ಆ್ಯಪ್ನಗರ

`ನೀರಲ್ಲಿ ಜಾಸ್ತಿ ಆಟ ಆಡಬೇಡ ಅಂತ ಹೇಳಿದ್ದಲ್ವಾ?': ನೀರಿನ ಟಬ್‌ ಎತ್ತಿ ಬಿಸಾಕಿದ ತಾಯಿ ಆನೆ!

ತುಂಬಾ ಹೊತ್ತು ನೀರಿನ ಟಬ್‌ನಲ್ಲಿ ಮರಿ ಆಟ ಆಡುತ್ತಿದೆ ಎಂದು ಸಿಟ್ಟಾದ ತಾಯಿ ಆನೆ ಟಬ್ ಎಳೆದು ಎಸೆದ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ಎಲ್ಲರ ಬಾಲ್ಯವನ್ನೂ ಒಂದು ಕ್ಷಣ ನೆನಪಿಸುವಂತಿದೆ.

Vijaya Karnataka Web 13 Jul 2020, 10:11 am
ಬಹುಶಃ ಇಲ್ಲರಿಗೂ ಒಂದಲ್ಲ ಒಂದು ಸಲ ಆಗಿರುವ ಅನುಭವ ಇದು. ಈ ವಿಡಿಯೋ ನೋಡಿದರೆ ನಿಮಗೆ ನಿಮ್ಮ ಬಾಲ್ಯ ನೆನಪಾಗಬಹುದು. ಎಷ್ಟು ಹೇಳಿದರೂ ಕೇಳದೆ ನೀವು ಆಟ ಆಡುತ್ತಾ ಕುಳಿತಿದ್ದಾಗ ಅಲ್ಲಿಗೆ ಬರುವ ಅಮ್ಮ ಆಟಿಕೆಗಳನ್ನು ಎಷ್ಟೋ ಸಲ ಎತ್ತಿ ಬಿಸಾಕಿರಬಹುದು. ಇದು ಕೂಡಾ ಅಂತಹದ್ದೇ ಒಂದು ವಿಡಿಯೋ.
Vijaya Karnataka Web elephant
| Screengrab from video | Courtesy : Susanta Nanda IFS/Twitter


ನೀರಿನಲ್ಲಿ ಆಟ ಆಡುವುದೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ...? ದೊಡ್ಡವರಾಗಿ ಬೆಳೆದ ಬಳಿಕವೂ ನಮಗೆ ನೀರಿನಲ್ಲಿ ಆಟ ಆಡಲು ಖುಷಿಯಾಗುತ್ತದೆ. ಇನ್ನು ಬಾಲ್ಯದಲ್ಲಿ ಕೇಳುವ ಹಾಗೆಯೇ ಇಲ್ಲ. ಕನಿಷ್ಟ ಮಳೆಯಲ್ಲಿ ನೆನೆದಾದರೂ ಜನ ಖುಷಿ ಪಟ್ಟಿರುತ್ತಾರೆ. ಹಾಗಂತ, ನೀರಿನಲ್ಲಿ ಆಟ ಆಡುವುದನ್ನು ಬರೀ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳೂ ಇಷ್ಟಪಡುತ್ತವೆ. ಅದರಲ್ಲೂ ಆನೆಗಳಿಗೆ ನೀರಿನಲ್ಲಿ ಆಟ ಆಡುವುದೆಂದರೆ ಬಲು ಇಷ್ಟ. ಒಂದೊಮ್ಮೆ ಆನೆಗಳು ಆಟ ಆಡಲೆಂದು ನೀರಿಗೆ ಇಳಿದರೆ ಅವುಗಳಿಗೆ ಮೇಲೆ ಬರುವುದಕ್ಕೇ ಇಷ್ಟ ಇರುವುದಿಲ್ಲ. ಮರಿಯಾನೆಗಳಂತೂ ನೀರಿನ ತೊಟ್ಟಿ ಸಿಕ್ಕರೆ ಆಟದಲ್ಲೇ ಮಗ್ನವಾಗಿ ಹೋಗುತ್ತವೆ. ಈ ಖುಷಿಯನ್ನು ನೋಡುವುದೇ ಒಂದು ಚೆಂದ.

Also Read : ಮನೆಗೆ ಹೋಗುವ ದಾರಿ ಸಿಗದೆ ಸಹಾಯ ಕೇಳಿ ಕ್ಲಿನಿಕ್ ಬಾಗಿಲು ತಟ್ಟಿದ ಶ್ವಾನ...!

ಅಂತೆಯೇ, ಈ ಪುಟಾಣಿ ಕೂಡಾ ಟಬ್ ಕಂಡ ತಕ್ಷಣ ನೀರಿಗೆ ಇಳಿದಿತ್ತು. ಒಂದಷ್ಟು ಹೊತ್ತು ಆಟ ಕೂಡಾ ಆಗಿತ್ತು. ಅಮ್ಮ ಕೂಡಾ ಪಕ್ಕದಲ್ಲೇ ಇದ್ದಳು. ಆದರೆ, ಅಮ್ಮನಿಗೆ ತನ್ನ ಮಗು ತುಂಬಾ ಹೊತ್ತು ನೀರಿನಲ್ಲಿ ಆಟ ಆಡುತ್ತಿರುವುದು ಇಷ್ಟವಿರಲಿಲ್ಲ ಕಾಣುತ್ತದೆ. ಅದಕ್ಕೆ ಸ್ವಲ್ಪ ಹೊತ್ತು ನೋಡಿದಳು. ಬಳಿಕ ತನ್ನ ಕಂದನನ್ನು ಟಬ್‌ನಿಂದ ಸುರಕ್ಷಿತವಾಗಿ ಹೊರಗೆಳೆದು ಸಿಟ್ಟಿನಿಂದ ಟಬ್‌ ಅನ್ನು ಎತ್ತಿ ಎಸೆದಿದ್ದಳು...! ಅಮ್ಮ ಎಂದರೆ ಅಮ್ಮ... ಬಹುಶಃ ಬಹುತೇಕರಿಗೆ ಈ ರೀತಿಯ ಅನುಭವ ಆಗಿರಬಹುದು... ಸದ್ಯ ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಎಲ್ಲರೂ ಬಲು ಕುತೂಹಲದಿಂದಲೇ ನೋಡಿ ಖುಷಿ ಪಟ್ಟಿದ್ದಾರೆ.

Also Read : ಫುಟ್ಬಾಲ್ ಟೀಮ್ ಗೋಲ್ ಹೊಡೆದಾಗ ಸಂಭ್ರಮಿಸುವ ಪುಟಾಣಿ : ಇದು ಅದ್ಭುತ ವಿಡಿಯೋ


Also Read : ಜೋಕಾಲಿಯನ್ನು ಮುಟ್ಟಿ ಬಿದ್ದಂತೆ ನಟಿಸುವ ಕಂದ : ಇದು ಖುಷಿ ಕೊಡುವ ವಿಡಿಯೋ

ಈ ವಿಡಿಯೋ ನೋಡಿದಾಗ `ನೀರಲ್ಲಿ ಜಾಸ್ತಿ ಆಟ ಆಡ್ಬೇಡ. ಶೀತ ಆಗುತ್ತದೆ' ಎಂದು ತಾಯಿ ಆನೆ ಹೇಳುತ್ತಿದೆಯೋ ಏನೋ ಎಂಬಂತೆ ಕಾಣುತ್ತದೆ. ಬಹುತೇಕ ಎಲ್ಲಾ ಅಮ್ಮಂದಿರಿಗೂ ಮಕ್ಕಳ ಸುರಕ್ಷತೆ, ಆರೋಗ್ಯದ ಬಗ್ಗೆ ಕಾಳಜಿ ಇರುತ್ತದೆ. ಬಹುಶಃ ಈ ತಾಯಿ ಕೂಡಾ ಅದೇ ಕಾರಣಕ್ಕೆ ಟಬ್ ದೂರ ಎಸೆದಿದ್ದಳೋ ಏನೋ... ಅಲ್ವಾ...?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ