ಆ್ಯಪ್ನಗರ

ಶ್ವಾನವನ್ನು ಮಡಿಲಲ್ಲಿ ಮಲಗಿಸುತ್ತಾ ಸಿನೆಮಾ ನೋಡುವ ಪುಟಾಣಿ: ಮನಸೆಳೆಯದೇ ಇರದು ಈ ದೃಶ್ಯ

ಇದೊಂದು ಅಪೂರ್ವ ದೃಶ್ಯ. ನೋಡಿದ ತಕ್ಷಣ ಅರೆಕ್ಷಣದಲ್ಲಿ ಎಲ್ಲರನ್ನೂ ಸೆಳೆದು ಬಿಡುವಂತಹ ಸೊಬಗಿನ ಕ್ಷಣಗಳಿವು.

Vijaya Karnataka Web 25 Sep 2020, 10:38 am
ಪುಟ್ಟ ಮಕ್ಕಳು ಮತ್ತು ಶ್ವಾನದ ಮರಿಗಳ ಉಲ್ಲಾಸದಾಯ ವಿಡಿಯೋಗಳನ್ನು ನೋಡಲು ಯಾರಿಗಿಷ್ಟ ಎಂದು ಯಾರಾದರೂ ಕೇಳಿದರೆ ಬಹುತೇಕ ಎಲ್ಲರೂ ಕೈಎತ್ತಿ `ನನಗೆ' ಎಂದು ಹೇಳುತ್ತಾರೆ. ಅಷ್ಟರಮಟ್ಟಿಗೆ ಮುದ್ದಾದ ದೃಶ್ಯಗಳು ಎಲ್ಲರ ಮನಸ್ಸಿಗೆ ಲಗ್ಗೆ ಇಟ್ಟಿವೆ. ಈಗಂತೂ ಇಂಟರ್‌ನೆಟ್ ಜಮಾನಾ ಆಗಿದ್ದರಿಂದ ಮನಸ್ಸಿಗೆ ಇಷ್ಟವಾಗುವಂತಹ ದೃಶ್ಯಗಳಿಗೇನು ಕೊರತೆ ಇರುವುದಿಲ್ಲ. ಮನಸ್ಸಿಗೆ ಬೇಸರವಾದರೆ ಒಂದು ಕ್ಷಣ ಇಂಟರ್‌ನೆಟ್‌ನಲ್ಲಿ ಜಾಲಾಡಿದರೆ ಸಾಕು ಬೇಕಾದಷ್ಟು ಅದ್ಭುತ ಮತ್ತು ಮನಸ್ಸಿಗೆ ಹಿತ ನೀಡುವ ದೃಶ್ಯಗಳು ಕಾಣಸಿಗುತ್ತವೆ. ಅದರಲ್ಲೂ ಜನರು ಬಹುವಾಗಿ ಇಷ್ಟಪಡುವ ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ ಆರಾಧ್ಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಸದ್ಯ ಇಂತಹದ್ದೇ ಇನ್ನೊಂದು ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.
Vijaya Karnataka Web Cute Pet Dog
| Screengrab from video | Courtesy : @HopkinsBRFC/Twitter


Also Read : ಬ್ರಿಡ್ಜ್‌ನಲ್ಲಿ ನಿಂತು ಪ್ರಪೋಸ್ : ಫೋಟೋಗ್ರಾಫರ್ ಮೇಲೆ ಬಂದು ಗುದ್ದಿದ್ದ ಸೈಕ್ಲಿಸ್ಟ್‌!

ಇದು ಮುಗ್ಧ ಮಗು ಮತ್ತು ಮುದ್ದಾದ ಶ್ವಾನದ ಮರಿಯ ಅಪೂರ್ವ ದೃಶ್ಯ. ಸಾಮಾನ್ಯವಾಗಿ ಪುಟಾಣಿ ಶ್ವಾನ ಮತ್ತು ಮುದ್ದಾದ ಮಗುವಿಗೆ ಆಟ, ತುಂಟಾಟದ ಪ್ರತ್ಯೇಕ ವಿಡಿಯೋಗಳು ಕಾಣಸಿಕ್ಕರೇನೇ ಮನಸ್ಸು ಉಲ್ಲಾಸದಲ್ಲಿ ಹಕ್ಕಿಯಂತೆ ಹಾರುತ್ತದೆ. ಅಂತಹದರಲ್ಲಿ ಒಂದೇ ಕ್ಲಿಪ್‌ನಲ್ಲಿ ಈ ದೃಶ್ಯ ಕಂಡರಂತೂ ಹಲವರಿಗೆ ಅದಕ್ಕಿಂತ ಖುಷಿ ಮತ್ತೊಂದಿರದು. ಇದು ಕೂಡಾ ಅಂತಹದ್ದೇ ಒಂದು ಮುದ್ದಾದ ದೃಶ್ಯ.

Also Read : ಕುದುರೆಯ ಮುಖದ ಮಾಸ್ಕ್‌ ತೊಟ್ಟು ಮಹಿಳೆಯ ಶಾಪಿಂಗ್!: ತಮಾಷೆಯ ವಿಡಿಯೋ ವೈರಲ್

ಆ ಪುಟಾಣಿ ಮೊಬೈಲ್ ಫೋನ್‌ನಲ್ಲಿ ತನಗಿಷ್ಟದ ಯಾವುದೋ ಸಿನೆಮಾ ನೋಡುತ್ತಿದ್ದಾಳೆ. ಇವಳ ಮಡಿಲಲ್ಲಿ ಮುದ್ದು ಶ್ವಾನದ ಮರಿ ಮಲಗಿದೆ. ತನ್ನ ಕಾಲ ಮೇಲೆ ಮಲಗಿರುವ ಶ್ವಾನದ ಮೈಯನ್ನು ಸವರುತ್ತಾ ಮಗು ವಿಡಿಯೋ ನೋಡುತ್ತಿದ್ದರೆ, ಈ ಪ್ರೀತಿಗೆ ಮನಸೋತಿರುವ ಶ್ವಾನದ ಮರಿ ಪುಟಾಣಿಯ ಮಡಿಲಲ್ಲಿ ಹಾಗೆಯೇ ನೆಮ್ಮದಿಯಿಂದ ನಿದ್ದೆಗೆ ಜಾರಿದೆ. ಈ ದೃಶ್ಯವನ್ನು ನೋಡುವಾಗಲೇ ಮನಸ್ಸು ಹಿತವಾಗುತ್ತದೆ.


Also Read : ಪ್ಯಾರಾಗ್ಲೈಡರ್‌ಗೆ ಹಾಸಿಗೆ ಜೋಡಿಸಿ ಮಲಗಿ ಆಕಾಶದಲ್ಲಿ ವಿಹರಿಸಿದ ಸಾಹಸಿ...!

ಸೈಮನ್ ಬಿಆರ್ಎಫ್ಸಿ ಹಾಪ್ಕಿನ್ಸ್‌ ಎಂಬ ಟ್ವಿಟ್ಟರ್ ಖಾತೆ 22 ಸೆಕೆಂಡುಗಳ ಈ ಅಪೂರ್ವ ಕ್ಲಿಪ್‌ ಹಂಚಿಕೊಂಡಿದೆ. ಇಂತಹ ಅದ್ಭುತ ದೃಶ್ಯ ನೆಟ್ಟಿಗರ ಮನಸೆಳೆಯದೇ ಇರಲು ಸಾಧ್ಯನಾ...? ಎಲ್ಲರಿಗೂ ಈ ವಿಡಿಯೋ ಬಲು ಇಷ್ಟವಾಗಿದೆ. ಈ ಕ್ಲಿಪ್ ನೋಡಿದ ಎಲ್ಲರೂ `ಅದ್ಭುತ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ