ಆ್ಯಪ್ನಗರ

ಇಲ್ಲಿನ ಎರಡು ಪಾರ್ಕ್‌ಗಳಲ್ಲಿ ನಿರ್ಮಾಣವಾಗಿವೆ ಪಾರದರ್ಶಕ ಸಾರ್ವಜನಿಕ ಶೌಚಾಲಯ...!

ಜಪಾನ್‌ನ ಪಾರದರ್ಶಕ ಶೌಚಾಲಯ ಈಗ ಎಲ್ಲಾ ಕಡೆ ಸುದ್ದಿಯಾಗಿದೆ. ಈ ಶೌಚಾಲಯವನ್ನು ನೋಡಿ ಎಲ್ಲರೂ ಒಂದು ಕ್ಷಣ ಆಶ್ಚರ್ಯಚಕಿತರಾಗಿದ್ದಾರೆ...!

Vijaya Karnataka Web 20 Aug 2020, 5:55 am
ಪಾರದರ್ಶಕ ಶೌಚಾಲಯವನ್ನು ಎಲ್ಲಾದರೂ ನೋಡಿದ್ದೀರಾ...? ಅರೇ ಏನ್ ಹೇಳ್ತಿದ್ದೀರಾ ನೀವು... ಇದು ಸಾಧ್ಯನಾ...? ಇದು ಸರೀನಾ...? ಯಾರಾದರೂ ಪಾರದರ್ಶಕ ಶೌಚಾಲಯ ನಿರ್ಮಾಣ ಮಾಡುತ್ತಾರಾ...? ಎಂದೂ ನೀವು ಮುಖಗಂಟಿಕ್ಕಿ ಕೇಳಬಹುದು... ಮುಖದ ತುಂಬಾ ಪ್ರಶ್ನಾರ್ಥಕ ಚಿಹ್ನೆಯೊಂದಿಗೇ ನೋಡಬಹುದು. ಆದರೆ, ಖಂಡಿತಾ ಇಂತಹದ್ದೊಂದು ಶೌಚಾಲಯ ಇದೆ...! ಇದು ಇರುವುದು ಜಪಾನ್‌ನಲ್ಲಿ.
Vijaya Karnataka Web Image by KangDooHo from Pixabay
| Representative image | Image by KangDooHo from Pixabay


Also Read : ಒಂದು ಕಾಲದ ಡ್ರಗ್ ಡೀಲರ್... 16 ವರ್ಷಗಳ ಜೈಲುಶಿಕ್ಷೆ... ಈಗ ಇವರು ವಿವಿಯಲ್ಲಿ ಕ್ರಿಮಿನಾಲಜಿ ಪ್ರೊಫೆಸರ್...!

ಜಪಾನ್‌ನ ಟೋಕಿಯೋದ ಅತ್ಯಂತ ಜನಪ್ರಿಯ ಜಿಲ್ಲೆಗಳಲ್ಲಿ ಒಂದಾದ ಶಿಬುಯಾದಲ್ಲಿ ಇಂತಹ ಪಾರದರ್ಶಕ ಶೌಚಾಲಯ ನಿರ್ಮಾಣವಾಗಿದೆ. ಸದ್ಯ ಈ ವಾಶ್‌ರೂಮ್‌ಗಳು ಇಲ್ಲಿ ಎಲ್ಲರ ಗಮನ ಸೆಳೆದಿವೆ. ಅದಕ್ಕೆ ಕಾರಣವೂ ಇದೆ. ಯಾಕೆಂದರೆ, ಈ ಶೌಚಾಲಯಗಳನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಈ ಶೌಚಾಲಯಗಳು ಪಾರದರ್ಶಕ ಎಂಬುದು ಎಷ್ಟು ಸತ್ಯವೋ, ಯಾರಾದರೂ ಇದರ ಒಳಗೆ ಹೋದ ಬಳಿಕ ಅವರು ಹೊರಗೆ ಕಾಣಿಸುವುದಿಲ್ಲ ಎಂಬುದು ಕೂಡಾ ಅಷ್ಟೇ ಸತ್ಯ. ಅಷ್ಟು ವಿಶೇಷವಾಗಿ ಈ ಶೌಚಾಲಯವನ್ನು ನಿರ್ಮಿಸಲಾಗಿದೆ.

Also Read : ಸಾಕ್ಷಾತ್ ಶ್ರೀಕೃಷ್ಣನೇ ಕಣ್ಣೆದುರು ಇರುವಂತೆ ಕಾಣುವ ಚಿತ್ರ : ಕರಣ್ ಆಚಾರ್ಯರ ಮತ್ತೊಂದು ಕಲಾಕೃತಿ ವೈರಲ್

ಸದ್ಯ ಎರಡು ಉದ್ಯಾನವನದಲ್ಲಿ ಈ ಬಗೆಯ ಎರಡು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದು ಹೊರಗಿನಿಂದ ನಿಂತು ನೋಡಿದಾಗ ಪಾರದರ್ಶಕದಂತೆ ಕಂಡರೂ ಯಾರಾದರೂ ಈ ವಾಶ್‌ರೂಮ್ ಬಳಕೆಗೆಂದು ಒಳಗೆ ಹೋಗಿ ಬಾಗಿಲು ಮುಚ್ಚಿದ ತಕ್ಷಣ ಗೋಡೆಯ ಗಾಜಿನ ಬಣ್ಣವೂ ಬದಲಾಗಿ ಎಲ್ಲಾ ಮುಚ್ಚಿ ಹೋಗುತ್ತದೆ. ಹೀಗಾಗಿ, ಗಾಜಿನ ಗೋಡೆಯ ಬಣ್ಣ ಬದಲಾಗಿದೆ ಎಂದರೆ ಯಾರಾದರೂ ಈ ವಾಶ್‌ರೂಮ್ ಬಳಸುತ್ತಿದ್ದಾರೆ ಎಂದರ್ಥ.

ಇಲ್ಲಿವೆ ವೈರಲ್ ವಿಡಿಯೋ ಮತ್ತು ಫೋಟೋಗಳು :

Also Read : Cocoa `Snow' : ಸ್ವಿಡ್ಜರ್‌ಲ್ಯಾಂಡಿನಲ್ಲಿ ಸುರಿಯಿತು ಚಾಕಲೇಟ್ `ಮಳೆ'...!

ಶಿಗೇರು ಬಾನ್ ವಿನ್ಯಾಸಕಾರರು ಈ ವಿಶಿಷ್ಟ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿದ್ದಾರೆ. ಶಿಬುಯಾದ ಎರಡು ಉದ್ಯಾನವನಗಳಾದ ಯೊಯೋಗಿ ಫುಕಮಾಚಿ ಮಿನಿ ಪಾರ್ಕ್ ಮತ್ತು ಹರು-ನೋ-ಒಗವಾ ಕಮ್ಯೂನಿಟಿ ಪಾರ್ಕ್‌ನಲ್ಲಿ ಈ ವಿಶಿಷ್ಟ ವಾಶ್‌ರೂಮ್ ನಿರ್ಮಿಸಲಾಗಿದೆ. ಸದ್ಯ ಈ ವಾಶ್‌ರೂಮ್‌ನ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ, ಈ ವಾಶ್‌ರೂಮ್‌ ನಿರ್ಮಾಣದ ಬಗ್ಗೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಈ ವಿಶಿಷ್ಟ ಕಲ್ಪನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ