ಆ್ಯಪ್ನಗರ

ಈ ಅಧಿಕಾರಿಯ ಮಾನವೀಯತೆಗೆ ಶಹಬ್ಬಾಸ್ ಹೇಳಲೇಬೇಕು...

ಪೊಲೀಸ್ ಅಧಿಕಾರಿಯೊಬ್ಬರು ಕೋತಿಗೆ ಬಾಳೆಹಣ್ಣು ತಿನ್ನಿಸುವ ವಿಡಿಯೋ ವೈರಲ್ ಆಗುತ್ತಿದೆ. ಈ ಪ್ರೀತಿಯನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.

Vijaya Karnataka Web 18 Apr 2020, 12:19 pm
ಸಹಾಯ ಮಾಡುವಾಗ ಸಿಗುವ ನೆಮ್ಮದಿ ಅಪೂರ್ವ... ಹಸಿದ ಜೀವಕ್ಕೆ ಆಹಾರ ಕೊಟ್ಟಾಗಲೂ ಸಿಗುವ ಅನುಭವ ಅದ್ಭುತ... ಒಂದು ಹಿಡಿ ಪ್ರೀತಿ ಮನಸ್ಸಿಗೆ ಅದೆಷ್ಟೋ ಖುಷಿ ಕೊಡುತ್ತದೆ. ಅದಕ್ಕೆ ಸಾಕ್ಷಿ ಈ ವಿಡಿಯೋ.
Vijaya Karnataka Web monkey
| Screengrab from video | Courtesy : Khushboo Soni/Twitter


Also Read : ಕೊರೊನಾ ಸೋಂಕಿತರ ಆರೈಕೆಯ ಪಣ : ಆಸ್ಪತ್ರೆಯಲ್ಲಿ ದುಡಿಯುತ್ತಿದ್ದಾರೆ ರಾಜಕುಮಾರಿ!


ಖಂಡಿತಾ ಈ ಪ್ರೀತಿಯನ್ನು ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ಈ ಪ್ರೀತಿ, ಸ್ನೇಹ ಅನನ್ಯ. ಮಾಸ್ಕ್ ಧರಿಸಿರುವ ಈ ಪೊಲೀಸ್ ಅಧಿಕಾರಿ ಒಂದು ಕೈಯಲ್ಲಿ ಫೋನ್ ಹಿಡಿದು ಮಾತನಾಡುತ್ತಿದ್ದರೆ, ಇನ್ನೊಂದು ಕೈಯಲ್ಲಿ ಬಾಳೆಹಣ್ಣನ್ನು ಹಿಡಿದು ಕೋತಿಗೆ ತಿನ್ನಿಸುತ್ತಿದ್ದಾರೆ. ಕೋತಿಯೂ ನಿರ್ಭೀತಿಯಿಂದ ಬಾಳೆಹಣ್ಣನ್ನೂ ತಿನ್ನುತ್ತಿದೆ. ಪೊಲೀಸ್ ಅಧಿಕಾರಿಯೂ ಕೋತಿ ತೊಂದರೆ ಮಾಡಬಹುದು ಎಂಬ ಯಾವುದೇ ಆತಂಕವಿಲ್ಲದೆ ಕುಳಿತಿದ್ದಾರೆ. ಅದೇ ಈ ಅಪೂರ್ವ ಸ್ನೇಹದ ಗಟ್ಟಿತನ... ಸಂಬಂಧಗಳ ನಡುವೆ ದೃಢ ನಂಬಿಕೆ ಇದ್ದರಷ್ಟೇ ಬದುಕು ಸಿಹಿಯಾಗಿರುತ್ತದೆ ಎಂಬುದಕ್ಕೂ ಸಾಕ್ಷಿ ಇದು.

Also Read : ಲಾಕ್‌ಡೌನ್ ಸಮಯದ ಕೌಟುಂಬಿಕ ದೌರ್ಜನ್ಯಕ್ಕೆ ನೃತ್ಯದ ರೂಪ ಕೊಟ್ಟ ಕಲಾವಿದೆ

ಸದ್ಯ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನ ಅನಿವಾರ್ಯವಾಗಿ ಕಷ್ಟ ಎದುರಿಸುತ್ತಿದ್ದಾರೆ. ಮನುಷ್ಯರಾದರೂ ಕಷ್ಟಪಟ್ಟಾದರೂ ಊಟಕ್ಕೆ ಏನಾದರೂ ವ್ಯವಸ್ಥೆ ಮಾಡಿಕೊಳ್ಳಬಹುದು. ಆದರೆ, ಮುಗ್ಧ ಪ್ರಾಣಿಗಳು ಹೊಟ್ಟೆಗಿಲ್ಲದೆ ನರಳಾಡುತ್ತಿವೆ. ಇಂತಹ ಸಂದರ್ಭದಲ್ಲಿ ಹಲವರು ಪ್ರಾಣಿಗಳ ಕಷ್ಟಕ್ಕೆ ಸ್ಪಂದಿಸಿ ಆಹಾರಗಳನ್ನು ಕೊಡುತ್ತಿದ್ದಾರೆ. ಹೀಗೆ ಹಸಿದ ಪ್ರಾಣಿಗಳಿಗೆ ಆಹಾರ ಕೊಡುವಾಗ ಸಿಗುವ ನೆಮ್ಮದಿ ಅದ್ಭುತ ಅನುಭವಗಳಲ್ಲಿ ಒಂದು. ಈ ವಿಡಿಯೋ ನೋಡುವಾಗಲೂ ಆ ನೆಮ್ಮದಿ ಹೇಗಿರುತ್ತದೆ ಎಂದು ಅರ್ಥವಾಗುತ್ತದೆ.

Also Read : ಸಿಂಹದ ಗರ್ಜನೆ ಕೇಳಿದ್ದೀರಿ, ಗೊರಕೆ ಸದ್ದು ಕೇಳಿದ್ದೀರಾ? ಅದು ಇನ್ನೂ ಭಯಾನಕ!

ಜಗತ್ತಿನ ವೇಗದೊಂದಿಗೆ ಓಡುವ ಜನರ ಜೀವನ ಈಗ ಯಾಂತ್ರಿಕವಾಗುತ್ತಿದೆ. ಸಂಬಂಧಗಳು ದೂರವಾಗುತ್ತಿವೆ. ಹೀಗಾಗಿ, ಕೆಲವೊಮ್ಮೆ ಬದುಕಿನಲ್ಲಿ ಇಂತಹ ಖುಷಿಗಳನ್ನೂ ನಾವು ಅನುಭವಿಸುವುದಕ್ಕೇ ಆಗುವುದಿಲ್ಲ... ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಎಲ್ಲರೂ ಈ ಪೊಲೀಸ್ ಅಧಿಕಾರಿ ತೋರುತ್ತಿರುವ ಪ್ರಾಣಿ ಪ್ರೀತಿಗೆ ಶಹಬ್ಬಾಸ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ