ಆ್ಯಪ್ನಗರ

ಕೃತಕ ಸಾಧನದ ಸಹಾಯದಿಂದ ಮೊದಲ ಬಾರಿಗೆ ಓಡಾಡಿದ ಶ್ವಾನ: ಹೇಗಿತ್ತು ಗೊತ್ತಾ ಆ ಸಂಭ್ರಮ...?

ಇದೊಂದು ಹೃದಯಸ್ಪರ್ಶಿ ದೃಶ್ಯ. ಮುದ್ದು ಶ್ವಾನದ ಈ ಸಡಗರ ಖಂಡಿತಾ ಅರೆಕ್ಷಣದಲ್ಲಿ ಸೆಳೆದು ಬಿಡುತ್ತದೆ.

Vijaya Karnataka Web 26 Sep 2020, 6:50 pm
ಶ್ವಾನಗಳು ಎಲ್ಲರ ಮನೆಯ ಮುದ್ದಿನ ಪ್ರಾಣಿಗಳು. ಬಹುತೇಕ ಮನೆಗಳಲ್ಲಿ ಮುದ್ದಿನ ಶ್ವಾನಕ್ಕೆ ಮನೆಯ ಸದಸ್ಯರ ಸ್ಥಾನವೇ ಇದೆ. ಮನೆಯವರ ಪ್ರೀತಿಯಿಂದ ಈ ಶ್ವಾನಗಳು ಬೆಳೆಯುತ್ತವೆ. ಜೊತೆಗೆ, ಮನೆಯವರಿಗೂ ಪ್ರೀತಿ ನೀಡುತ್ತವೆ. ಇಂತಹ ಮುದ್ದಿನ ಗೆಳೆಯರ ಜೊತೆಗಿನ ಒಡನಾಟವೇ ಸುಂದರ. ಹೀಗೆ ಮನೆಯಲ್ಲಿ ಪ್ರೀತಿಯಿಂದ ಬೆಳೆಯುವ ಶ್ವಾನಗಳಿಗೆ ಸ್ವಲ್ಪ ನೋವಾದರೂ ಮಾಲಿಕರಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಮಾಲಿಕರು ತಮ್ಮ ಶ್ವಾನಗಳ ಕಷ್ಟಕ್ಕೆ ಬಹುಬೇಗ ಸ್ಪಂದಿಸುತ್ತಾರೆ. ಶ್ವಾನಗಳ ಕಷ್ಟ ನೀಗಿಸಲು ಪ್ರಯತ್ನಿಸುತ್ತಾರೆ. ಹೀಗಾಗಿ, ನೋವಿನಲ್ಲಿದ್ದರೂ ಮುದ್ದು ಶ್ವಾನಗಳು ಖುಷಿ ಕಾಣುತ್ತವೆ. ಇಂತಹ ಅನೇಕ ಅಪೂರ್ವ ದೃಶ್ಯಗಳು ಈಗಾಗಲೇ ವೈರಲ್ ಆಗಿವೆ. ಈಗ ಮತ್ತೊಂದು ಖುಷಿ ಕೊಡುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈ ದೃಶ್ಯವನ್ನು ನೋಡಿದಾಗ ಹೃದಯ ತುಂಬಿ ಬರುತ್ತದೆ.
Vijaya Karnataka Web dog
| Screengrab from video | Courtesy : Rex Chapman/Twitter


Also Read : ಟ್ಯಾಂಕ್ ಸಿಡಿದು 50 ಸಾವಿರ ಲೀಟರ್ ರೆಡ್ ವೈನ್ ಪೋಲು! : ಅಳುತ್ತಿದ್ದಾರೆ ವೈನ್‌ಪ್ರಿಯರು!

ಇದು ಶ್ವಾನವೊಂದರ ಖುಷಿಯ ದೃಶ್ಯ. ಪಾರ್ಶ್ವವಾಯು ಪೀಡಿತವಾಗಿದ್ದ ಈ ಶ್ವಾನ ತನ್ನ ಹಿಂಗಾಲಿನ ಬಲವನ್ನೇ ಕಳೆದುಕೊಂಡಿತ್ತು. ಹೀಗಾಗಿ, ಈ ಮುದ್ದಿನ ಶ್ವಾನಕ್ಕೆ ತಾನಂದುಕೊಂಡಂತೆ ಖುಷಿಯಿಂದ ಓಡಾಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಮರುಗಿದ್ದ ಮನೆ ಮಾಲಿಕರು ಈ ಶ್ವಾನಕ್ಕೆ ಚಕ್ರಗಳುಳ್ಳ ಕೃತಕ ಸಾಧನವನ್ನು ತಂದು ಅಳವಡಿಸಿದ್ದರು. ಈ ಸಾಧನ ಹಾಕಿಕೊಂಡಾಗ ಈ ಶ್ವಾನದ ಖುಷಿ ಹೇಗಿತ್ತು ಗೊತ್ತಾ...? ಖಂಡಿತಾ ಅದನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ.

Also Read : Viral Video : ಅಬ್ಬಬ್ಬಾ...! ಈತ ತಾಳೆಮರದ ತುದಿ ಕತ್ತರಿಸಿದ ರೀತಿಯೇ ಭಯ ಹುಟ್ಟಿಸುವಂತಿದೆ...!

ಅಮೇರಿಕಾದ ಬಾಸ್ಕೆಟ್ ಬಾಲ್ ಮಾಜಿ ಆಟಗಾರ ರೆಕ್ಸ್‌ ಚಾಪ್ಮನ್ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 56 ಸೆಕೆಂಡುಗಳ ಈ ವಿಡಿಯೋ ಕ್ಲಿಪ್‌ನಲ್ಲಿ ಮುದ್ದು ಶ್ವಾನ ಖುಷಿಯಿಂದ ಕುಣಿಯುವ ದೃಶ್ಯವಿದೆ. ತನ್ನ ಕೃತಕ ಕಾಲುಗಳನ್ನು ಕಂಡ ಇವಳ ಖುಷಿಗೆ ಪಾರವೇ ಇಲ್ಲ. ಈ ಚಕ್ರವನ್ನು ಕಾಲಿಗೆ ಕಟ್ಟಿಕೊಂಡು ಈ ಮುದ್ದು ಶ್ವಾನ ಅತ್ತಿಂದಿತ್ತ ಓಡಾಡುವುದನ್ನು ನೋಡುವುದೇ ಒಂದು ಖುಷಿಯ ಕ್ಷಣ.


Also Read : ಮದುವೆಯ ಡ್ರೆಸ್‌ನಿಂದಾಗಿ 31 ವರ್ಷದ ಬಳಿಕ ಒಂದಾದ ಇಬ್ಬರು ಮಹಿಳೆಯರು! : ಇದೊಂದು ವಿಶಿಷ್ಟ ಕತೆ


ಸದ್ಯ ಈ ಅಪೂರ್ವ ವಿಡಿಯೋ ಎಲ್ಲರ ಕಣ್ಣಾಲಿಗಳು ತುಂಬಿ ಬರುವಂತೆ ಮಾಡಿದೆ. ಅಲ್ಲದೆ, ಈ ವಿಡಿಯೋಗೆ ಎಲ್ಲರೂ ಮೆಚ್ಚುಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ