ಆ್ಯಪ್ನಗರ

ಬಾಲಿವುಡ್ ಹಾಡಿಗೆ ತಂದೆ ಮಗನ ಜಬರ್ದಸ್ತ್‌ ಸ್ಟೆಪ್ಸ್‌ : ಅದ್ಭುತ ಡಾನ್ಸಿಗೆ ನೆಟ್ಟಿಗರು ಫಿದಾ

ಬಾಲಿವುಡ್ ಹಾಡಿಗೆ ತಂದೆ ಮಗ ಅದ್ಭುತವಾಗಿ ಕುಣಿಯುವ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಎಲ್ಲರೂ ಈ ಇಬ್ಬರ ನೃತ್ಯ ಕೌಶಲ್ಯಕ್ಕೆ ಫಿದಾ ಆಗಿದ್ದಾರೆ.

Vijaya Karnataka Web 1 Aug 2020, 1:05 pm
ಕುಟುಂಬದ ಕಾರ್ಯಕ್ರಮಗಳಲ್ಲಿ ಎಲ್ಲರೂ ಒಟ್ಟಾಗಿ ಸೇರಿದಾಗ ಆ ಖುಷಿಯೇ ಬೇರೆ... ಇನ್ನು ಡಿಜೆ ಇದ್ದರಂತೂ ಮುಗಿದೇ ಹೋಯ್ತು ನಮ್ಮ ಉತ್ಸಾಹಿಗಳು ಖುಷಿಯಿಂದ ಕುಣಿದಾಡುತ್ತಾರೆ. ಈ ಖುಷಿಯ ಕುಣಿತವನ್ನು ನೋಡುವುದು ಕೂಡಾ ಒಂದು ಸಡಗರ. ಅಂತೆಯೇ ಇಲ್ಲೊಂದು ಜೋಡಿ ಸಖತ್ ಮ್ಯೂಸಿಕ್‌ಗೆ ಜಬರ್‌ದಸ್ತ್‌ ಸ್ಟೆಪ್ಸ್‌ ಹಾಕಿದೆ. ಇವರಿಬ್ಬರ ಡಾನ್ಸ್‌ ಮೋಡಿಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಇಷ್ಟಕ್ಕೂ ಇಲ್ಲಿ ಡಾನ್ಸ್‌ ಮಾಡಿದ್ದು ತಂದೆ ಮಗನ ಜೋಡಿ.
Vijaya Karnataka Web Dance Performance
| Screengrab from video | Courtesy : Roshan Prakash/Twitter


Also Read : ಅದೃಷ್ಟ ಎಂದರೆ ಇದು : ಕೆಲಸ ಕಳೆದುಕೊಂಡಿದ್ದ ಸೆಕ್ಯೂರಿಟಿ ಗಾರ್ಡ್‌ ಈಗ 31 ಕೋಟಿ ರೂ. ಒಡೆಯ!

2000ರಲ್ಲಿ ರಿಲೀಸ್ ಆದ ಹೃತಿಕ್ ರೋಷನ್ ಅಭಿನಯದ `ಕಹೋ ನಾ ಪ್ಯಾರೇ ಹೇ' ಚಿತ್ರ ಬಾಲಿವುಡ್‌ನ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಒಂದು. ಈ ಚಿತ್ರ ಹಾಡುಗಳು ಸೂಪರ್. ಇಂದಿಗೂ ಈ ಹಾಡುಗಳು ಹಾಗೆಯೇ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿವೆ. ಇದೇ ಚಿತ್ರದ 'ಇಕ್ ಪಾಲ್ ಕಾ ಜೀನಾ' ಹಾಡಿಗೆ ವಿವಾಹ ಕಾರ್ಯಕ್ರಮವೊಂದರಲ್ಲಿ ಈ ತಂದೆ ಮಗ ಅದ್ಭುತವಾಗಿ ಕುಣಿದಿದ್ದಾರೆ. ಸಾಂಪ್ರದಾಯಿಕ ಬಟ್ಟೆ ತೊಟ್ಟು ಈ ಜೋಡಿ ಸ್ಟೆಪ್ಸ್‌ ಹಾಕುತ್ತಿದ್ದರೆ ಆ ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳೆಲ್ಲಾ ಹರ್ಷೋದ್ಗಾರದೊಂದಿಗೆ ಇವರಿಬ್ಬರನ್ನು ಹುರಿದುಂಬಿಸುತ್ತಿದ್ದರು.

Also Read : ಪೊಲೀಸ್ `ಬಂಧನ'ದಲ್ಲಿದ್ದ ಹುಂಜ ಕೋರ್ಟ್ ಆದೇಶದಂತೆ 8 ತಿಂಗಳ ಬಳಿಕ ರಿಲೀಸ್!

ಇಲ್ಲಿದೆ ವೈರಲ್ ವಿಡಿಯೋ :

Also Read : ಧಗಧಗ ಉರಿದ ಗ್ಯಾಸ್ ಸಿಲಿಂಡರ್ : ಪ್ರಾಣದ ಹಂಗು ತೊರೆದು ಬೆಂಕಿ ನಂದಿಸಿದ ಕಾನ್ಸ್‌ಟೇಬಲ್

ರೋಷನ್ ಪ್ರಕಾಶ್ ಎಂಬವರು ಈ ಅದ್ಭುತ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಯಾವಾಗ ಸೆರೆಯಾದ ದೃಶ್ಯ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ರೋಷನ್ ಪ್ರಕಾಶ್ ಇದು ತಂದೆ ಮಗನ ಜೋಡಿ ಎಂದು ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸಾವಿರಾರು ಜನ ಈ ವಿಡಿಯೋ ನೋಡಿ ಇಷ್ಟಪಟ್ಟಿದ್ದಾರೆ. ಎಲ್ಲರೂ ಪುತ್ರನಿಗಿಂತ ತಂದೆಯ ಉತ್ಸಾಹವನ್ನು ಕೊಂಡಾಡಿದ್ದಾರೆ. ಬಹುಶಃ ನೀವು ಕೂಡಾ ಈ ಅಪೂರ್ವ ಜೋಡಿಯ ಅದ್ಭುತ ಡಾನ್ಸಿಗೆ ಫಿದಾ ಆಗಿರಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ