ಆ್ಯಪ್ನಗರ

ಲಾಕ್‌ಡೌನ್‌ನಿಂದ ಗಂಗಾನದಿ ಇನ್ನೂ ಶುದ್ಧ : ಪವಿತ್ರ ನದಿಯ ವಿಡಿಯೋ ವೈರಲ್

ಗಂಗಾ ನದಿ ಈಗ ಅತ್ಯಂತ ಶುದ್ಧವಾಗಿದೆ. ರಿಷಿಕೇಶದಲ್ಲಿ ಸೆರೆಯಾಗಿರುವ ದೃಶ್ಯವೇ ಇದಕ್ಕೆ ಸಾಕ್ಷಿ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

Vijaya Karnataka Web 27 Apr 2020, 12:05 pm
ಗಂಗೆಗೆ ನಮ್ಮ ದೇಶದಲ್ಲಿ ಬಹುದೊಡ್ಡ ಸ್ಥಾನವಿದೆ. ಪವಿತ್ರ ನದಿಗಳ ಸಾಲಿನಲ್ಲಿ ಗಂಗೆಗೆ ಅಗ್ರ ಸ್ಥಾನ. ಗಂಗಾಮಾತೆ ಎಂದೇ ಎಲ್ಲರೂ ಈ ನದಿಯನ್ನು ಕರೆಯುವುದು. ಹೀಗೆ ಭಾರತೀಯ ಸಂಸ್ಕೃತಿ, ಸಂಪ್ರದಾಯ, ಇತಿಹಾಸ, ಪರಂಪರೆಯಲ್ಲಿ ಹಾಸುಹೊಕ್ಕಾಗಿರುವ ಗಂಗಾನದಿ ಮಲಿನವಾಗಿ ಆತಂಕಕ್ಕೆ ಕಾರಣವಾಗಿತ್ತು. ಪುಣ್ಯ ನದಿಯ ದುಸ್ಥಿತಿ ಕಂಡು ಜನರು ಮರುಗಿದ್ದರು. ಆದರೆ, ಮಲಿನವಾಗಿದ್ದ ಇದೇ ನದಿ ಈಗ ಶುದ್ಧವಾಗಿದೆ. ಕಾರಣ, ಲಾಕ್‌ಡೌನ್.
Vijaya Karnataka Web ganga river
| Screengrab from video | Courtesy : Susanta Nanda IFS/Twitter


Also Read : ಫೈಟ್ ಫ್ರಮ್ ಹೋಮ್...! : ಇದು ವೃತ್ತಿಪರ ಸ್ಟಂಟ್‌ಮನ್‌ಗಳ ಡಿಫ್ರೆಂಟ್ ಫೈಟಿಂಗ್!

ನಿಜ, ಕೊರೊನಾ ವೈರಸ್ ಜನರನ್ನು ಬಾಧಿಸುತ್ತಿದೆ. ಇದರಿಂದ ಜನ ಕಷ್ಟಪಡುತ್ತಿದ್ದಾರೆ. ಆದರೆ, ಇನ್ನೊಂದು ಕಡೆ, ಪರಿಸರದಲ್ಲಿ ಉತ್ತಮ ಬದಲಾವಣೆಗಳಾಗುತ್ತಿವೆ. ಯಾಕೆಂದರೆ, ಕೊರೊನಾ ವೈರಸ್ ಭಯದಲ್ಲಿ ಎಲ್ಲರೂ ಮನೆಯೊಳಗೇ ಇರುವುದರಿಂದ ಪರಿಸರ ಸ್ವಚ್ಛವಾಗುತ್ತಿದೆ. ಪರಿಸರ ಅದೆಷ್ಟು ಶುದ್ಧವಾಗಿದೆ ಎಂಬುದಕ್ಕೆ ಗಂಗಾನದಿ ಈಗ ಹೇಗೆ ಕಾಣಿಸುತ್ತಿದೆ ಎಂಬುದೇ ಸಾಕ್ಷಿ. ಉತ್ತರಾಖಂಡದ ರಿಷಿಕೇಶದಲ್ಲಿ ಗಂಗಾನದಿ ಅತ್ಯಂತ ಪರಿಶುದ್ಧವಾಗಿ ಹರಿಯುತ್ತಿದೆ. ಕೆಲವೇ ದಿನಗಳ ಹಿಂದೆ ನಾವು ಕಂಡ ನದಿ ಇದೇನಾ ಎಂದು ಮೂಗಿನ ಮೇಲೆ ಬೆರಳಿಟ್ಟು ಅಚ್ಚರಿಪಡುವಷ್ಟು ಗಂಗಾನದಿ ಬದಲಾಗಿದೆ.

Also Read : ಮರಣದಂಡನೆಗೆ ಗುರಿಯಾಗಿದ್ದ ರೌಡಿ ಇಲ್ಲಿ ಪ್ರೇತಾತ್ಮವಾಗಿ ಕಾಡುತ್ತಿದ್ದಾನಂತೆ...!

ಸದ್ಯ ಕಾರ್ಖಾನೆಗಳ ಮಲಿನ ನದಿ ಸೇರುತ್ತಿಲ್ಲ. ಜನರೆಲ್ಲಾ ನದಿ ಬಳಿ ಬಂದು ಕಂಡ ಕಂಡ ವಸ್ತುಗಳನ್ನು ಎಸೆದು ಮಲಿನ ಮಾಡುತ್ತಿಲ್ಲ. ಹೀಗಾಗಿ, ಜನರು ಮನೆಯೊಳಗೆ ಕುಳಿತಿರುವಂತೆಯೇ ನದಿ ಸ್ವಚ್ಛವಾಗಿದೆ. ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

Also Read : ಪಾಳುಬಿದ್ದ ಈ ಅಪೂರ್ವ ಕೋಟೆಯ ಹಿಂದಿದೆ ಭಯಾನಕ ಕತೆಗಳು...!

ಗಂಗಾ ಮತ್ತು ಯಮುನಾ ನದಿಗಳ ನೀರು ಅದೆಷ್ಟು ಮಲಿನವಾಗಿತ್ತು ಎಂದರೆ ಸ್ನಾನಕ್ಕೂ ಇದು ಯೋಗ್ಯ ಅಲ್ಲ ಎಂಬ ನಿರ್ಧಾರಕ್ಕೆ ಬರಲಾಗಿತ್ತು. ಹೀಗಾಗಿ, ಈ ನದಿಗಳ ಸ್ವಚ್ಛತೆ ಕೂಡಾ ಭಾರತದ ಪ್ರಮುಖ ವಿಷಯವಾಗಿತ್ತು. ಸರ್ಕಾರ, ಪರಿಸರ ಇಲಾಖೆ ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನೂ ರೂಪಿಸಿತ್ತು. ಆದರೆ, ಜನರ ನಿರಂತರ ಪ್ರಹಾರದಿಂದ ನದಿಯನ್ನು ಸ್ವಚ್ಛ ಮಾಡಲು ಸಾಧ್ಯವೇ ಆಗಿರಲಿಲ್ಲ. ಆದರೆ, ಈ ಲಾಕ್‌ಡೌನ್ ಈ ಕೆಲಸ ಮಾಡಿದೆ. ಹೀಗಾಗಿ, ಉತ್ತರಾಖಂಡ ಮಾಲಿನ್ಯ ನಿಯಂತ್ರಣ ಮಂಡಳಿ ಹರಿದ್ವಾರ ಮತ್ತು ರಿಷಿಕೇಶದಿಂದ ಗಂಗಾನದಿ ನೀರನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದೆ. ಈ ಮೂಲಕ ಲಾಕ್‌ಡೌನ್ ಬಳಿಕ ಗಂಗಾನದಿಯ ನೀರಿನ ಗುಣಮಟ್ಟ ಎಷ್ಟು ಉತ್ತಮವಾಗಿದೆ ಎಂದು ತಿಳಿದುಕೊಳ್ಳುವ ಪ್ರಯತ್ನವನ್ನು ಇಲಾಖೆ ಮಾಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ