ಇದು ಕೋತಿಯೊಂದರ ಕುಚೇಷ್ಟೆ... ಈ ಮಂಗನ ಕಿತಾಪತಿಗೆ ದೇಗುಲಕ್ಕೆಂದು ಬಂದಿದ್ದ ಮಹಿಳೆಯೊಬ್ಬರು ಕಷ್ಟ ಅನುಭವಿಸಿದ್ದರು...

Vijaya Karnataka Web 24 Oct 2020, 5:48 pm
ಕೋತಿಗಳು ಕುಚೇಷ್ಟೆಗೆ ಫೇಮಸ್... ಚೇಷ್ಟೆ ಮಾಡದ ಕೋತಿಗಳನ್ನು ಎಲ್ಲಿಯೂ ಕಾಣಸಿಗಲು ಸಾಧ್ಯವೇ ಇಲ್ಲ... ಮಂಗಗಳು ಸುಮ್ಮನೆ ಕುಳಿತುಕೊಳ್ಳುವುದು ಬಹಳ ಕಡಿಮೆ... ಆದರೆ, ಇವುಗಳ ಚೇಷ್ಟೆ ಒಮ್ಮೊಮ್ಮೆ ಜನರನ್ನು ಸಂಕಷ್ಟಕ್ಕೀಡು ಮಾಡುತ್ತವೆ.
Vijaya Karnataka Web Image by Andre Mouton from Pixabay
| Representative image | Image by Andre Mouton from Pixabay


ಸಾಮಾಜಿಕ ಮಾಧ್ಯಮಗಳಲ್ಲಿ ಕೋತಿಗಳ ಕುಚೇಷ್ಟೆಯ ಹಲವು ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಈ ಎಲ್ಲಾ ವಿಡಿಯೋಗಳು ನಮ್ಮಲ್ಲಿ ಪಕ್ಕಾ ನಗು ತರುತ್ತದೆ. ಇದು ಕೂಡಾ ಅಂತಹದ್ದೇ ಒಂದು ವಿಡಿಯೋ. ಈ ಕೋತಿಯ ಕುಚೇಷ್ಟೆ, ಹೊಂಚು ಹಾಕಿ ದಾಳಿ ಮಾಡುವ ರೀತಿ ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.

Also Read : ಆಂಬ್ಯುಲೆನ್ಸ್‌ನಲ್ಲಿ ಮಲಗಿಕೊಂಡು ಸಾಗುತ್ತಿರುವ ರಾವಣ! : ನೆಟ್ಟಿಗರಿಂದ ಬಲು ತಮಾಷೆಯ ಪ್ರತಿಕ್ರಿಯೆ!

ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋದಾಗ ಕೋತಿಗಳು ಕಾಟ ಕೊಡುತ್ತವೆ. ಕೈಯಲ್ಲಿದ್ದ ಹಣ್ಣು ಪ್ರಸಾದವನ್ನು ಕಸಿದು ಪರಾರಿಯಾಗುತ್ತವೆ. ಆದರೆ, ಈ ಕೋತಿ ಇನ್ನೂ ಡಿಫ್ರೆಂಟ್. ಇದು ದಾಳಿ ಮಾಡುವ ಶೈಲಿಯೇ ವಿಭಿನ್ನ. ಹೊಂಚು ಹಾಕಿ ಹಿಂದಿನಿಂದ ಬಂದು ದಾಳಿ ಮಾಡುವುದರಲ್ಲಿ ಇದು ಎಕ್ಸ್‌ಪರ್ಟ್. ಯಾವುದಾದರೂ ವಸ್ತುಗಳನ್ನು ಜನರಿಂದ ಕಸಿದುಕೊಂಡು ಹೋಗುವ ಈ ಮಂಗ, ತಿನ್ನಲು ತನಗೆ ಪ್ರಸಾದ ನೀಡಿದ ಬಳಿಕವೇ ಕಸಿದುಕೊಂಡ ವಸ್ತುಗಳನ್ನು ವಾಪಸ್ ಕೊಡುವುದು...!

Also Read : ಸಾಮಾಜಿಕ ಮಾಧ್ಯಮಗಳಿಂದಾಗಿ ಬೆಳಗಿತು ಮತ್ತೋರ್ವ ವೃದ್ಧ ದಂಪತಿಯ ಬದುಕು : ಇದು ಹೃದಯಸ್ಪರ್ಶಿ ದೃಶ್ಯ

ಅದೊಂದು ದೇವಸ್ಥಾನ. ಇಲ್ಲಿಗೆ ಬಂದಿದ್ದ ಮಹಿಳೆ ತಮ್ಮ ಮೊಬೈಲ್ ಫೋನ್‌ನಲ್ಲಿ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದರು. ಇನ್ನೊಂದು ಕಡೆ ಖತರ್ನಾಕ್ ಕೋತಿಯೊಂದು ದಾಳಿಗೆ ಸಿದ್ಧವಾಗಿತ್ತು. ಈ ವಿಷಯ ಪಾಪದ ಆ ಮಹಿಳೆಗೆ ಗೊತ್ತಿರಲಿಲ್ಲ... ಸರಿಯಾದ ಸಮಯಕ್ಕೆ ಕಾದು ಹೊಂಚು ಹಾಕುತ್ತಾ ಬರುತ್ತಿದ್ದ ಕೋತಿ ಹಿಂದಿನಿಂದ ಬಂದು ಮಹಿಳೆಯ ಕನ್ನಡಕ್ಕವನ್ನು ಎಳೆದು ಎಸ್ಕೇಪ್ ಆಗಿತ್ತು. ಹೀಗೆ ಎಸ್ಕೇಪ್ ಆದ ಕೋತಿ ತನ್ನ ಸುರಕ್ಷಿತ ಜಾಗಕ್ಕೆ ಹೋಗಿ ಕುಳಿತುಕೊಂಡಿತ್ತು. ಆಗ ಈ ಮಹಿಳೆಯ ರಕ್ಷಣೆಗೆ ಅಲ್ಲೇ ಇದ್ದವರೊಬ್ಬರು ಬಂದಿದ್ದರು. ಈ ಕೋತಿಯ ಬುದ್ಧಿ ಗೊತ್ತಿದ್ದ ಆ ವ್ಯಕ್ತಿಗೆ ಕೋತಿಗೆ ಪ್ರಸಾದದ ಕಟ್ಟನ್ನು ಎಸೆದಿದ್ದರು. ಈ ಕಟ್ಟು ಪಡೆದ ಕೋತಿ ಕನ್ನಡಕ್ಕವನ್ನು ಕೆಳಗೆ ಎಸೆದಿತ್ತು....!


Also Read : ಒಂದೇ ಉಂಗುರದಲ್ಲಿ ಅತೀ ಹೆಚ್ಚು ವಜ್ರಗಳ ಬಳಕೆ : ಗಿನ್ನಿಸ್ ದಾಖಲೆ ಬರೆದ ಅಪೂರ್ವ ಆಭರಣ

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೋತಿಯ ಈ ಐಡಿಯಾ ನೋಡಿ ನೆಟ್ಟಿಗರು ಒಂದು ಕ್ಷಣ ಆಶ್ಚರ್ಯಚಕಿತರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ