ಆ್ಯಪ್ನಗರ

ಮನಸ್ಸಿಗೆ ನೆಮ್ಮದಿ ಬೇಕಾ...? ಹಾಗಾದರೆ, ಈ ಪುಟಾಣಿಯ ಹಾಡನ್ನೊಮ್ಮೆ ಕೇಳಿ

ಮೂರು ವರ್ಷದ ಕಂದ `ದಿಲ್ ಹೈ ಚೋಟಾ ಸಾ...' ಹಾಡು ಹಾಡುವ ವಿಡಿಯೋವೊಂದು ಈಗ ಸಖತ್ ವೈರಲ್ ಆಗುತ್ತಿದೆ. ಪುಟಾಣಿಯ ಮುದ್ದು ಮುದ್ದು ಹಾಡು ಮನಸ್ಸಿನ ನೋವನ್ನೂ ದೂರ ಮಾಡುವಂತಿದೆ.

Vijaya Karnataka Web 8 Feb 2020, 1:14 pm
ಮಕ್ಕಳ ತೊದಲು ನುಡಿ ಕೇಳುವುದೇ ಚೆಂದ... ನಮ್ಮ ಮನಸ್ಸಿನ ಎಲ್ಲಾ ನೋವನ್ನೂ ದೂರ ಮಾಡುವ ಶಕ್ತಿ ಪುಟಾಣಿಗಳಿಗಿದೆ. ಸದ್ಯ ಇಂತಹದ್ದೇ ನೋವು ಮರೆಸುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಮೂರು ವರ್ಷದ ಕಂದ ಹಿಂದಿಯ ಎವರ್‌ ಗ್ರೀನ್ ಸೂಪರ್ ಹಿಟ್ ಹಾಡು `ದಿಲ್ ಹೈ ಚೋಟಾ ಸಾ...' ಹಾಡಿಗೆ ಧ್ವನಿಯಾಗಿದ್ದಾಳೆ. ತಂದೆಯೊಂದಿಗೆ ಸ್ಟೇಜ್ ಮೇಲೆ ಪುಟಾಣಿ ಹಾಡುವ ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ.
Vijaya Karnataka Web baby singing
| Screengrab from video | Courtesy : Megha Agarwal/Twitter


Also Read : `ಪ್ರಾಣಿಗಳ ಎದುರು ಮನುಷ್ಯರಂತೆ ವರ್ತಿಸಿ... ಯಾವತ್ತೂ ಹೀಗೆ ಮಾಡಬೇಡಿ...'

ಈ ಪುಟಾಣಿಯ ಹೆಸರು ವೇದಾ. ವೇದಾ ತಂದೆ ಗಾಯಕ ಮತ್ತು ಸಂಗೀತ ಸಂಯೋಜಕ ಮಹದೇವ್ ಅಗರ್ವಾಲ್. ಕಾರ್ಯಕ್ರಮವೊಂದರಲ್ಲಿ ಮಹದೇವ್ ಹಾಡಲು ಸಿದ್ಧರಾಗುತ್ತಿದ್ದಾಗ ಮೈಕ್ ಹಿಡಿದುಕೊಂಡು ಬಂದ ವೇದಾ ತಾನೂ ಹಾಡುತ್ತೇನೆ ಎಂದು ಹೇಳಿದ್ದಳು. ಹೀಗಾಗಿ, ತಂದೆ ಮಹದೇವ್ ಈಗ ನನ್ನ ಮಗಳು ಹಾಡುತ್ತಾಳೆ ಎಂದು ಪ್ರೇಕ್ಷಕರಿಗೆ ತಿಳಿಸಿದ್ದರು. ಪ್ರೇಕ್ಷಕರು ಕೂಡಾ ಪುಟಾಣಿಯ ಹಾಡು ಕೇಳಲು ಕಾಯುತ್ತಿದ್ದರು.

Also Read : Lake Nyos : ಒಂದೇ ರಾತ್ರಿಗೆ 1,700 ಜನರ ಜೀವ ತೆಗೆದಿತ್ತು ಈ ಕೆರೆ...!

ಅಂತೆಯೇ ಮುದ್ದು ಮುದ್ದಾಗಿ ಹಾಡಿ ವೇದಾ ಇಡೀ ಸಭಾಂಗಣದಲ್ಲಿ ಸಂಭ್ರಮದ ಹೊನಲು ಹರಿಸಿದ್ದಳು. ಪರ್ಫೆಕ್ಟ್‌ ಟ್ಯೂನ್‌ನಲ್ಲೇ ಹಾಡಿದ್ದ ವೇದಾಳ ಪ್ರತಿಭೆಯನ್ನು ಕಂಡು ಪ್ರೇಕ್ಷಕರು ಫಿದಾ ಆಗಿದ್ದರು. ಜೊತೆಗೆ, ಪುಟಾಣಿಗೆ ಚಪ್ಪಾಳೆಯ ಮೂಲಕ ಹುರಿದುಂಬಿಸಿದ್ದರು. ಈ ವಿಡಿಯೋವನ್ನು ವೇದಾ ತಾಯಿ ಮೇಘಾ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೇ ಮೊದಲ ಬಾರಿಗೆ ತಂದೆ ಮಗಳು ವೇದಿಕೆಯಲ್ಲಿ ಹಾಡುತ್ತಿದ್ದಾರೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.

Also Read : ಜ್ವಾಲಾ ದೇವಿಯ ಸನ್ನಿಧಿಯಲ್ಲಿ ಎಣ್ಣೆ, ಬತ್ತಿ ಇಲ್ಲದೆಯೇ ಅನಾದಿಕಾಲದಿಂದಲೂ ಉರಿಯುತ್ತಿದೆ ಬೆಂಕಿ...!

ಸದ್ಯ ಈ ವಿಡಿಯೋ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಜನರಂತೂ ಈ ಪುಟಾಣಿಯ ಕಂಠಸಿರಿಯನ್ನು ಕೊಂಡಾಡಿದ್ದಾರೆ.

ಮಕ್ಕಳು ಸದಾ ಪ್ರತಿಭಾನ್ವಿತರಾಗಿರುತ್ತಾರೆ. ಪುಟಾಣಿಗಳು ಹಾಡು, ಡಾನ್ಸ್ ಮಾಡಲು ಸದಾ ಮುಂದಿರುತ್ತದೆ. ಪುಟಾಣಿಗಳು ಹೇಗೇ ಹಾಡಿದರೂ, ಹೇಗೇ ಡಾನ್ಸ್ ಮಾಡಿದರೂ ಅದನ್ನು ನೋಡುವುದೇ ಕಣ್ಣಿಗೆ ಹಬ್ಬ... ಸದ್ಯ ಈ ಪುಟಾಣಿ ವೇದಾ ಕೂಡಾ ಇದೇ ನೆಮ್ಮದಿ ಎಲ್ಲರಿಗೂ ಕೊಟ್ಟಿದ್ದಾಳೆ. ತನ್ನ ಸಿರಿಕಂಠದ ಮೂಲಕವೇ ಖುಷಿಯ ರಸದೌತಣವನ್ನು ಉಣಬಡಿಸಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ