ಆ್ಯಪ್ನಗರ

ಮಾಸ್ಕ್‌ ಧರಿಸಿಕೊಂಡು ಚಿಣ್ಣರ ವಾಕಿಂಗ್ : ಪುಟಾಣಿಗಳ ಆಸಕ್ತಿಗೆ ಎಲ್ಲರೂ ಫಿದಾ

ಮಾಸ್ಕ್‌ ಧರಿಸಿಕೊಂಡು ಚಿಣ್ಣರಿಬ್ಬರು ವಾಕ್ ಮಾಡುವ ವಿಡಿಯೋ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಇದು ಮಾಸ್ಕ್‌ ಬಳಕೆಯ ಜಾಗೃತಿ ಮೂಡಿಸಲು ಇನ್ನಷ್ಟು ಸಹಕಾರಿಯಾಗಿದೆ.

Vijaya Karnataka Web 10 Jul 2020, 7:58 pm
ಈಗ ಎಲ್ಲಿ ನೋಡಿದರೂ ಒಂದೇ ಮಾತು ಅದು ಕೊರೊನಾ ವೈರಸ್‌ನದ್ದು. ಈ ಕೋವಿಡ್ 19 ಇಡೀ ವಿಶ್ವದ ಜನ ನೆಮ್ಮದಿಗೇ ಕೊಳ್ಳಿ ಇಟ್ಟಿದೆ. ಈ ರಕ್ಕಸ ವೈರಾಣು ಕಾರಣದಿಂದ ಜನರ ಜೀವನವೇ ಬದಲಾಗಿದೆ. ಇದರ ಜೊತೆಗೆ ಕ್ಷಣಕ್ಷಣಕ್ಕೂ ವ್ಯಾಪಿಸುತ್ತಿರುವ ಡೆಡ್ಲಿ ವೈರಸ್ ಜನರನ್ನು ಮನೆಯಿಂದ ಹೊರಗೆ ಬರುವುದಕ್ಕೂ ಭಯಬೀಳುವಂತೆ ಮಾಡಿದೆ. ಆದರೆ, ಸದಾ ಕಾಲ ಮನೆಯೊಳಗೆ ಇರಲು ಕೂಡಾ ಸಾಧ್ಯವಿಲ್ಲ. ಅಗತ್ಯ ಕೆಲಸಗಳಿಗಾದರೂ ಯಾರಾದರೂ ಮನೆಯಿಂದ ಹೊರಗೆ ಬರಲೇಬೇಕು. ಹೀಗಾಗಿ, ಮಾಸ್ಕ್‌ ಎಂಬುವುದು ಎಲ್ಲರ ಬದುಕಿನ ಅವಿಭಾಜ್ಯ ಅಂಗ ಎಂಬಂತಾಗಿದೆ. ಮಾಸ್ಕ್‌ ಧರಿಸಿಕೊಂಡೇ ಮನೆಯಿಂದ ಹೊರಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಮಾಸ್ಕ್‌ ಧರಿಸುವುದು ಅನಿವಾರ್ಯವೂ ಆಗಿದೆ. ಮಾಸ್ಕ್‌ ಧರಿಸುವುದರಿಂದ ಬರೀ ಅದನ್ನು ಧರಿಸಿದವರಿಗಷ್ಟೇ ಲಾಭವಲ್ಲ, ಅವರ ಸುತ್ತಮುತ್ತ ಇರುವವರಿಗೂ ಒಳಿತಾಗಲಿದೆ...
Vijaya Karnataka Web Importance Of Face Masks
| Screengrab from video | Courtesy : Rex Chapman/Twitter


Also Read : ಅಚ್ಚರಿಯ ನೀಲಿ ಜ್ವಾಲಾಮುಖಿ...! : ಅವತಾರ್ ಸಿನೆಮಾವನ್ನು ನೆನಪಿಸಿದ ನೆಟ್ಟಿಗರು

ಆದರೆ, ಎಷ್ಟೇ ಕಟ್ಟುನಿಟ್ಟಿನ ಕ್ರಮ ಜಾರಿಗೆ ತಂದರೂ ಒಂದಷ್ಟು ಸಂದರ್ಭದಲ್ಲಿ ಜನ ಮಾಸ್ಕ್‌ ಬಗೆಗೂ ನಿರ್ಲಕ್ಷ್ಯ ವಹಿಸಿದ್ದುಂಟು. ಹೀಗೆ ನಿರ್ಲಕ್ಷ್ಯ ಮಾಡಿದವರು ಈ ಪುಟಾಣಿಗಳ ಆಸಕ್ತಿಯನ್ನು ನೋಡಿ ಕಲಿಯಬೇಕು. ಯಾಕೆಂದರೆ, ಸದ್ಯ ಟ್ವಿಟ್ಟರ್‌ನಲ್ಲಿ ಇಬ್ಬರು ಪುಟಾಣಿಗಳ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಾಸ್ಕ್‌ ಧರಿಸಿರುವ ಇವರು ಬಾಲಕರು ವಾಕ್ ಮಾಡುತ್ತಿರುವ ದೃಶ್ಯವಿದೆ. ಮಾಸ್ಕ್‌ ಧರಿಸುವ ಅಗತ್ಯತೆಯ ಬಗೆಗೆ ಈ ಪುಟಾಣಿಗಳಿಗೆ ಇರುವ ಅರಿವು ಮತ್ತು ಆಸಕ್ತಿಗೆ ಈಗ ನೆಟ್ಟಿಗರು ಫಿದಾ ಆಗಿದ್ದಾರೆ.

Also Read : ಈ ಪ್ರಖ್ಯಾತ ಹೋಟೆಲ್‌ನ ಕೋಣೆ ಕೋಣೆಗೆ ಹೋದರೂ ಸಿಗುತ್ತದೆ ದೆವ್ವದ ಕತೆ...!

ಬಾಸ್ಕೆಟ್‌ಬಾಲ್ ಮಾಜಿ ಆಟಗಾರ ರೆಕ್ಸ್‌ ಚಾಪ್ಮನ್ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. `ಮ್ಯಾಕ್ಸ್ ವೆಲ್ ಮತ್ತು ಫಿನ್ನೆಗನ್ ತಮ್ಮ ಫೇಸ್‌ಮಾಸ್ಕ್‌ ಧರಿಸಿ ಅದರಿಂದ ಖುಷಿಯಿಂದ ಇರಲು ಸಾಧ್ಯವಾಗುತ್ತದೆ ಎಂದ ಮೇಲೆ ನೀವು ಕೂಡಾ ಇದನ್ನು ಮಾಡಬಹುದು' ಎಂದು ಬರೆದುಕೊಂಡಿರುವ ಚಾಪ್ಮನ್ ಫೇಸ್‌ಮಾಸ್ಕ್‌ ಬಳಕೆಯ ಅಗತ್ಯತೆಯ ಬಗ್ಗೆ ತಿಳಿಹೇಳಿದ್ದಾರೆ.

Also Read : ಈ ಕಾಡಿನೊಳಗೆ ಹೋದರೆ ಕಾಡುತ್ತದೆಯಂತೆ ಬಗೆಬಗೆ ಸಮಸ್ಯೆ...!

ಸದ್ಯ ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿ ಮಕ್ಕಳಿಗೆ ಶಹಬ್ಬಾಸ್ ಹೇಳಿದ್ದಾರೆ. ಅಲ್ಲದೆ, ಹಲವರು ಮಕ್ಕಳ ಉತ್ಸಾಹಕ್ಕೆ ಮನಸೋತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ