ಆ್ಯಪ್ನಗರ

ವೃದ್ಧನನ್ನು ಬೆನ್ನಿನಲ್ಲಿ ಹೊತ್ತು ರಸ್ತೆ ದಾಟಿಸಿದ ಯುವಕ : ಹೃದಯವಂತನ ಕಾರ್ಯಕ್ಕೆ ನೆಟ್ಟಿಗರು ಫಿದಾ

ನಿಜಕ್ಕೂ ಇದು ಮಾದರಿ ನಡೆ. ಈ ಯುವಕ ತೋರಿದ ಸಮಯಪ್ರಜ್ಞೆ, ಹೃದಯವಂತಿಕೆಯನ್ನು ಬರೀ ಪದಗಳಲ್ಲಿ ಬಣ್ಣಿಸಲು ಸಾಧ್ಯವೇ ಇಲ್ಲ.

Vijaya Karnataka Web 23 Nov 2020, 4:26 pm
ಯಾರು ಏನೇ ಅಂದುಕೊಳ್ಳಲಿ, ಯಾರು ಏನೇ ಮಾಡಲಿ... ನಾವೆಂದೂ ಮಾನವೀಯತೆಯನ್ನು ಮರೆಯಬಾರದು. ಮಾನವೀಯತೆಯನ್ನು ಮರೆತರೆ ನಾವು ನಮ್ಮನ್ನೇ ಮರೆತಂತೆ. ಎಲ್ಲರಲ್ಲೂ ಯಾವ ಸನ್ನಿವೇಶದಲ್ಲೂ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಗುಣ ಸದಾ ಜಾಗೃತವಾಗಿಯೇ ಇರಬೇಕು. ಹೀಗೆ ಮತ್ತೊಬ್ಬರಿಗೆ ಸಹಾಯ ಮಾಡುವಾಗ ತಕ್ಷಣಕ್ಕೆ ಅಲ್ಲೇನಾದರೂ ಸಮಸ್ಯೆ ಎದುರಾಗಬಹುದು. ಆದರೆ, ನಿಮ್ಮ ಕೆಲಸದ ಮೌಲ್ಯ ಗೊತ್ತಾಗುತ್ತಿದ್ದಂತೆಯೇ ಎಲ್ಲರೂ ಇದಕ್ಕೆ ಸಹಾಯ ಮಾಡುತ್ತಾರೆ, ಬೆಂಬಲವಾಗಿ ನಿಲ್ಲುತ್ತಾರೆ. ಸದ್ಯ ಇಂತಹದ್ದೇ ಅಪೂರ್ವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯುವಕರೊಬ್ಬರು ತೋರಿದ ಸಮಸ್ಯೆ ಪ್ರಜ್ಞೆಯ ಈ ವಿಡಿಯೋ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Vijaya Karnataka Web Image by Steve Buissinne from Pixabay
| Representative image | Image by Steve Buissinne from Pixabay


Also Read : ಜೀವದ ಹಂಗು ತೊರೆದು ಆಸ್ಪತ್ರೆಯ ಅಗ್ನಿ ಆಕಸ್ಮಿಕದಿಂದ ನಾಲ್ವರ ಜೀವ ಉಳಿಸಿದ ಬುದ್ಧಿವಂತ ಶ್ವಾನ

ಅದೊಂದು ಬ್ಯುಸಿ ರಸ್ತೆ. ವಾಹನಗಳೂ ಅಡ್ಡಾದಿಡ್ಡಿ ಸಾಗುತ್ತಿವೆ. ಈ ನಡುವೆ, ವೃದ್ಧರೊಬ್ಬರು ಜೀಬ್ರಾ ಕ್ರಾಸ್‌ನಲ್ಲಿ ನಿಧಾನಕ್ಕೆ ರಸ್ತೆ ದಾಟುತ್ತಾರೆ. ಒಂದೊಂದೇ ಸಣ್ಣ ಸಣ್ಣ ಹೆಜ್ಜೆಯನ್ನಿಟ್ಟುಕೊಂಡು ಈ ವೃದ್ಧ ಸಾಗುತ್ತಿದ್ದರೂ ಕೆಲ ವಾಹನ ಸವಾರರು ಅವರನ್ನೇ ದಾಟಿ ಮುಂದೆ ಹೋಗಿದ್ದರು. ಆದರೆ, ಎದುರಿನಿಂದ ತನ್ನ ಕಾರಿನಲ್ಲಿ ಬರುತ್ತಿದ್ದ ಒಬ್ಬ ಯುವಕ ಮಾತ್ರ ಹಾಗೆ ಮಾಡಲಿಲ್ಲ. ಬದಲಾಗಿ, ತಾನೇ ಕಾರು ನಿಲ್ಲಿಸಿ ಓಡಿ ಬಂದು ವೃದ್ಧರನ್ನು ತನ್ನ ಹೆಗಲಿನಲ್ಲಿ ಹೊತ್ತು ರಸ್ತೆ ದಾಟಿಸಿದ್ದಾರೆ. ಈ ದೃಶ್ಯವನ್ನು ಕಂಡ ಇತರ ವಾಹನ ಸವಾರರೂ ವಾಹನ ನಿಲ್ಲಿಸಿ ಯುವಕ ಸಾಗಲು ಅನುವು ಮಾಡಿಕೊಟ್ಟಿದ್ದಾರೆ.


Also Read : ಬಿದ್ದು ಏಳುವುದೇ ಜೀವನ : ಈ ಅದ್ಭುತ ವಿಡಿಯೋದಲ್ಲಿದೆ ಬದುಕಿನ ದೊಡ್ಡ ಸಂದೇಶ

ಎಂತಹ ಅದ್ಭುತ ದೃಶ್ಯ ಇದಲ್ವಾ...? ಆರಂಭದಲ್ಲಿ ಟಿಕ್‌ಟಾಕ್‌ನಲ್ಲಿ ಅಪ್ಲೋಡ್ ಆದ ಈ ವಿಡಿಯೋ ಬಳಿಕ ವಿವಿಧ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಮೂಲಕ ಈ ಯುವಕ ಹೀರೋ ಆಗಿದ್ದಾರೆ. ಎಲ್ಲರೂ ಈ ಹೃದಯವಂತನ ಕೆಲಸವನ್ನು ಮನಸಾರೆ ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ, ವೃದ್ಧನ ಸ್ಥಿತಿ ನೋಡಿಯೂ ಅವರನ್ನು ದಾಟಿ ಮುಂದಕ್ಕೆ ಹೋಗುತ್ತಿದ್ದ ವಾಹನ ಸವಾರರ ಬಗೆಗೂ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Also Read : ಪ್ರವಾಹದಲ್ಲಿ ಸಿಲುಕಿ ನಲುಗಿದ್ದ ಶ್ವಾನಕ್ಕೆ ಹೆಮ್ಮೆಯ ಜವಾಬ್ದಾರಿ: ಹೃದಯಸ್ಪರ್ಶಿ ಕತೆ ಇದು

ನಿಜಕ್ಕೂ ಇದೊಂದು ಅಪೂರ್ವ ವಿಡಿಯೋ. ನಾವು ಹೇಗೆಲ್ಲಾ ಮಾನವೀಯವಾಗಿ ವರ್ತಿಸಬಹುದು ಎಂಬುದಕ್ಕೆ ಇದು ಕೂಡಾ ಒಂದು ಉದಾಹರಣೆಯಾಗಿದೆ. ಹೀಗಾಗಿ, ಇಂತಹ ಹೃದಯವಂತರನ್ನು ಕಂಡಾಗ ಮನಸ್ಸು ಇನ್ನಷ್ಟು ಉಲ್ಲಸಿತವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ