ಆ್ಯಪ್ನಗರ

ತೋಳಗಳ ದಾಳಿಯಿಂದ ತನ್ನ ಕಂದಮ್ಮಗಳನ್ನು ರಕ್ಷಿಸುವ ತಾಯಿ ಕರಡಿ : ಇದು ಅದ್ಭುತ ವಿಡಿಯೋ

ದಾಳಿ ಮಾಡುತ್ತಿರುವ ತೋಳಗಳ ದೊಡ್ಡ ಗುಂಪಿನಿಂದ ತಾಯಿ ಕರಡಿ ತನ್ನ ಎರಡು ಮರಿಗಳನ್ನು ಕಾಪಾಡಿಕೊಳ್ಳುವ ಅದ್ಭುತ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ತಾಯಿ ಪ್ರೀತಿಗೆ ಎಲ್ಲರೂ ಫಿದಾ ಆಗಿದ್ದಾರೆ.

Vijaya Karnataka Web 12 Aug 2020, 10:14 am
ತಾಯಿಯ ಪ್ರೀತಿ ಎಂದರೇನೇ ಹಾಗೆ... ಪದಗಳಿಗೆ ನಿಲುಕದ ಪ್ರೀತಿಯದು... ಅಮ್ಮನ ಮಮತೆಯ ಆಳ, ಅಗಲವನ್ನು ಮಾಪನ ಮಾಡಲು ಸಾಧ್ಯವೇ ಇಲ್ಲ. ಅದು ಆಕಾಶಕ್ಕಿಂತಲೂ ವಿಶಾಲ. ಅಮ್ಮನ ಮಮತೆ ಏನು ಎಂಬುದನ್ನು ತೋರಿಸುವ ವಿಡಿಯೋ ಇದು.
Vijaya Karnataka Web bear
| Screengrab from video | Courtesy : Yellowstone Wolf Tracker/Facebook


ಒಮ್ಮೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ದೃಶ್ಯಗಳು ನಮ್ಮೆಲ್ಲರನ್ನೂ ಅರೆಕ್ಷಣದಲ್ಲಿ ಮಂತ್ರಮುಗ್ಧರನ್ನಾಗಿಸುತ್ತದೆ. ಇದು ಕೂಡಾ ಅಂತಹದ್ದೇ ವಿಡಿಯೋ. ತಾಯಿ ತನ್ನ ಕಂದಮ್ಮಗಳನ್ನು ರಕ್ಷಿಸಲು ನಡೆಸುವ ಹೋರಾಟದ ದೃಶ್ಯಗಳಿವು.

Also Read : 20 ವರ್ಷಗಳ ನಂತರ ಕುಟುಂಬದೊಂದಿಗೆ ಸೇರಿದ ವ್ಯಕ್ತಿ! : ಇದು ಹೃದಯಸ್ಪರ್ಶಿ ದೃಶ್ಯ

ಅದೊಂದು ತೋಳಗಳ ದೊಡ್ಡ ಗುಂಪು ತಾಯಿ ಕರಡಿ ಮೇಲೆ ದಾಳಿ ಮಾಡಿತ್ತು. ತಾನು ಒಂಟಿಯಾಗಿದ್ದರೆ ಅಲ್ಲೇ ತೋಳಗಳ ಮೇಲೆ ಕರಡಿ ದಾಳಿ ಮಾಡುತ್ತಿರುತ್ತಿತ್ತೋ ಏನೋ. ಆದರೆ, ಆಗ ಅವಳೊಂದಿಗೆ ತನ್ನ ಕಂದಮ್ಮಗಳಿದ್ದರು. ಹೀಗಾಗಿ, ತೋಳಗಳ ಮೇಲಿನ ದಾಳಿಗಿಂತ ಕಂದಮ್ಮಗಳ ರಕ್ಷಣೆಯೇ ಅವಳ ಮೊದಲ ಆದ್ಯತೆ ಆಗಿತ್ತು. ಇದೇ ಕಾರಣಕ್ಕೆ ತೋಳಗಳೊಂದಿಗೆ ಹೋರಾಡುತ್ತಲೇ ಅವಳು ಓಡಿದ್ದಳು. ಅಲ್ಲದೆ ಅಲ್ಲೇ ನಿಂತು ಮರಿಗಳನ್ನು ತನ್ನತ್ತ ನಿಲ್ಲಿಸಿ ಎರಡು ಕಾಲಿನಲ್ಲಿ ನಿಂತು ಸುತ್ತಲೂ ನೋಡಿದಳು. ಅವಕಾಶ ಸಿಕ್ಕಾಗ ತೋಳದ ಮೇಲೆಯೇ ದಾಳಿ ಮಾಡಿದ್ದಳು. ಬಹುಶಃ ತೋಳಗಳಿಗೂ ತಮ್ಮ ಕೈಯಲ್ಲಿ ಈ ಕರಡಿಯನ್ನು ಸೋಲಿಸಲಾಗದು ಎಂದೆನಿತೋ ಏನೋ... ಹೀಗಾಗಿ, ಅವುಗಳೂ ಈ ತಾಯಿಯ ಶಕ್ತಿಯ ಎದುರು ಸುಮ್ಮನಾಗಿ ಬಿಟ್ಟಿದ್ದವು.

Also Read : `ಶಾಲೆ ಮತ್ತೆ ಶುರುವಾಗುವುದು ಬೇಡ' : ಮುಗ್ಧ ಪುಟಾಣಿ ಅಳುವ ಮುದ್ದಾದ ವಿಡಿಯೋ ವೈರಲ್


Also Read : ಅಬ್ಬಬ್ಬಾ...! ಈ ಫೇಸ್‌ ಮಾಸ್ಕ್‌ನ ಬೆಲೆ 11 ಕೋಟಿ ರೂಪಾಯಿ...! : ವಿಡಿಯೋ ವೈರಲ್

ಸದ್ಯ ಫೇಸ್‌ಬುಕ್‌ನಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದೆ. ತನ್ನ ಕರುಳಬಳ್ಳಿಗಳನ್ನು ರಕ್ಷಿಸಲು ಹೋರಾಡುವ ಈ ತಾಯಿ ಕರಡಿ ಮಾತೃಪ್ರೇಮವನ್ನು ಇಲ್ಲಿ ಎಲ್ಲರೂ ಕೊಂಡಾಡಿದ್ದಾರೆ. ಇದು ಯುಎಸ್ಎನ ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನದಲ್ಲಿ ಸೆರೆಯಾದ ದೃಶ್ಯ. ಟೇಲರ್ ಬ್ಲಾಂಡ್ ಎಂಬವರು ಈ ಅಪೂರ್ವ ದೃಶ್ಯವನ್ನು ಸೆರೆಹಿಡಿದವರು. ಸದ್ಯ ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ತಾಯಿ ಕರಡಿಯ ಈ ಪ್ರೀತಿಯನ್ನು ಕೊಂಡಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ