ಆ್ಯಪ್ನಗರ

ಕೊರೊನಾ ವಿರುದ್ಧದ ಯುದ್ಧದಲ್ಲಿ ಗೆದ್ದ ಸಹೋದರಿ : ತಂಗಿಯ ಟಪ್ಪಾಂಗುಚ್ಚಿ ಸ್ಟೆಪ್ಸ್‌ ವೈರಲ್

ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ಬಂದ ಅಕ್ಕನನ್ನು ತಂಗಿ ಸ್ವಾಗತಿಸುವ ಅದ್ಭುತ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. ಪುಣೆ ಯುವತಿಯ ಜಬರ್‌ದಸ್ತ್‌ ಟಪ್ಪಾಂಗುಚ್ಚಿ ಡಾನ್ಸ್‌ಗೆ ಈಗ ಎಲ್ಲರೂ ಫಿದಾ ಆಗಿದ್ದಾರೆ.

Vijaya Karnataka Web 20 Jul 2020, 7:16 pm
ಕೊರೊನಾ ವೈರಸ್ ಎಂಬ ಪದ ಕೇಳಿದ ತಕ್ಷಣ ಅದೊಂದು ಅವ್ಯಕ್ತ ಭಯ ಅರೆಕ್ಷಣದಲ್ಲಿ ಮನಸ್ಸಿನ ತುಂಬಾ ಆವರಿಸಿ ಬಿಡುತ್ತದೆ. ಮನೆಯಿಂದ ಹೊರಗೆ ಹೋಗುವಾಗಲೂ ಬಲು ಎಚ್ಚರಿಕೆಯಿಂದ ಇರುವಂತೆ ಮಾಡಿದೆ ಈ ವೈರಸ್. ಹೀಗಾಗಿ, ಒಂದೊಮ್ಮೆ ಕೊರೊನಾ ಸೋಂಕಿಗೊಳಗಾದವರು ಸಂಪೂರ್ಣ ಗುಣಮುಖರಾಗಿ ಬಂದರೆ ಖಂಡಿತಾ ಆ ಇಡೀ ಏರಿಯಾದಲ್ಲಿ ಯುದ್ಧ ಗೆದ್ದ ಸಂಭ್ರಮದ ವಾತಾವರಣವಿರುತ್ತದೆ. ಎಲ್ಲರೂ ಬಲು ಅಕ್ಕರೆಯಿಂದಲೇ ಕೊರೊನಾ ಸೋಂಕಿನಿಂದ ಪಾರಾದವರನ್ನು ಸ್ವಾಗತಿಸುತ್ತಾರೆ. ಅದರಲ್ಲೂ ಮನೆಯಲ್ಲಂತೂ ಹಬ್ಬಕ್ಕಿಂತಲೂ ದೊಡ್ಡ ಸಂಭ್ರಮ ತುಂಬಿರುತ್ತದೆ. ಇದು ಕೂಡಾ ಅಂತಹದ್ದೇ ಒಂದು ಸಂಭ್ರಮದ ವಿಡಿಯೋ.
Vijaya Karnataka Web dance
| Screengrab from video | Courtesy : Dipanshu Kabra/Twitter


Also Read : ಬಟರ್ ಚಿಕನ್ ಆಸೆಗೆ 32 ಕಿ.ಮೀ ದೂರ ಬಂದು 1.23 ಲಕ್ಷ ರೂ. ದಂಡ ತೆತ್ತ ವ್ಯಕ್ತಿ...!

ಸದ್ಯ ಯುವತಿಯೊಬ್ಬರ ಡಾನ್ಸ್‌ನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ತನ್ನ ಸಹೋದರಿ ಕೊರೊನಾ ಮುಕ್ತರಾಗಿ ಮನೆಗೆ ಬಂದ ಸಂಭ್ರಮದಲ್ಲಿ ಈ ಸಹೋದರಿ ಮನೆಯ ಎದುರು ಭರ್ಜರಿ ಟಪ್ಪಾಂಗುಚ್ಚಿ ಸ್ಟೆಪ್ಸ್‌ ಹಾಕಿದ್ದಾರೆ. ಈ ಡಾನ್ಸ್‌ಗೆ ಎಲ್ಲರೂ ಫಿದಾ ಆಗಿದ್ದಾರೆ.

Also Read : ಸಂಗೀತಕ್ಕೆ ದನಿಗೂಡಿಸುವ ಮುದ್ದು ಗಿಣಿ : ಇದು ಖುಷಿಕೊಡುವ ವಿಡಿಯೋ

ಹೀಗೆ ತನ್ನ ಟಪ್ಪಾಂಗುಚ್ಚಿ ನೃತ್ಯ ಕೌಶಲ್ಯದಲ್ಲೇ ಎಲ್ಲರ ಮನಸ್ಸು ಗೆದ್ದವರು ಪುಣೆಯ 23 ವರ್ಷದ ಸಲೋನಿ ಸತ್‌ಪ್ಯೂಟ್. ತನ್ನ ಅಕ್ಕ ಈ ಕೊರೊನಾ ಸೋಂಕಿನಿಂದ ಮುಕ್ತರಾಗಿ ಮನೆಗೆ ಮರಳುತ್ತಿದ್ದಂತೆಯೇ ಸಲೋನಿ ಕುಣಿದು ತನ್ನ ಸಂಭ್ರಮವನ್ನು ವ್ಯಕ್ತಪಡಿಸಿದ್ದರು. ಅಕ್ಕ ಅರ್ಧದಾರಿಯಲ್ಲಿ ಬರುತ್ತಿದ್ದಾಗಲೇ ಓಡಿ ಹೋದ ಸಲೋನಿ ಭರ್ಜರಿಯಾಗಿ ಕುಣಿದು ತನ್ನ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ಅಧಿಕಾರಿ ಡಿಪನ್ಶು ಕಬ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Also Read : ನಾನು ಕೊರೊನಾ ಸೋಂಕಿತ, ಆಸ್ಪತ್ರೆಗೆ ಹೋಗುತ್ತಿದ್ದೇನೆ : ಕೇಳಿದ ಪ್ರಶ್ನೆಗೆ ಬಂದ ಉತ್ತರ ಕೇಳಿದ ಪತ್ರಕರ್ತ ತಬ್ಬಿಬ್ಬು!

ತಂಗಿಯ ಟಪ್ಪಾಂಗುಚ್ಚಿ ಸ್ಟೆಪ್ಸ್‌ನ ಸ್ವಾಗತದ ಬಳಿಕ ಕೊರೊನಾ ಮುಕ್ತರಾದ ಯುವತಿಯ ತಾಯಿ ಆರತಿ ಬೆಳಗಿ ಮಗಳನ್ನು ಮನೆಯೊಳಗೆ ಬರ ಮಾಡಿಕೊಂಡಿದ್ದರು. ಸದ್ಯ ಈ ವಿಡಿಯೋ ಎಲ್ಲರಿಗೂ ಖುಷಿಕೊಟ್ಟಿದೆ. ನಿಜಕ್ಕೂ ಈ ಸಡಗರ ಮನಸ್ಸಿಗೆ ಹಿತ ನೀಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ