ಆ್ಯಪ್ನಗರ

ಮಿಮಿಕ್ರಿ ಮಾಡುವ ಹಕ್ಕಿ... ಗೋಲ್ ಹೊಡೆದು ಸಂಭ್ರಮಿಸುವ ಜಿಂಕೆ...! : ಇಲ್ಲಿದೆ ಅಚ್ಚರಿಯ ವಿಡಿಯೋ

ಒಮ್ಮೊಮ್ಮೆ ಪ್ರಾಣಿ, ಪಕ್ಷಿಗಳ ಪ್ರತಿಭೆ ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಪ್ರಕೃತಿಯ ಈ ವೈಚಿತ್ರ್ಯ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ...

Vijaya Karnataka Web 3 Jan 2020, 11:11 am
ಆ ಹಕ್ಕಿ ಆಸ್ಟ್ರೇಲಿಯಾದ ಅಗ್ನಿಶಾಮಕ ದಳದ ಸೈರನ್‌ನಂತೆ ಸೌಂಡ್ ಮಾಡುತ್ತದೆ... ಇಲ್ಲೊಂದು ಜಿಂಕೆ ಬಾಲ್ ಗೋಲ್‌ ಬಾಕ್ಸಿನೊಳಗೆ ಹಾಕಿ ಕುಣಿದು ಕುಪ್ಪಳಿಸುತ್ತದೆ... ನಿಜಕ್ಕೂ ಈ ವಿಡಿಯೋ ಒಂದು ಕ್ಷಣ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸುತ್ತದೆ...
Vijaya Karnataka Web heartwarming video
ಅಚ್ಚರಿ ಮೂಡಿಸಿದ ಹಕ್ಕಿ, ಜಿಂಕೆ | Screengrab from video


Also Read : ಮೂಳೆ ಮಜ್ಜೆ ಕಸಿ ಬಳಿಕ ಬದಲಾಯಿತು ವ್ಯಕ್ತಿಯ ಡಿಎನ್‌ಎ...!

ಮಿಮಿಕ್ರಿ ಮಾಡುವ ಹಕ್ಕಿ
ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್‌ನಲ್ಲಿ ಕಾಳ್ಗಿಚ್ಚು ರುದ್ರನರ್ತನಗೈಯುತ್ತಿದೆ. ಕ್ಷಣಕ್ಷಣಕ್ಕೂ ಇಲ್ಲಿ ಬೆಂಕಿ ವ್ಯಾಪಿಸುತ್ತಿದೆ. ಪರಿಣಾಮ ಎಕರೆಗಟ್ಟಲೆ ಕಾಡು ನಾಶವಾದರೆ ವನ್ಯಜೀವಿಗಳು ಸುಟ್ಟು ಕರಕಲಾಗುತ್ತಿವೆ. ಹೀಗಾಗಿ, ಆಸ್ಟ್ರೇಲಿಯಾದ ಅಗ್ನಿಶಾಮಕ ದಳ ದಿನದ ಇಪ್ಪತ್ತನಾಲ್ಕು ಗಂಟೆಯೂ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಈ ದುರಂತದ ನಡುವೆ ಹಕ್ಕಿಯೊಂದರ ಅದ್ಭುತ ಪ್ರತಿಭೆಯೂ ಹೊರಬಿದ್ದಿದೆ.

Also Read : ಆ ಪಾಳು ಕಟ್ಟಡದಲ್ಲಿ ಕೇಳಿ ಬರುತ್ತದೆಯಂತೆ ಆತ್ಮಗಳ ಆರ್ತನಾದ...!

ಬೆಂಕಿ ನಂದಿಸಲು ಸೈರನ್ ಮೊಳಗಿಸಿಕೊಂಡು ಬರುವ ಅಗ್ನಿಶಾಮಕ ದಳದ ವಾಹನದ ಸೌಂಡನ್ನು ದಿನಾ ಕೇಳಿರುವ ಈ ಹಕ್ಕಿ ಈಗ ಅದೇ ಸೈರನ್ ಸದ್ದನ್ನು ಅನುಕರಣೆ ಮಾಡುತ್ತಿದೆ.


ಇದು ಮ್ಯಾಗ್ಪಿ ಎಂಬ ಹಕ್ಕಿ. ಇದನ್ನು ಗ್ರೆಗೊರಿ ಆಂಡ್ರೂಸ್ ಎಂಬವರು ನ್ಯೂಕ್ಯಾಸಲ್ ಪ್ರದೇಶದಲ್ಲಿ ಗುರುತಿಸಿದ್ದರು. ಬಳಿಕ ಈ ಹಕ್ಕಿಯ ವಿಡಿಯೋವನ್ನು ಗ್ರೆಗೊರಿ ಆಂಡ್ರ್ಯೂಸ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಈ ಹಕ್ಕಿಯ ಮಿಮಿಕ್ರಿಯ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಎಲ್ಲರೂ ಈ ಹಕ್ಕಿಯೊಳಗಿರುವ ಪ್ರತಿಭೆಗೆ ಫಿದಾ ಆಗಿದ್ದಾರೆ.

Also Read : ಅಬ್ಬಾ... ಇದು ಕರುಳುಹಿಂಡುವ ದೃಶ್ಯ...! : ಶ್ವಾನದ ಮಾಲಿಕರೇ ಎಚ್ಚರ...!

ಫುಟ್ಬಾಲ್ ಆಡುವ ಜಿಂಕೆ...!
ನೀವು ಜಿಂಕೆಯೊಂದು ಫುಟ್ಬಾಲ್ ಆಡುವುದನ್ನು ಯಾವತ್ತಾದರೂ ನೋಡಿದ್ದೀರಾ...? ಬಹುಶಃ ಇರಲಿಕ್ಕಿಲ್ಲ. ಆದರೆ, ಇಂತಹ ಅಪರೂಪದ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಜಿಂಕೆಯೊಂದು ತನ್ನ ಕೊಂಬಿನ ಸಹಾಯದಿಂದ ಬಾಲ್‌ನಲ್ಲಿ ಆಟ ಆಡುವ ದೃಶ್ಯವಿದೆ. ಅಷ್ಟೇ ಅಲ್ಲದೆ, ಬಾಲನ್ನು
ಗೋಲ್‌ ಬಾಕ್ಸಿನೊಳಗೆ ಹಾಕಿ ಜಿಂಕೆ ಕುಣಿದು ಕುಪ್ಪಳಿಸುವ ದೃಶ್ಯವೂ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಇಂತಹ ಅದ್ಭುತ ವಿಡಿಯೋ ಕೂಡಾ ವೈರಲ್ ಆಗುವುದಕ್ಕೆ ಜಾಸ್ತಿ ಹೊತ್ತೇನು ಹಿಡಿದಿರಲಿಲ್ಲ.

ನಿಜಕ್ಕೂ ಈ ಪ್ರತಿಭೆ ಖುಷಿಕೊಡುತ್ತದೆ. ಎಂತಹ ನೋವನ್ನೂ ಮರೆಸುವ ಶಕ್ತಿ ಈ ಎರಡೂ ವಿಡಿಯೋಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ