ಆ್ಯಪ್ನಗರ

ಮೌನವೇ ಮಾತು : ಪುಟಾಣಿ ಮತ್ತು ಡೆಲಿವರಿಮ್ಯಾನ್‌ ಸ್ನೇಹ ಕಂಡು ನೀವು ಖುಷಿಪಡ್ತೀರಿ

ಬಾಲಕಿಯೊಬ್ಬಳು ಡೆಲಿವರಿಮ್ಯಾನ್ ಜೊತೆ ಬರೀ ಸನ್ನೆಯಲ್ಲೇ ಮಾತನಾಡುವ ಅದ್ಭುತ ವಿಡಿಯೋವೊಂದು ವೈರಲ್ ಆಗುತ್ತಿದೆ. ಬಾಲಕಿಯ ತಾಯಿ ಈ ಹೃದಯಸ್ಪರ್ಶಿ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.

Vijaya Karnataka Web 4 Jul 2020, 11:40 am
ಸ್ನೇಹ ಎಂಬುದು ಸುಂದರ ಸಂಬಂಧ. ಸ್ನೇಹಕ್ಕೆ ವಯಸ್ಸಿನ ಅಂತರವಿರುವುದಿಲ್ಲ. ಪುಟಾಣಿಗಳ ಜೊತೆಗೆ ಹಿರಿಯರಿಗೂ ಅಪ್ರತಿಮ ಸ್ನೇಹ ಇರುತ್ತದೆ. ನಿಷ್ಕಲ್ಮಷ ಪ್ರೀತಿಯಿಂದ ಈ ಸ್ನೇಹ ಇನ್ನಷ್ಟು ಉನ್ನತಮಟ್ಟಕ್ಕೇರುತ್ತದೆ. ಇದು ಕೂಡಾ ಅಂತಹದ್ದೇ ಒಂದು ಅದ್ಭುತ ವಿಡಿಯೋ. ಈ ವಿಡಿಯೋ ನೋಡಿದಾಗಲೇ ಮನಸ್ಸು ತುಂಬಿ ಬರುತ್ತದೆ.
Vijaya Karnataka Web Friendship
| Screengrab from video | Courtesy : Amy Roberts/Twitter


Also Read : ಕೊರೊನಾವನ್ನು `ಆಹ್ವಾನಿಸುವ' ಪಾರ್ಟಿ! : ಆತಂಕ ಮೂಡಿಸಿದ ವಿದ್ಯಾರ್ಥಿಗಳ ನಡೆ

ಅಪ್ಯಾಯಾಮಾನ ಸ್ನೇಹಕ್ಕೆ ಮಾತಿನ ಹಂಗಿಲ್ಲ. ಮಾತನಾಡದೆಯೂ ಮೌನವಾಗಿಯೇ ಪರಸ್ಪರ ಸ್ನೇಹ ಭಾವದಿಂದ ಇರಬಹುದು. ಹೃದಯದ ಮಾತು ಮನಸ್ಸಿಗೆ ತಟ್ಟಿದರೆ ಸಾಕು. ಧ್ವನಿ, ಭಾಷೆ, ಸಂಭಾಷಣೆಯ ಅಗತ್ಯವೇ ಇಲ್ಲಿ ಇರುವುದಿಲ್ಲ. ಇದಕ್ಕೆ ಸಾಕ್ಷಿ ಈ ಪುಟಾಣಿ ಮತ್ತು ಡೆಲಿವರಿಮ್ಯಾನ್.

Also Read : Heroic Man : ಮಿನಿ ಬಸ್‌ನ ವಿಂಡ್‌ಸ್ಕ್ರೀನ್ ಒಡೆದು ಮೂವರನ್ನು ರಕ್ಷಿಸಿದ ಸಾಹಸಿ

ಈ ಡೆಲಿವರಿಮ್ಯಾನ್ ಹೆಸರು ಟಿಮ್. ಶ್ರವಣದೋಷವುಳ್ಳ ವ್ಯಕ್ತಿ ಇವರು. ಇವರು ತಾನು ತಂದಿದ್ದ ಪಾರ್ಸೆಲ್ ಕೊಡಲು ಹೋಗಿದ್ದ ಸಂದರ್ಭದಲ್ಲಿ ಅದೊಂದು ಮನೆಯ ಬಾಲಕಿ ತಲ್ಲುಲಾ ಜೊತೆ ಅತ್ಯಂತ ಸ್ನೇಹದಿಂದ ಮಾತನಾಡಿದ್ದಾರೆ. ಎಂಟು ವರ್ಷದ ಪುಟಾಣಿ ತಲ್ಲುಲಾ ಕೂಡಾ ಟಿಮ್ ಜೊತೆ ಅತ್ಯಂತ ಪ್ರೀತಿಯಿಂದ ಮಾತನಾಡಿದ್ದಾಳೆ. ಆದರೆ, ಇವರಿಬ್ಬರು ಮಾತು ಪರಸ್ಪರ ಸನ್ನೆಯ ಮೂಲಕ ಇತ್ತು. ಈ ಹೃದಯಸ್ಪರ್ಶಿ ಮೌನ ಮಾತನ್ನು ಬಾಲಕಿಯ ತಾಯಿ ಆಮಿ ರಾಬರ್ಟ್ಸ್ ವಿಡಿಯೋ ಚಿತ್ರೀಕರಿಸಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. `ಲಾಕ್‌ಡೌನ್ ಶುರುವಾದ ಬಳಿಕ ವಾರಕ್ಕೆ 1 ಅಥವಾ 2 ಬಾರಿ ಟಿಮ್ ಅವನ್ನು ನೋಡುತ್ತೇವೆ. ತಲ್ಲುಲಾ ಟಿಮ್ ಅವರಿಗೆ ಕಾಮನಬಿಲ್ಲಿನಲ್ಲಿ ಥ್ಯಾಂಕ್ಯೂ ಎಂದು ಬರೆದು ಕೊಟ್ಟಿದ್ದಾಳೆ. ಅದನ್ನು ಟಿಮ್ ತಮ್ಮ ವಾಹನದಲ್ಲಿ ಹೆಮ್ಮೆಯಿಂದ ಇಟ್ಟುಕೊಂಡಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಇವರಿಬ್ಬರು ಉತ್ತಮ ಸ್ನೇಹ ಬೆಳೆಸಿಕೊಂಡಿದ್ದಾರೆ' ಎಂದು ಆಮಿ ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

Also Read : ತಾನು ಕೊರೊನಾ ಸೋಂಕಿತೆಯೆಂದು ಗೊತ್ತಾದಾಗ ಈಕೆ ಮಾಡಿದ್ದೇನು ಗೊತ್ತಾ?: ಕಣ್ಣೀರು ತರಿಸುವ ವಿಡಿಯೋವಿದು

ಸದ್ಯ ಈ ವಿಡಿಯೋ ಎಲ್ಲರಿಗೂ ಬಲು ಇಷ್ಟವಾಗಿದೆ. ಈ ಹೃದಯಸ್ಪರ್ಶಿ ಮಾತಿಗೆ ಎಲ್ಲರೂ ಸಂತಸಪಟ್ಟಿದ್ದಾರೆ. ಎಲ್ಲರೂ ಬಾಲಕಿಯ ಮುಗ್ಧತೆಯನ್ನು ಹಾಡಿಹೊಗಳಿದ್ದಾರೆ ಮತ್ತು ಮಗುವಿನೊಂದಿಗೆ ಮಗುವಾಗಿರುವ ಟಿಮ್‌ ಅವನ್ನನೂ ಕೊಂಡಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ