ಆ್ಯಪ್ನಗರ

Viral Video : ಕೋವಿಡ್ ವಾರ್ಡ್‌ನಲ್ಲಿ ಗರ್ಬಾ ನೃತ್ಯ : ಜೋಶ್‌ಗೆ ನೆಟ್ಟಿಗರು ಫಿದಾ

ಕೋವಿಡ್ ವಾರ್ಡ್‌ನಲ್ಲಿ ಡಾಕ್ಟರ್ಸ್‌ ಗರ್ಬಾ ನೃತ್ಯ ಪ್ರದರ್ಶಿಸಿದ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. ಈ ಜೋಶ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Vijaya Karnataka Web 20 Oct 2020, 1:31 pm
ಈಗ ಎಲ್ಲೆಲ್ಲೂ ನವರಾತ್ರಿ ಸಡಗರ ತುಂಬಿದೆ. ಆದರೆ, ಹಿಂದಿನ ವರ್ಷಗಳಂತೆ ಈ ಸಲ ಇನ್ನಷ್ಟು ಖುಷಿಯಿಂದ ಹಬ್ಬವನ್ನು ಆಚರಿಸುವ ಪರಿಸ್ಥಿತಿಯಲ್ಲಿ ನಾವಿಲ್ಲ. ಯಾಕೆಂದರೆ, ಸದ್ಯ ಕೊರೊನಾ ವೈರಸ್ ಇಡೀ ವಿಶ್ವವನ್ನೇ ಕಾಡುತ್ತಿದೆ. ಒಂದಷ್ಟು ಮನೆಗಳಲ್ಲಿ ಕೋವಿಡ್-19 ಸೋಂಕಿಗೊಳಗಾದ ತಮ್ಮ ಪ್ರೀತಿಪಾತ್ರರು ಆಸ್ಪತ್ರೆಯಲ್ಲಿ ಇರುವುದರಿಂದ ಹಬ್ಬದ ಖುಷಿಯೇ ಇಲ್ಲ... ಕೊರೊನಾ ಸೋಂಕಿತರಿಗೂ ಅಷ್ಟೇ ಮನೆಗೆ ಹೋಗಲಾಗದೆ, ಎಲ್ಲರೊಂದಿಗೆ ಹಬ್ಬದ ಖುಷಿಯನ್ನು ಅನುಭವಿಸುವ ಅವಕಾಶ ಇಲ್ಲದೆ ಕಷ್ಟಪಡಬೇಕಾದ ಪರಿಸ್ಥಿತಿ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಈ ಎರಡೂ ಕಷ್ಟಗಳನ್ನು ಹಲವರು ಅನುಭವಿಸುತ್ತಿದ್ದಾರೆ. ಆದರೆ, ಸೋಂಕಿತರ ಮನಸ್ಸಿನಲ್ಲಿರುವ ಈ ನೋವನ್ನು ದೂರ ಮಾಡುವ ಪ್ರಯತ್ನವೂ ಅಲ್ಲಲ್ಲಿ ನಡೆಯುತ್ತಿದೆ. ಅದಕ್ಕೆ ಸಾಕ್ಷಿ ಈ ವಿಡಿಯೋ.
Vijaya Karnataka Web Garba Video
| Screengrab from video | Courtesy : @sportBlooded/Twitter


Also Read : ಮೀನಿನ ಆಸೆಯಲ್ಲಿ ಗಾಳ ಹಾಕಿದರೆ ಸಿಕ್ಕಿದ್ದು ದೊಡ್ಡ ಮೊಸಳೆ! : ಮುಂದೇನಾಯ್ತು ಗೊತ್ತಾ?

ನವರಾತ್ರಿ ಸಂದರ್ಭದಲ್ಲಿ ದೇಶದ ಬಹುಭಾಗಗಳಲ್ಲಿ ಗರ್ಬಾ ನೃತ್ಯಕ್ಕೆ ಬಹಳ ಪ್ರಾಮುಖ್ಯತೆ ಇದೆ. ಎಲ್ಲರೂ ಹಬ್ಬದ ಸಂದರ್ಭದಲ್ಲಿ ಈ ನೃತ್ಯ ಮಾಡಿ ಖುಷಿಪಡುತ್ತಾರೆ. ಅಂತೆಯೇ ಇಲ್ಲೊಂದು ಕಡೆ ಎಲ್ಲರೂ ಒಟ್ಟಾಗಿ ಗರ್ಬಾ ನೃತ್ಯವಾಡಿದ್ದಾರೆ. ಗರ್ಬಾ ನೃತ್ಯಕ್ಕೆ ಮಹಿಳೆಯರು ತಮ್ಮ ಸಾಂಪ್ರದಾಯಿಕ ಚಾನಿಯಾ ಚೋಲಿ ಮತ್ತು ಪುರುಷರು ಧೋತಿ ಕುರ್ತಾದಲ್ಲಿ ಇಲ್ಲಿರಲಿಲ್ಲ. ಆದರೆ, ಮಧ್ಯದಲ್ಲಿ ಒಂದಷ್ಟು ಪಿಪಿಒ ಕಿಟ್ ಧರಿಸಿದ್ದವರೂ ಕುಣಿಯುತ್ತಿದ್ದರು. ಇವರೆಲ್ಲಾ ಒಟ್ಟಾಗಿ ಇಲ್ಲಿ ಖುಷಿಯಿಂದ ಗರ್ಬಾ ನೃತ್ಯ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

Also Read : ಬೃಹತ್ ಗಾತ್ರದ ಪ್ಲಾಸ್ಟಿಕ್ ಬಬಲ್‌ನೊಳಗೆ ನಿಂತು ಸಂಗೀತ ಕಾರ್ಯಕ್ರಮ! : ಪ್ರೇಕ್ಷಕರಿಗೂ ಇದೇ ವ್ಯವಸ್ಥೆ!

ಇದು ಗೊರೆಗಾಂವ್‌ನ ನೆಸ್ಕೋ ಕೋವಿಡ್-19 ಕೇಂದ್ರದಲ್ಲಿ ಸೆರೆಯಾದ ದೃಶ್ಯ. ಇಲ್ಲಿನ ಡಾಕ್ಟರ್ಸ್‌ ಕೊರೊನಾ ಸೋಂಕಿತರಿಗೆ ಇನ್ನಷ್ಟು ಧೈರ್ಯ ತುಂಬುವ ಸಲುವಾಗಿ ಗರ್ಬಾ ನೃತ್ಯ ಮಾಡಿದ್ದರು. ಈ ನೃತ್ಯಕ್ಕೆ ಫಿದಾ ಆದ ಸೋಂಕಿತರು ತಾವೂ ಡಾಕ್ಟರ್ಸ್‌ ಜೊತೆ ಹೆಜ್ಜೆ ಹಾಕಿದ್ದರು. ಹೀಗಾಗಿ, ಅಲ್ಲೊಂದು ಖುಷಿಯ ವಾತಾವರಣ ನಿರ್ಮಾಣವಾಗಿತ್ತು.

Also Read : ಕೊರೊನಾ ಸೋಂಕಿತರ ಖುಷಿಗೆ ವೈದ್ಯರ ಅದ್ಭುತ ಡಾನ್ಸ್‌ : ಡಾಕ್ಟರ್ ಪ್ರತಿಭೆಗೆ ನೆಟ್ಟಿಗರಿಂದ ಶಹಬ್ಬಾಸ್


ಕೊರೊನಾ ಸೋಂಕಿತರಿಗೆ ಯಾವುದೇ ಬೇಸರ ಕಾಡದಂತೆ ವೈದ್ಯರು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಅದಕ್ಕೆ ಈ ಡಾನ್ಸ್‌ ದೃಶ್ಯವೇ ಸಾಕ್ಷಿ. ಇದೊಂದೇ ಅಲ್ಲ. ನಿನ್ನೆಯಷ್ಟೇ ಅಸ್ಸಾಂನ ಇಎನ್‌ಟಿ ಸರ್ಜನ್ ಡಾ ಅರೂಪ್ ಸೇನಾಪತಿ ಎಂಬವರು ಅದ್ಭುತವಾಗಿ ಡಾನ್ಸ್‌ ಮಾಡಿದ್ದ ವಿಡಿಯೋ ಎಲ್ಲರ ಗಮನ ಸೆಳೆದಿತ್ತು. ಅರೂಪ್ ಅವರು ಕೂಡಾ ಕೊರೊನಾ ಸೋಂಕಿತರ ಮೊಗದಲ್ಲಿ ಮಂದಹಾಸ ಮೂಡಿಸಲು ಬಾಲಿವುಡ್ ಹಾಡಿಗೆ ಡಾನ್ಸ್‌ ಮಾಡಿದ್ದರು. ಪಿಪಿಇ ಕಿಟ್ ಧರಿಸಿಯೇ ಇವರು ನೃತ್ಯ ಮಾಡಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ