ಆ್ಯಪ್ನಗರ

ಟ್ರಕ್‌ನಿಂದ ಮಹಿಳೆಯರನ್ನು ಇಳಿಸಲು ಜೆಸಿಬಿಯೇ ಬರಬೇಕಾಯಿತು...!

ಸಾಮಾಜಿಕ ಮಾಧ್ಯಮದಲ್ಲಿ ಈಗ ವಿಡಿಯೋವೊಂದು ಸಖತ್ ಆಗಿಯೇ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಜನ ಬಿದ್ದು ಬಿದ್ದು ನಗುತ್ತಿದ್ದಾರೆ.

Vijaya Karnataka Web 27 Feb 2020, 2:11 pm
ಗುಡ್ಡದ ಮಣ್ಣನ್ನು ಅಗೆಯುವುದಕ್ಕೋ, ನೆಲ ಸಮತಟ್ಟು ಮಾಡುವುದಕ್ಕೂ ಅಥವಾ ಇನ್ನಾವುದೋ ಶ್ರಮದ ಕೆಲಸಕ್ಕೆ ಜೆಸಿಬಿಗಳು ಬಳಕೆಯಾಗುವುದನ್ನು ನೋಡಿರುತ್ತೀರಿ... ಆದರೆ, ಎಂದಾದರೂ ಲಾರಿಯಿಂದ ಜನರನ್ನು ಇಳಿಸಲು ಜೆಸಿಬಿ ಬಳಕೆಯಾಗಿದ್ದನ್ನೂ ನೋಡಿದ್ದೀರಾ...? ಅಂತಹ ವಿಡಿಯೋ ನೋಡಿಲ್ಲದಿದ್ದರೆ ನಾವ್ ತೋರಿಸ್ತೀವಿ ನೋಡಿ...
Vijaya Karnataka Web jcb
| Screengrab from video | Courtesy : Sandeep Joshi/Facebook


Also Read : ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ ಈ ಅದ್ಭುತ ಫೋಟೋಗ್ರಫಿ...

ಹಳ್ಳಿ ಜೀವನವೇ ಚೆಂದ. ಅಲ್ಲಿರುವ ಖುಷಿ ಬೇರೆ ಕಡೆ ಸಿಗಲು ಸಾಧ್ಯವಿಲ್ಲ. ಈ ಜನರ ಖುಷಿಯನ್ನೇ ನೋಡಿ... ಲಾರಿಯಿಂದ ಜೆಸಿಬಿ ಮೂಲಕ ಇಳಿಯುವಾಗ ಇವರ ಸಡಗರವನ್ನು ನೋಡುವುದೇ ಚಂದ...

Also Read : ಫ್ಯಾಷನ್‌ ಲೋಕಕ್ಕೆ 67ರ ವೃದ್ಧೆಯ ಎಂಟ್ರಿ : ಮಗಳೊಂದಿಗೆ ಫೋಟೋ ಕ್ಲಿಕ್


ಇದು ಗುಜರಾತಿನ ಹಳ್ಳಿಯೊಂದರಲ್ಲಿ ಸೆರೆಯಾದ ದೃಶ್ಯ. ಇದು ಯಾವಾಗ ಸೆರೆಯಾದ ದೃಶ್ಯ ಎಂದು ಗೊತ್ತಿಲ್ಲ. ಆದರೆ, ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ಸಖತ್ ಆಗಿಯೇ ವೈರಲ್ ಆಗುತ್ತಿದೆ. ಕಾರ್ಯಕ್ರಮಕ್ಕೆ ಲಾರಿಯಲ್ಲಿ ಬಂದಿದ್ದ ಮಹಿಳೆಯರಿಗೆ ಇಳಿಯುವುದಕ್ಕೆ ಕಷ್ಟವಾಗುತ್ತಿತ್ತು. ಹೀಗಾಗಿ, ಅಲ್ಲೇ ಇದ್ದ ಜೆಸಿಬಿ ಸಹಾಯದಿಂದ ಇವರೆಲ್ಲಾ ಲಾರಿಯಿಂದ ಕೆಳಗಿಳಿದಿದ್ದಾರೆ.

Also Read : ಸಿಕ್ಸ್‌ ಪ್ಯಾಕ್‌ನಲ್ಲೇ ಮೋಡಿ ಮಾಡಿದ ಆರು ವರ್ಷದ ಕಂದ...

ಈ ಸಣ್ಣ ಖುಷಿಯನ್ನೂ ಇವರೆಲ್ಲಾ ದೊಡ್ಡ ಮಟ್ಟದಲ್ಲಿ ಸಂಭ್ರಮಿಸಿದ್ದರು. ಜೆಸಿಬಿಯಿಂದ ಇಳಿಯುವಾಗ ಇವರ ಮುಖದಲ್ಲಿದ್ದ ಆನಂದ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಈ ವಿಡಿಯೋ ನೆಟ್ಟಿಗರಿಗೂ ಇಷ್ಟವಾಗಿದೆ. ಹಳ್ಳಿ ಜನರ ಈ ಖುಷಿಗೆ ಎಲ್ಲಾ ನೆಟ್ಟಿಗರೂ ಫಿದಾ ಆಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ