ಆ್ಯಪ್ನಗರ

ಭಯಾನಕ ಚೀತಾಗಳು ಗರ್ಜಿಸುವುದಿಲ್ಲ, ಬೆಕ್ಕಿನಂತೆ `ಮಿಯಾಂವ್' ಎನ್ನುತ್ತವೆ!: ಇಲ್ಲಿದೆ ಅಚ್ಚರಿಯ ವಿಡಿಯೋ

ವನ್ಯಲೋಕದ ಬಗ್ಗೆ ತಿಳಿದುಕೊಳ್ಳಬೇಕೆಂದುಕೊಳ್ಳುವವರಿಗೆ ಇದು ಕೂಡಾ ಒಳ್ಳೆಯ ವಿಡಿಯೋ. ಚೀತಾಗಳ ಬದುಕಿನ ಅಪರೂಪದ ದೃಶ್ಯವಿದು.

Vijaya Karnataka Web 30 Oct 2020, 1:10 pm
ಚೀತಾಗಳನ್ನು ನೋಡುವಾಗ ಭಯವಾಗುತ್ತದೆ... ಇವುಗಳ ತೀಕ್ಷ್ಣ ನೋಟವೇ ಹೆದರಿಕೆ ಸೃಷ್ಟಿಸುತ್ತದೆ... ಆದರೆ, ಹೀಗೆ ನೋಟದಲ್ಲೇ ಭಯ ಹುಟ್ಟಿಸುವ ಈ ಚೀತಾಗಳಿಗೆ ಹುಲಿ, ಸಿಂಹ, ಚಿರತೆಯಂತೆ ಗರ್ಜಿಸಲು ಸಾಧ್ಯವಿಲ್ಲ...! ಅಚ್ಚರಿಯಾದರೂ ಇದು ಸತ್ಯ. ಈ ಬಗ್ಗೆ ನಿಮಗೇನಾದರೂ ಅನುಮಾನಗಳಿದ್ದರೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನಿಮ್ಮ ಎಲ್ಲಾ ಅನುಮಾನಗಳಿಗೆ ಉತ್ತರವಾಗಿದೆ.
Vijaya Karnataka Web Image by sharonjoy17 from Pixabay
| Representative image | Image by sharonjoy17 from Pixabay


Also Read : 10ನೇ ಮದುವೆಯೂ ಮುರಿದು ಬಿದ್ದ ಬಳಿಕ ಮತ್ತೆ ಸರಿಯಾದ ಸಂಗಾತಿ ಹುಡುಕುತ್ತಿರುವ ಮಹಿಳೆ!

ವನ್ಯಜೀವಿಗಳ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲಿಗೆ ಇದು ಬಲು ಆಸಕ್ತಿದಾಯಕ ದೃಶ್ಯ. ಸಾಮಾನ್ಯವಾಗಿ ಚೀತಾಗಳನ್ನು ಕಂಡಾಗ ಇವುಗಳೂ ಗರ್ಜಿಸುತ್ತವೆ ಎಂದೆಸಿಸುತ್ತದೆ. ಆದರೆ, ಸಿಂಹ, ಹುಲಿ, ಚಿರತೆ ಮತ್ತು ಜಾಗ್ವಾರ್‌ಗಳು ಮಾತ್ರ ಗರ್ಜಿಸುವ ಸಾಮರ್ಥ್ಯವನ್ನು ಹೊಂದಿವೆ. ಚೀತಾಗಳ ಧ್ವನಿ ಪೆಟ್ಟಿಗೆಯಲ್ಲಿ ಮೂಳೆಗಳು ಸ್ಥಿರವಾದ ರಚನೆಯುಳ್ಳುಗಳಾಗಿರುತ್ತವೆ. ಹೀಗಾಗಿ, ದೊಡ್ಡ ಮಟ್ಟದ ಶಬ್ದ ಹೊರಡಿಸಲು ಇವುಗಳಿಗೆ ಸಾಧ್ಯವಾಗುವುದಿಲ್ಲ. ಇದೇ ರಚನೆ ಸಣ್ಣ ಬೆಕ್ಕಿನಲ್ಲೂ ಇರುತ್ತದೆ.

Also Read : ಅಂದು ಮಕ್ಕಳಿಲ್ಲವೆಂದು ಕೊರಗಿದ್ದರು ದಂಪತಿ, ಈಗ ಒಂದೇ ಹೆರಿಗೆಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ್ದಾರೆ ತಾಯಿ!

ಸದ್ಯ @animal0lovers ಎಂಬ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದು ಅಪ್ಲೋಡ್ ಆಗಿದೆ. ಈ ಕ್ಲಿಪ್‌ನಲ್ಲಿ ಎರಡು ಚೀತಾಗಳು ಕಾಣಸಿಗುತ್ತವೆ. ಇದರಲ್ಲಿ ಒಂದು ಚೀತಾ ನಿರಂತರ ಮನೆಯಲ್ಲಿರುವ ಸಾಕುಬೆಕ್ಕಿನಂತೆ `ಮಿಯಾಂವ್, ಮಿಯಾಂವ್' ಎಂದು ಶಬ್ದ ಮಾಡುವುದನ್ನು ನೋಡಬಹುದು. ಅಭಯಾರಣ್ಯದ ಆವರಣದೊಳಗಿರುವ ಈ ಚೀತಾಗಳ ಈ ದೃಶ್ಯವನ್ನು ಪ್ರವಾಸಿಗರು ಸೆರೆ ಹಿಡಿದಿದ್ದಾರೆ. `ಇದು ಬಹಳ ಮುಖ್ಯ. ಚೀತಾಗಳು ಗರ್ಜಿಸುವುದಿಲ್ಲ. ಅವುಗಳು ಮನೆ ಬೆಕ್ಕಿನಂತೆ ಮಿಯಾಂವ್ ಎನ್ನುತ್ತವೆ' ಎಂದು ಕ್ಯಾಪ್ಶನ್ ಬರೆದು ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ.


Also Read : ಕ್ಯಾನ್ಸರ್ ಪೀಡಿತ ಕಂದನ ಖುಷಿಗಾಗಿ ವೈದ್ಯರ ಬ್ಯಾಲೆ ಡಾನ್ಸ್‌ : ಕಲ್ಲುಹೃದಯವನ್ನೂ ಕರಗಿಸುವ ದೃಶ್ಯವಿದು

ಸದ್ಯ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಎಲ್ಲರೂ ಈ ಅಪರೂಪದ ಸಂಗತಿ ಕೇಳಿ ಅಚ್ಚರಿಪಟ್ಟಿದ್ದಾರೆ. `ವ್ಹಾವ್ ಇವುಗಳ ಧ್ವನಿ ಭಯ ಹುಟ್ಟಿಸುವುದಿಲ್ಲ. ಇವುಗಳು ನೋಡಲು ಮುದ್ದಾಗಿವೆ' ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಹಲವರೂ ಈ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ