ಆ್ಯಪ್ನಗರ

ಆನೆಗಳ ಶಿಸ್ತಿನ ನಡಿಗೆ : ಗುಂಪಲ್ಲಿದ್ದರೂ ಅದೇ ಗತ್ತು... ಅದೇ ಗಾಂಭೀರ್ಯ

ಆನೆಗಳ ಬೃಹತ್ ಗುಂಪೊಂದು ನೀರನ್ನು ಹುಡುಕುತ್ತಾ ಶಿಸ್ತಿನಿಂದ ಹೆಜ್ಜೆ ಇಡುವ ಅಪೂರ್ವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೆಟ್ಟಿಗರಲ್ಲೂ ಕುತೂಹಲ ಕೆರಳಿಸಿದೆ...

Vijaya Karnataka Web 23 Apr 2020, 8:36 pm
ಅದು ಆನೆಗಳ ಗುಂಪು... ಹಾಗಂತ, ಅದು ಮೂರ್ನಾಕು ಆನೆಗಳಿರುವ ಸಣ್ಣ ಗುಂಪೇನು ಅಲ್ಲ. ಸಾಕಷ್ಟು ಆನೆಗಳು ಈ ಗುಂಪಿನಲ್ಲಿದ್ದವು. ಆದರೆ, ಗುಂಪಿನಲ್ಲಿ ಇಷ್ಟು ಪ್ರಮಾಣದ ಆನೆಗಳಿದ್ದರೂ ಶಿಸ್ತಿಗೇನು ಕೊರತೆ ಇಲ್ಲ. ಕೆಲವೊಮ್ಮೆ ಪ್ರಾಣಿಗಳಿಂದಲೂ ನಾವು ಕಲಿಯಬೇಕಾದ ಪಾಠ ಹಲವಿವೆ ಎಂಬುದಕ್ಕೆ ಸಾಕ್ಷಿ ಈ ಗುಂಪು.
Vijaya Karnataka Web elephant
| Screengrab from video | Courtesy : Susanta Nanda IFS/Twitter


Also Read : ಬೆಕ್ಕುಗಳ ಈ ತುಂಟಾಟ ನಿಮಗೆ ಖಂಡಿತಾ ಇಷ್ಟವಾಗುತ್ತದೆ...


ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಟ್ವಿಟ್ಟರ್‌ನಲ್ಲಿ ಈ ಅಪೂರ್ವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಆಫ್ರಿಕಾದಲ್ಲಿ ಸೆರೆಯಾದ ದೃಶ್ಯವಿದು. ಆನೆಗಳು ನೀರನ್ನು ಹುಡುಕುತ್ತಾ ಸಾಗುವಾಗ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಹೀಗೆ ಹೋಗುವಾಗಲೂ ಆನೆಗಳು ತಮ್ಮ ಬಳಗದ ಶಿಸ್ತನ್ನು ಮರೆತಿಲ್ಲ. ಅಡ್ಡಾದಿಡ್ಡಿಯಾಗಿ, ಬೇಕಾಬಿಟ್ಟಿ ಎಂಬಂತೆ ಹೋಗದೆ ಸಾಲಾಗಿ ಶಿಸ್ತು, ಸಂಯಮದಿಂದ ಇಲ್ಲಿ ಗಜಗೆಳೆಯರು ಪ್ರಯಾಣಿಸಿದ್ದಾರೆ. ಈ ಶಿಸ್ತಿನ ಹೆಜ್ಜೆಯನ್ನು ನೋಡುವುದಕ್ಕೇ ಬಲು ಸೊಗಸು...

Also Read : ವಾಷಿಂಗ್ ಮಷಿನ್‌ನೊಳಗೆ ಸಿಕ್ಕಿಬಿದ್ದ ಯುವತಿ! : ರಕ್ಷಣೆಗೆ ಬರಬೇಕಾಯಿತು ಅಗ್ನಿಶಾಮಕ ದಳ!

ಇಂತಹ ಅಪೂರ್ವ ವಿಡಿಯೋ ಕ್ಷಣಮಾತ್ರದಲ್ಲಿ ವೈರಲ್ ಆಗಿದೆ. ಅಪ್ಲೋಡ್ ಆದ ತಕ್ಷಣ ಅದೆಷ್ಟೋ ಮಂದಿ ಈ ವಿಡಿಯೋ ವೀಕ್ಷಿಸಿದ್ದಾರೆ. ಕಮೆಂಟ್ ಬಾಕ್ಸಿನಲ್ಲೂ ಎಲ್ಲರೂ ಆನೆಗಳ ಶಿಸ್ತನ್ನು ಕೊಂಡಾಡಿದ್ದಾರೆ. ನೆಟ್ಟಿಗರೊಬ್ಬರು, ಈ ಶಿಸ್ತಿನ ನಡಿಗೆ ನನಗೆ ನನಗೆ ಶಾಲಾ ದಿನಗಳನ್ನು ನೆನಪಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Also Read : ಅಬ್ಬಬ್ಬಾ..! ಕಾರು ಹಾರುವುದನ್ನು ನೋಡಿದ್ದೀರಾ..? : ಇದು ಭಯಾನಕ ಆಕ್ಸಿಡೆಂಟ್!

ಆನೆಗಳ ಜೀವನವೇ ಹಾಗೆ. ಸದಾ ತನ್ನ ಬಳಗದೊಂದಿಗೇ ಇವುಗಳು ವಾಸಿಸುತ್ತಿರುತ್ತವೆ. ಹೀಗೆ ಗುಂಪಾಗಿ ಹೋಗಬೇಕೆಂದಾಗಲೂ ತಮ್ಮ ಹಿಂಡಿನ ಲೀಡರನ್ನು ಹಿಂಬಾಲಿಸಿಕೊಂಡು ಇವುಗಳು ಸಾಗುತ್ತವೆ. ಹಿರಿಯಾನೆ ಗುಂಪನ್ನು ಮುನ್ನಡೆಸಿದರೆ ಬಲಶಾಲಿ ಆನೆ ಗುಂಪಿನ ಸಾಲಿನ ಕೊನೆಯಲ್ಲಿ ನಿಂತು ಹೆಜ್ಜೆ ಇಡುತ್ತದೆ. ಗುಂಪಿನಲ್ಲಿ ಮರಿಗಳಿದ್ದರೆ ಅವುಗಳನ್ನೂ ತುಂಬಾ ಜಾಗರೂಕತೆಯಿಂದಲೇ ಆನೆಗಳು ಇನ್ನಷ್ಟು ಜಾಗರೂಕತೆ ವಹಿಸುತ್ತವೆ. ಇದೇ ಕಾರಣಕ್ಕೆ ಆನೆಗಳ ವಿಡಿಯೋಗಳನ್ನು ಎಷ್ಟು ನೋಡಿದರೂ ಮನಸ್ಸು ತಣಿಯದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ