ಆ್ಯಪ್ನಗರ

ಗೋಡೆ ಬಿರುಕು ಬಿಟ್ಟಂತೆ ಕಾಣುತ್ತದೆ, ಆದರೆ, ವಾಸ್ತವ ಅದಲ್ಲ! ನೋಡಿದರೆ ಖಂಡಿತಾ ನೀವು ಬೆರಗಾಗುತ್ತೀರಿ!

ಇದೊಂದು ಅದ್ಭುತ ದೃಶ್ಯ. ಈ ದೃಶ್ಯ ನೋಡಿದ ಯಾರಾದರೂ ಖಂಡಿತಾ ಮತ್ತೆ ಮತ್ತೆ ನೋಡಿ ಖುಷಿ ಪಟ್ಟುಕೊಳ್ಳುತ್ತಾರೆ.

Vijaya Karnataka Web 25 Nov 2020, 1:53 pm
ತಕ್ಷಣಕ್ಕೆ ನೋಡಿದಾಗ ಗೋಡೆ ಬಿರುಕು ಬಿಟ್ಟಂತೆ ಕಾಣುತ್ತದೆ. ಆದರೆ, ಹತ್ತಿರ ಹೋದಂತೆ ಅಲ್ಲೊಂದು ಸುಂದರ ಲೋಕದ ಅನಾವರಣವಾಗುತ್ತದೆ. ನೋಡಿದ ತಕ್ಷಣ ಎಂತಹವರನ್ನೂ ಸೆಳೆದುಬಿಡುವಂತಹ ಅದ್ಭುತ ದೃಶ್ಯವಿದು.
Vijaya Karnataka Web Image by Free Photos from Pixabay
| Representative image | Image From Pixabay


ಕಲೆ ಎಂಬುದು ದೊಡ್ಡ ಸಂಪತ್ತು. ಕ್ರಿಯಾಶೀಲತೆ, ಸೃಜನಶೀಲತೆಗೆ ಇಲ್ಲಿ ಹೆಚ್ಚು ಮಹತ್ವ. ಸತತ ಪರಿಶ್ರಮವಿದ್ದಾಗ ಮಾತ್ರ ಕಲಾದೇವಿ ಒಲಿಯುತ್ತಾಳೆ. ಅಪೂರ್ವ ಕಲಾವಿದರಿಗೆ ಬದುಕಿನ ಪ್ರತಿಯೊಂದು ಕ್ಷಣವೂ ಸ್ಫೂರ್ತಿಯೇ. ಇದರಿಂದ ಹೊಸ ಹೊಸ ಕಲಾಕೃತಿಗಳು ಸೃಷ್ಟಿಯಾಗುತ್ತವೆ. ಎಳೆದ ಗೆರೆಗಳೇ ಮಾತನಾಡಲು ಆರಂಭಿಸುತ್ತವೆ. ಇಂತಹ ಅದೆಷ್ಟೋ ಮನಮೋಹಕ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ಇಂತಹದ್ದೇ ಮತ್ತೊಂದು ವಿಡಿಯೋ ಎಲ್ಲರನ್ನೂ ಒಂದು ಕ್ಷಣ ನಿಬ್ಬೆರಗಾಗುವಂತೆ ಮಾಡಿದೆ.

Also Read : ಅಬ್ಬಬ್ಬಾ! ಬೆನ್ನಟ್ಟಿಕೊಂಡು ಬಂದು ದಾಳಿ ಮಾಡಿದ ಹುಲಿ! : ಭಯಾನಕ ದೃಶ್ಯವಿದು

ಇದು ಕಲಾವಿದರ ಕೈಚಳಕ್ಕೆ ಸಾಕ್ಷಿ. ಈ ಕ್ರಿಯಾಶೀಲತೆ, ಹೊಸ ಆಲೋಚನೆ ಕೂಡಾ ಮನಸ್ಸಿಗೆ ಹಿತ ನೀಡುತ್ತದೆ. @HopkinsBRFC ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಆದ ಅಪೂರ್ವ ದೃಶ್ಯವಿದು. ತಕ್ಷಣಕ್ಕೆ ಬಿರುಕು ಬಿಟ್ಟ ಗೋಡೆಯಂತೆ ಇದು ಕಾಣುತ್ತದೆ. ಹತ್ತಿರಕ್ಕೆ ಹೋದಾಗ ಇದೇ ನೊಣಗಳ ರಾಶಿಯಂತೆ ಕಂಡರೂ ಅಚ್ಚರಿ ಇಲ್ಲ. ಆದರೆ, ಇದು ಖಂಡಿತಾ ನೊಣಗಳ ರಾಶಿ ಅಲ್ಲ. ಬಿರುಕು ಬಿಟ್ಟ ಗೋಡೆಯೂ ಅಲ್ಲ. ಯಾಕೆಂದರೆ, ಸೂಕ್ಷ್ಮವಾಗಿ ನೋಡಿದಾಗ ಅಲ್ಲೊಂದು ಸುಂದರ ಕಲೆ ಕಾಣಸಿಗುತ್ತದೆ...! ಈ ದೃಶ್ಯವನ್ನು ನೋಡಿದ ಪ್ರತಿಯೊಬ್ಬರು ಈ ದೃಶ್ಯವನ್ನು ಎರಡೆರಡು ಸಲ ನೋಡಿ ಖುಷಿಪಟ್ಟಿದ್ದಾರೆ.

Also Read : Caught On Camera : ಅಬ್ಬಬ್ಬಾ! ಬರೀ ಒಂದು ಸೆಕೆಂಡಿನಲ್ಲಿ ಉಳಿಯಿತು ಪ್ರಾಣ!


Also Read : ಮಾಲಿಕರಿಗೆ ತನ್ನ ಬಗ್ಗೆ `ಚಾಡಿ' ಹೇಳಿದ್ದಕ್ಕೆ ಜೊತೆಗಾರ ಶ್ವಾನದ ಮೇಲೆ ಕೋಪ! : ಬಲು ತಮಾಷೆಯ ದೃಶ್ಯವಿದು

ಇಂತಹ ಅದ್ಭುತ ದೃಶ್ಯ ವೈರಲ್ ಆಗದೇ ಇರಲು ಸಾಧ್ಯವೇ...? ಖಂಡಿತಾ ಇಲ್ಲ. ಸಾವಿರಾರು ಜನ ಈ ಕಲೆಯನ್ನು ಆನಂದಿಸಿದ್ದಾರೆ. ಇದು ಎಲ್ಲಿ ಸೆರೆಯಾದ ದೃಶ್ಯ...? ಯಾವಾಗ ಸೆರೆಯಾದ ದೃಶ್ಯ...? ಈ ಕಲ್ಪನೆ ಯಾರದ್ದು...? ಎಂಬುದು ಗೊತ್ತಿಲ್ಲ. ಆದರೆ, ನೋಡಿದ ತಕ್ಷಣ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದು ಬಿಡುವ ತಾಕತ್ತು ಈ ಚಿತ್ರಕ್ಕೆ ಖಂಡಿತಾ ಇದೆ. ಇದೇ ಕಾರಣಕ್ಕೆ ಎಲ್ಲರೂ ಬಲು ಖುಷಿಪಟ್ಟು ಈ ದೃಶ್ಯವನ್ನು ನೋಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ