ಆ್ಯಪ್ನಗರ

Robot Dog : ಪ್ರಯಾಣಿಕರ ಬಂಡಿಯನ್ನು ಎಳೆಯುತ್ತದೆ ಈ ರೋಬೋಟ್ ಶ್ವಾನ...!

ಈ ತಂತ್ರಜ್ಞಾನಕ್ಕೆ ಎಲ್ಲರೂ ಬೆರಗಾಗಿದ್ದಾರೆ. ಸದ್ಯ ವೈರಲ್ ಆಗುತ್ತಿರುವ ಈ ರಿಕ್ಷಾ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

Vijaya Karnataka Web 21 Oct 2020, 9:49 am
ಎತ್ತಿನ ಗಾಡಿ ನೋಡಿದ್ದೀರಿ... ಕುದುರೆ ಬಂಡಿ ಅರ್ಥಾತ್ ಜಟಕಾ ಗಾಡಿಯಲ್ಲಿ ಪ್ರಯಾಣಿಸಿರುವ ಖುಷಿಯನ್ನೂ ನೀವು ಅನುಭವಿಸಿರಬಹುದು... ಆದರೆ, ಎಂದಾದರೂ ರೋಬೋಟ್ ಗಾಡಿ ಎಳೆಯುವುದನ್ನು ನೋಡಿದ್ದೀರಾ...? ಬಹುಶಃ ಇರಲಿಕ್ಕಿಲ್ಲ... ಸದ್ಯ ಅಂತಹದ್ದೊಂದು ವಿಡಿಯೋ ವೈರಲ್ ಆಗುತ್ತಿದೆ.
Vijaya Karnataka Web Image by Dimitris Vetsikas from Pixabay
| Representative image | Image by Dimitris Vetsikas from Pixabay


ಇದು ನೀವು ಎಂದೂ ನೋಡಿರದಂತಹ ರಿಕ್ಷಾ. ಸದ್ಯ ಇಂಟರ್‌ನೆಟ್‌ನಲ್ಲಿ ಈ ರಿಕ್ಷಾ ಮತ್ತೊಮ್ಮೆ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಯಾಕೆಂದರೆ, ಇದು ಜನರಿಂದ ಸಾಗುವ ಗಾಡಿ ಅಲ್ಲ. ಬದಲಾಗಿದೆ, ಪ್ರಯಾಣಿಕರನ್ನು ಕೂರಿಸಿಕೊಂಡು ರೋಬೋಟ್ ಶ್ವಾನ ಚಲಾಯಿಸುವ ಬಂಡಿ...!

Also Read : ಬೆನ್ನು ನೋವಿನ ನಡುವೆಯೂ ದಿನಾ ರಸ್ತೆ ಬದಿಯ ಗಿಡಗಳಿಗೆ ನೀರುಣಿಸುವ 91 ವರ್ಷದ ಉತ್ಸಾಹಿ!

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ಕ್ಲಿಪ್‌ನಲ್ಲಿ ಅಮೇರಿಕನ್ ಸ್ಪೆಷಲ್ ಎಫೆಕ್ಟ್ಸ್ ಡಿಸೈನರ್ ಆಡಮ್ ಸಾವೇಜ್ ರೋಬೋಟ್ ಶ್ವಾನ ಪ್ರಯಾಣಿಕರ ಮೂರು ಚಕ್ರಗಳ ಗಾಡಿಯನ್ನು ಎಳೆಯುವುದನ್ನು ಪರೀಕ್ಷಿಸುವ ದೃಶ್ಯವಿದೆ. ಈ ದೃಶ್ಯ ಎಲ್ಲರ ಕುತೂಹಲ ಕೆರಳಿಸಿದೆ. ಇದೇ ರೋಬೋಟ್ ಶ್ವಾನದ ವಿಡಿಯೋ ಫೆಬ್ರವರಿಯಲ್ಲೂ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿತ್ತು. ಆದರೆ, ಸುಪ್ರಿಯಾ ಅವರು ಇದನ್ನು ಹಂಚಿಕೊಂಡ ಬಳಿಕ ಈ ವಿಡಿಯೋ ಮತ್ತೆ ವೈರಲ್ ಆಗುವುದಕ್ಕೆ ಆರಂಭಿಸಿದೆ. ಸಾಕಷ್ಟು ಜನ ಈ ವಿಡಿಯೋವನ್ನು ತಮ್ಮ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Also Read : Viral Video : ಕೋವಿಡ್ ವಾರ್ಡ್‌ನಲ್ಲಿ ಗರ್ಬಾ ನೃತ್ಯ : ಜೋಶ್‌ಗೆ ನೆಟ್ಟಿಗರು ಫಿದಾ

ಈ ರೋಬೋಟ್ ಶ್ವಾನದ ಹೆಸರು ಸ್ಟಾಟ್. ಈ ಕ್ಲಿಪ್‌ನಲ್ಲಿ ಮೊದಲು ಆಡಮ್ ಸಾವೇಜ್ ಅವರು ಈ ಗಾಡಿಯಲ್ಲಿ ಕುಳಿತುಕೊಳ್ಳುವ ದೃಶ್ಯವಿದೆ. ಇದಾದ ಬಳಿಕ ಇವರು ನೀಡುವ ಸೂಚನೆಯಂತೆ ಈ ರೋಬೋಟ್ ಶ್ವಾನ ಗಾಡಿಯನ್ನು ಎಳೆದುಕೊಂಡು ಮುಂದೆ ಸಾಗುತ್ತದೆ. ಅಮೇರಿಕಾದ ಎಂಜಿನಿಯರಿಂಗ್ ಮತ್ತು ರೊಬೊಟಿಕ್ಸ್‌ ವಿನ್ಯಾಸ ಕಂಪನಿ ಬೋಸ್ಟನ್ ಡೈನಾಮಿಕ್ಸ್‌ ಅಭಿವೃದ್ಧಿಪಡಿಸಿದ ರೋಬೋಟ್ ಇದು.

Also Read : ಪ್ರವಾಹದಿಂದ ತನ್ನ ಕಂದನನ್ನು ರಕ್ಷಿಸುವ ತಾಯಿ ಶ್ವಾನ : ಇದು ಮನಕಲಕುವ ದೃಶ್ಯ

ಸದ್ಯ ಸ್ಟಾಟ್ ಎಲ್ಲರ ಗಮನ ಸೆಳೆದಿದೆ. ಈ ರೋಬೋಟ್ ಶ್ವಾನದ `ಚುರುಕು ಬುದ್ಧಿ'ಗೆ ಎಲ್ಲರೂ ಬೆರಗಾಗಿದ್ದಾರೆ. ಹೀಗಾಗಿ, ಸುಪ್ರಿಯಾ ಅವರ ಟ್ವೀಟ್ ಸಾಕಷ್ಟು ವೀಕ್ಷಣೆ ಗಳಿಸುವಲ್ಲಿ ಸಕ್ಸಸ್ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ