ಆ್ಯಪ್ನಗರ

ಕೀಬೋರ್ಡ್‌ ನುಡಿಸಿ ಮನಸ್ಸು ಗೆದ್ದ ಅಂಧ ಬಾಲಕಿ : ಪ್ರತಿಭೆಗೆ ಎ ಆರ್ ರೆಹಮಾನ್ ಫಿದಾ

ಸಂಪೂರ್ಣ ದೃಷ್ಟಿದೋಷವುಳ್ಳ ಬಾಲಕಿಯೊಬ್ಬಳು ಈಗ ತನ್ನ ಪ್ರತಿಭೆಯಿಂದಲೇ ಗಮನ ಸೆಳೆದಿದ್ದಾಳೆ. ಈಕೆಯ ಪ್ರತಿಭೆಗೆ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಅವರೂ ಶಹಬ್ಬಾಸ್ ಎಂದಿದ್ದಾರೆ.

Vijaya Karnataka Web 3 Jul 2020, 7:25 pm
ಆಕೆ ಒಳಗಣ್ಣಿನ ಮೂಲಕ ಜಗತ್ತನ್ನು ನೋಡುವ ಪ್ರತಿಭೆ... ತನ್ನ ಅಸಾಧಾರಣ ಪ್ರತಿಭೆಯಿಂದಲೇ ಜಗತ್ತಿನ ಮನಸ್ಸು ಗೆದ್ದಾಕೆ... ಎಲ್ಲರೂ ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ ಈ ಬಾಲಕಿಯ ಸಾಧನೆ...
Vijaya Karnataka Web AR Rahman
| Screengrab from video | Courtesy : SahanaNiren/Twitter


ಇದು ಒಬ್ಬಳು ಅದ್ಭುತ ಪ್ರತಿಭೆಯುಳ್ಳ ಬಾಲಕಿಯ ಕತೆ. ಸಹನಾ ನಿರೇನ್ ಈ ಕತೆಯ ನಾಯಕಿ. ತನ್ನ ಅಪೂರ್ವ ಪ್ರತಿಭೆಯ ಕಾರಣದಿಂದ ಎಲ್ಲರ ಮನಸ್ಸು ಗೆದ್ದ ಈ ಬಾಲಕಿಗೆ ದೃಷ್ಟಿದೋಷ ಕಾಡುತ್ತಿದೆ. ಆದರೆ, ಕಣ್ಣೆರಡೂ ಕಾಣಿಸದೇ ಇದ್ದರೂ ತನ್ನ ಅಂತರಂಗದ ಕಣ್ಣಿನ ಮೂಲಕ ಜಗತ್ತನ್ನು ನೋಡುವ ಸಹನಾ ಸಂಗೀತ ಕ್ಷೇತ್ರದಲ್ಲಿ ತನ್ನ ಸಾಧನೆಯ ಹೆಜ್ಜೆ ಗುರುತುಗಳನ್ನಿಡುತ್ತಿದ್ದಾಳೆ. ಸದ್ಯ ಈ ಬಾಲಕಿ 2020ರ ತಮಿಳಿನ `ಕೋಬ್ರಾ' ಚಿತ್ರದ ಹಾಡಿನ ಟ್ಯೂನ್ ನುಡಿಸುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

Also Read : ತಾನು ಕೊರೊನಾ ಸೋಂಕಿತೆಯೆಂದು ಗೊತ್ತಾದಾಗ ಈಕೆ ಮಾಡಿದ್ದೇನು ಗೊತ್ತಾ?: ಕಣ್ಣೀರು ತರಿಸುವ ವಿಡಿಯೋವಿದು

ಸಹನಾ ಹೆಸರಿನಲ್ಲಿರುವ ಟ್ವಿಟ್ಟರ್ ಅಕೌಂಟ್‌ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದ್ದು, ಈ ವಿಡಿಯೋಗೆ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಫಿದಾ ಆಗಿದ್ದಾರೆ. ಈ ವಿಡಿಯೋ ಶೇರ್ ಮಾಡಿರುವ ರೆಹಮಾನ್ `ಸ್ವೀಟ್' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಕಂಡು ಸಹನಾ ತಾಯಿ ಪುಳಕಗೊಂಡಿದ್ದಾರೆ. ಮಗಳ ಟ್ವಿಟ್ಟರ್ ಖಾತೆಯನ್ನು ನಿರ್ವಹಿಸುತ್ತಿರುವ ತಾಯಿ ಸಂಭ್ರಮದಿಂದ `ನಿಮಗೆ ತುಂಬಾ ಧನ್ಯವಾದಗಳು ರೆಹಮಾನ್ ಸಾರ್. ಈ ದಿನಕ್ಕಾಗಿ ನಾವು ಕಾಯುತ್ತಿದ್ದೆವು. ಈ ಒಂದೇ ಮಾತು ಸಾಕು ನಮಗೆ. ಖುಷಿಯಲ್ಲಿ ನಮಗೆ ಮಾತೇ ಬಾರದಾಗಿದೆ' ಎಂದು ಮಗಳ ಸಾಧನೆಗೆ ಸಿಕ್ಕ ಮನ್ನಣೆಗೆ ಸಂಭ್ರಮಿಸಿದ್ದಾರೆ.

Also Read : ಅಮ್ಮಾ, ನಿನಗ್ಯಾರು ಸಮ? : ನಮಗ್ಯಾಕೆ ಪ್ರಾಣಿಗಳ ಕಷ್ಟ ತಿಳಿಯುತ್ತಿಲ್ಲ?: ಇದು ಹೃದಯಕರಗಿಸುವ ವಿಡಿಯೋ



ಇನ್ನೊಂದೆಡೆ, ತಮಿಳು ಚಿತ್ರದ ನಿರ್ಮಾಪಕರು ಕೂಡಾ ಈ ಬಾಲಕಿಯ ಪ್ರತಿಭೆಗೆ ಫಿದಾ ಆಗಿದ್ದು, ಆಡಿಯೋ ಸ್ಟುಡಿಯೋ ರೆಕಾರ್ಡರ್‌ನ ಫುಲ್ ಸೆಟ್‌ ಉಡುಗೊರೆಯಾಗಿ ಕೊಟ್ಟಿದ್ದಾರೆ.

Also Read : ಎಟಿಎಂನಂತೆ ಕಾರ್ಯನಿರ್ವಹಿಸುವ ಪಾನಿಪೂರಿ ಮಷಿನ್! : ಹಣ ಹಾಕಿದರೆ ಸ್ನ್ಯಾಕ್ಸ್‌ ರೆಡಿ!

ಗಾಯಕಿಯೂ ಆಗಿರುವ ಸಹನಾ ಹಲವಾರು ವಾದ್ಯಗಳನ್ನು ನುಡಿಸುವುದರಲ್ಲೂ ಪ್ರವೀಣೆ. ಸದ್ಯ ಸಹನಾ ಎಲ್ಲಾ ಸಂಗೀತ ಪ್ರಿಯರ ಮನಗೆದ್ದಿದ್ದು, ಎಲ್ಲರೂ ಬಾಲಕಿಯ ಪ್ರತಿಭೆಯನ್ನು ಕೊಂಡಾಡುತ್ತಿದ್ದಾರೆ. ನಿಜಕ್ಕೂ ಸಹನಾ ಪ್ರತಿಭೆ ಬೆರಗು ಮೂಡಿಸುತ್ತದೆ. ದೃಷ್ಟಿದೋಷವಿದ್ದರೂ ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಹನಾ ಮಾಡಿರುವ ಸಾಧನೆ ಎಲ್ಲರಿಗೂ ಸ್ಫೂರ್ತಿ. ಬದುಕಿಗೂ ಮಾದರಿ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ