ಆ್ಯಪ್ನಗರ

ಅಬ್ಬಬ್ಬಾ... ಒಂದೇ ಸಲ ಇಷ್ಟು ಸಿಂಹಗಳು ಒಟ್ಟಿಗೆ ಹೆಜ್ಜೆ ಇಡುವುದನ್ನು ಎಂದಾದರೂ ನೋಡಿದ್ದೀರಾ...?

ಒಂದು ಸಿಂಹ ಗಾಂಭೀರ್ಯದಿಂದ ಹೆಜ್ಜೆ ಹಾಕುವುದನ್ನು ನೋಡುವಾಗಲೇ ಮನಸ್ಸಿಗೆ ಖುಷಿಯಾಗುತ್ತದೆ. ಅಂತಹದರಲ್ಲಿ ಗುಂಪಿನಲ್ಲಿ ಹಲವಾರು ಸಿಂಹಗಳು ನಡೆದುಕೊಂಡು ಬಂದರೆ ಹೇಗಿರುತ್ತದೆ...? ಖಂಡಿತಾ ಅಲ್ಲೊಂದು ಸುಂದರ ದೃಶ್ಯ ಸೃಷ್ಟಿಯಾಗುತ್ತದೆ...

Vijaya Karnataka Web 24 Jan 2020, 8:29 am
ಗಾಂಭೀರ್ಯದ ಹೆಜ್ಜೆ... ಪ್ರತಿಯೊಂದು ಸಿಂಹದ ಕಣ್ಣಿನಲ್ಲೂ ತೀಕ್ಷ್ಣ ನೋಟ... ವ್ಹಾವ್... ಗುಂಪಿನಲ್ಲಿ ಅನೇಕ ಸಿಂಹಗಳು ಒಟ್ಟಿಗೆ ಹೀಗೆ ನಡೆದುಕೊಂಡು ಬರುತ್ತಿದ್ದರೆ ಕಣ್ಣಿಗಂತೂ ಹಬ್ಬವೋ ಹಬ್ಬ...
Vijaya Karnataka Web lion
| Screengrab from video | Photo Credit : Susanta Nanda/Twitter


Also Read : The Island of The Dolls : ಬರೀ ಗೊಂಬೆಗಳೇ ತುಂಬಿರುವ ಈ ದ್ವೀಪಕ್ಕೆ ಹೋಗಲು ಜನ ಹೆದರುತ್ತಾರೆ...!

ಸಿಂಹಗಳು ಕಾಡಿನ ರಾಜನ ಠೀವಿಯಲ್ಲಿ ಹೆಜ್ಜೆ ಇಟ್ಟು ಬರುತ್ತಿರುವ ವಿಡಿಯೋ ಸದ್ಯ ಟ್ವಿಟ್ಟರಿನಲ್ಲಿ ಹವಾ ಎಬ್ಬಿಸಿದೆ. ಈ ವಿಡಿಯೋವನ್ನು ನೋಡುವಾಗಲೇ ಮನಸ್ಸಿಗೆ ಖುಷಿ ಎಂದೆನಿಸುತ್ತದೆ... ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಿಂಹಗಳು ಜೊತೆಯಾಗಿ ನಡೆದುಕೊಂಡು ಬರುತ್ತಿರುವ ಈ ಅದ್ಭುತ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಸುಮಾರು ಒಂಭತ್ತು ಸೆಕೆಂಡಿನ ಈ ವಿಡಿಯೋದಲ್ಲಿ ಸಿಂಹಗಳು ರಸ್ತೆಯ ನಡುವೆ ನಡೆದಾಡುವ ದೃಶ್ಯವಿದೆ. ಜೊತೆಗೆ, `ದಿ ಒರಿಜಿನಲ್ ಕ್ಯಾಟ್ ವಾಕ್' ಎಂದು ಸುಸಂತ ನಂದ ಕ್ಯಾಪ್ಶನ್ ಕೂಡಾ ಕೊಟ್ಟಿದ್ದಾರೆ.

Also Read : ಪಾಳು ಬಿದ್ದ ಈ ಮಹಲ್‌ನಲ್ಲಿ ಇದೆಯಂತೆ ಅತಿಮಾನುಷ ಶಕ್ತಿಗಳ ಸಂಚಾರ...! ನಿಜ ಏನು...?


ಈ ವಿಡಿಯೋ ಟ್ಟಿಟ್ಟರಿನಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ನಡುವೆ, ಕೆಲವರು ಇದು ಗ್ರಾಫಿಕ್ಸ್‌ ಮೂಲಕ ಮಾಡಿರುವ ವಿಡಿಯೋ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಆದರೆ, ಇದೊಂದು ಎಡಿಟೆಡ್ ವಿಡಿಯೋ ಎಂಬುದನ್ನು ಅಲ್ಲಗಳೆದಿರುವ ಸುಸಂತ ನಂದ, ತಮ್ಮಲ್ಲಿರುವ ಇನ್ನೊಂದು ವಿಡಿಯೋವನ್ನು ಈ ಪ್ರತಿಕ್ರಿಯೆಗೆ ಉತ್ತರವಾಗಿ ಅಪ್ಲೋಡ್ ಮಾಡಿದ್ದಾರೆ.

Also Read : ರಕ್ತಸಿಕ್ತ ಇತಿಹಾಸಕ್ಕೆ ಸಾಕ್ಷಿಯಾಗಿದ್ದ ಆ ದ್ವಾರದ ಬಳಿ ಹೋಗುವುದಕ್ಕೆ ಜನ ಈಗಲೂ ಹೆದರುತ್ತಾರೆ...!


ಜೊತೆಗೆ, ಇದು ಎಲ್ಲಿ ಸೆರೆಯಾದ ವಿಡಿಯೋ ಎಂಬ ಚರ್ಚೆಯೂ ಶುರುವಾಗಿತ್ತು. ಇದಕ್ಕೂ ಪ್ರತಿಕ್ರಿಯೆ ನೀಡಿರುವ ಸುಸಂತ ನಂದ ಇದು ಭಾರತದ ಸಿಂಹಗಳ ವಿಡಿಯೋ ಅಲ್ಲ. ದಕ್ಷಿಣ ಆಫ್ರಿಕಾದಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯವಿದು ಎಂದಿದ್ದಾರೆ.

ಸದ್ಯ ಈ ಸಿಂಹಗಳ ಭರ್ಜರಿ ನಡಿಗೆಯನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ... ಬಹುಶಃ ನಿಮಗೂ ಈ ವಿಡಿಯೋ ಇಷ್ಟವಾಗಿರಬಹುದು...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ