ಆ್ಯಪ್ನಗರ

ವಿಶೇಷ ಚೇತನ ವ್ಯಕ್ತಿಗೆ ತಾವೇ ಆಹಾರ ತಿನಿಸಿದ ಸಿಬ್ಬಂದಿ : ನೆಟ್ಟಿಗರಿಂದ ಭಾರೀ ಪ್ರಶಂಸೆ

ಇದು ಹೃದಯವಂತಿಕೆಗೆ ಸಾಕ್ಷಿ... ಪ್ರಖ್ಯಾತ ಆಹಾರ ಮಳಿಗೆಯ ಇಬ್ಬರು ಸಿಬ್ಬಂದಿ ತೋರಿದ ಈ ಮಾನವೀಯ ಗುಣ ಈಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Vijaya Karnataka Web 21 Nov 2020, 1:22 pm
ದಯೆ, ಕರುಣೆ ಎಂಬುದು ಎಲ್ಲರಲ್ಲಿ ಇರಬೇಕಾದ ಬಹುಮುಖ್ಯ ಸಂಪತ್ತು. ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸಿದಾಗ ಸಿಗುವ ಆನಂದಕ್ಕೆ ಎಂದೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಪರಿಚಿತರೆಂದಲ್ಲ, ಕಷ್ಟದಲ್ಲಿ ಇರುವ ಯಾರನ್ನೇ ಕಂಡರೂ ಅವರ ಕಷ್ಟಕ್ಕೆ ಸ್ಪಂದಿಸಬೇಕು. ಆಗಲೇ ಬದುಕಿನ ಸಿಹಿ ಅರ್ಥವಾಗುವುದು. ಸದ್ಯ ಅಂತಹ ಸುಂದರ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಎಲ್ಲರಲ್ಲೂ ಸಂತಸ, ಸಮಾಧಾನದ ಅಲೆ ಮೂಡಿಸಿದೆ.
Vijaya Karnataka Web Image  by Free-Photos from Pixabay
| Representative image | Image from Pixabay


Also Read : ತನ್ನ ಪ್ರಾಣವನ್ನೂ ಲೆಕ್ಕಿಸದೆ ಬೆಂಕಿಯಿಂದ ಶ್ವಾನವನ್ನು ರಕ್ಷಿಸಿದ ಹೃದಯವಂತ! : ಭಾವನಾತ್ಮಕ ದೃಶ್ಯವಿದು

ಇದು ಇಬ್ಬರು ಹೃದಯವಂತರ ಅಪೂರ್ವ ವಿಡಿಯೋ. ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ಈ ವಿಡಿಯೋವನ್ನು ಎಷ್ಟು ನೋಡಿದರೂ ಮನಸ್ಸು ತಣಿಯದು. ಅದೊಂದು ಪ್ರಖ್ಯಾತ ಆಹಾರ ಮಳಿಗೆ. ಇಲ್ಲಿಗೆ ವಿಕಲಚೇತನ ವ್ಯಕ್ತಿಯೊಬ್ಬರು ಬಂದಿದ್ದರು. ಇವರನ್ನು ಕಂಡು ಓಡೋಡಿ ಬಂದ ಇಬ್ಬರು ಸಿಬ್ಬಂದಿ ಇವರಿಗೆ ಬೇಕಾದ ಆಹಾರವನ್ನು ಕೇಳಿ ತಂದು ಕೊಟ್ಟಿದ್ದಾರೆ. ಬರೀ ಅಷ್ಟೇ ಅಲ್ಲ ಈ ಆಹಾರವನ್ನು ಸ್ವತಃ ತಾವೇ ತಿನ್ನಿಸಿದ್ದಾರೆ. ಬಹಳ ಪ್ರೀತಿಯಿಂದ ಇವರಿಬ್ಬರು ಆ ವ್ಯಕ್ತಿಗೆ ಆಹಾರ ಕೊಡುವ ಈ ದೃಶ್ಯ ನೋಡಿದಾಗಲೇ ಹೃದಯ ತುಂಬಿ ಬರುತ್ತದೆ.


Also Read : ಬೇರೊಬ್ಬರ ದೇಹದಲ್ಲಿದ್ದ ತನ್ನ ಮಗನ ಹೃದಯದ ಬಡಿತ ಆಲಿಸಿದ ತಾಯಿ! : ಭಾವನಾತ್ಮಕ ದೃಶ್ಯವಿದು

ಈ ವಿಡಿಯೋ ಎಲ್ಲಿನದ್ದು. ಯಾವಾಗ ಸೆರೆಯಾಗಿದ್ದು ಎಂಬ ಬಗ್ಗೆ ಸ್ಪಷ್ಟಮಾಹಿತಿ ಇಲ್ಲ. ಆದರೆ, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಗಮನ ಸೆಳೆದಿದೆ. ಜೊತೆಗೆ, ಎಲ್ಲರಿಗೂ ಈ ಸಿಬ್ಬಂದಿ ಮಾನವೀಯ ಗುಣ ಇಷ್ಟವಾಗಿದೆ. ಹೀಗಾಗಿ, ಹಲವರು ಈ ವಿಡಿಯೋವನ್ನು ತಮ್ಮ ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

Also Read : 2020ರ ಕೊನೆಯ ಸೂರ್ಯಾಸ್ತ! : ಇಲ್ಲಿ 2021ರ ಜನವರಿ 22ರವರೆಗೆ ಸೂರ್ಯ ಉದಯಿಸುವುದೇ ಇಲ್ಲ!

ನಿಜಕ್ಕೂ ಇದೊಂದು ಮಾದರಿ ನಡೆ. ಎಲ್ಲರ ಜೀವನದಲ್ಲೂ ಕಷ್ಟ ಎಂಬುದು ಸಹಜ. ಆದರೆ, ಈ ಕಷ್ಟಕ್ಕೆ ಎಲ್ಲರೂ ಪರಸ್ಪರ ಸ್ಪಂದಿಸುತ್ತಾ ಜೀವನ ಮಾಡಿದರೆ ಬದುಕು ಇನ್ನಷ್ಟು ಸುಂದರವಾಗಿರುತ್ತದೆ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ