ಆ್ಯಪ್ನಗರ

ಮೀನಿನ ತಲೆಯಲ್ಲಿ ಕಪ್ಪೆಯ ಸವಾರಿ, ಆನೆಯ ಬೆನ್ನೇರಿ ಹಕ್ಕಿಗಳ ಖುಷಿ! : ಇದು ಮುದ ನೀಡುವ ವಿಡಿಯೋ

ಕಪ್ಪೆಯೊಂದು ಮೀನಿನ ತಲೆಯಲ್ಲಿ ಮತ್ತು ಪುಟ್ಟ ಹಕ್ಕಿಗಳು ಆನೆಯ ಬೆನ್ನಲ್ಲಿ ಕುಳಿತು ಸವಾರಿ ಮಾಡುವ ಅಪೂರ್ವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿದೆ. ಈ ಎರಡೂ ವಿಡಿಯೋಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

Vijaya Karnataka Web 18 Aug 2020, 7:08 pm
ನಮ್ಮ ಸಮೃದ್ಧ ಪ್ರಕೃತಿಯಲ್ಲಿ ಅದೆಷ್ಟೋ ಅಪೂರ್ವ ದೃಶ್ಯಗಳು ಕಾಣಸಿಗುತ್ತವೆ. ಅನೇಕ ಜೀವ ಸಂಕುಲಗಳ ಬದುಕಿನ ಚಿತ್ರಣಗಳನ್ನು ನಾವಿಲ್ಲಿ ನೋಡಬಹುದು. ಹೀಗೆ ನಮ್ಮ ನಡುವೆ ಇರುವ ಅದೆಷ್ಟೋ ಜೀವರಾಶಿಗಳು ಒಮ್ಮೊಮ್ಮೆ ತಮ್ಮ ಅಪೂರ್ವ ಜೀವನ ಕ್ರಮಗಳಿಂದಲೇ ಬೆರಗು ಮೂಡಿಸುತ್ತವೆ. ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಈ ಎಲ್ಲಾ ದೃಶ್ಯಗಳನ್ನು ಕಂಡ ಎಲ್ಲರೂ ಖಂಡಿತಾ `ವ್ಹಾವ್' ಎಂದು ಉದ್ಗರಿಸುತ್ತಾರೆ. ಅಂತೆಯೇ, ನೀವೂ `ವ್ಹಾವ್' ಎಂದು ಹೇಳಬಲ್ಲ ಎರಡು ವಿಡಿಯೋಗಳು ಇಲ್ಲಿವೆ. ಅದರಲ್ಲಿ ಮೊದಲನೆಯದ್ದು ಕಪ್ಪೆ ಮತ್ತು ಮೀನಿನ ಸ್ನೇಹದ ದೃಶ್ಯ.
Vijaya Karnataka Web Beautiful Relationship
| Screengrab from video |Courtesy : Supriya Sahu IAS And Nature is Lit/Twitter


Also Read : ಮುಖಕ್ಕೆ ಮಾಸ್ಕ್‌ ಹಾಕುವ ಮಷಿನ್ ಅಭಿವೃದ್ಧಿಪಡಿಸಿದ ಯುವಕ! : ಅಚ್ಚರಿಯ ವಿಡಿಯೋ ವೈರಲ್

ಕಪ್ಪೆ ಮತ್ತು ಮೀನು ನೀರಿನಲ್ಲೇ ಇದ್ದರೂ ಇವುಗಳ ನಡುವೆ ಸ್ನೇಹವೇರ್ಪಡುವುದು ಬಲು ಅಪರೂಪ. ಯಾಕೆಂದರೆ, ಎರಡೂ ಜೀವಿಗಳ ಜೀವನ ಕ್ರಮವೇ ಭಿನ್ನ. ಆದರೆ, ಸದ್ಯ ವೈರಲ್ ಆಗುತ್ತಿರುವ ದೃಶ್ಯವನ್ನು ಕಂಡಾಗ ನಿಜಕ್ಕೂ ಇದು ಸಾಧ್ಯನಾ ಎಂದೆನಿಸುತ್ತದೆ. ಯಾಕೆಂದರೆ, ಇಲ್ಲಿ ಕಪ್ಪೆ ಮತ್ತು ಮೀನು ಬಲು ಸ್ನೇಹದಿಂದಿವೆ. ಬರೀ ಅಷ್ಟೇ ಅಲ್ಲ, ಮೀನಿನ ತಲೆ ಮೇಲೆ ಕುಳಿತು ಕಪ್ಪೆ ಭರ್ಜರಿ ಸವಾರಿಯನ್ನೂ ಮಾಡುತ್ತಿದೆ. ಇಂತಹ ಅಚ್ಚರಿಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲರನ್ನೂ ಸೆಳೆದಿದೆ.

ಇಲ್ಲಿದೆ ವೈರಲ್ ಆಗುತ್ತಿರುವ ವಿಡಿಯೋ :

Also Read : ಅಪ್ರಾಪ್ತರ ಕೈಗೆ ವಾಹನ ಕೊಟ್ಟರೆ ಏನಾಗುತ್ತದೆ ನೋಡಿ...! : ಇದು ಎಲ್ಲರಿಗೂ ಪಾಠ

ಕಪ್ಪೆ ಮತ್ತು ಮೀನಿನ ಸ್ನೇಹವನ್ನು ನೋಡಿದ್ದಾಯಿತು. ಇಂತಹದ್ದೇ ಇನ್ನೊಂದು ವಿಡಿಯೋ ಇದೆ. ಇದು ಆನೆಯ ಬೆನ್ನೇರಿ ಪುಟ್ಟ ಹಕ್ಕಿಗಳು ಸವಾರಿ ಮಾಡುವ ದೃಶ್ಯ. ಬೃಹತ್ ಆನೆಯ ಬೆನ್ನಿನಲ್ಲಿ ಪುಟ್ಟ ಹಕ್ಕಿಗಳು ನಿಶ್ಚಿಂತೆಯಿಂದ ಸವಾರಿ ಮಾಡಿ ಖುಷಿಪಟ್ಟಿವೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಕೂಡಾ ನೆಟ್ಟಿಗರಿಗೆ ಖುಷಿ ಕೊಟ್ಟಿದೆ.

ಇಲ್ಲಿದೆ ವೈರಲ್ ಆಗುತ್ತಿರುವ ವಿಡಿಯೋ :

Also Read : Viral Video: ಬುದ್ಧಿ ಕಲಿಯದ ಚೀನಾ! : ವಾಟರ್‌ಪಾರ್ಕ್‌ನಲ್ಲಿ ಮಾಸ್ಕ್‌ ಧರಿಸದೆ ಸಾವಿರಾರು ಜನರ ಪಾರ್ಟಿ!

ಪ್ರಾಣಿ, ಪಕ್ಷಿಗಳ ಇಂತಹ ಖುಷಿಯ ಜೀವನವನ್ನು ನೋಡಿದಾಗ ನಿಜಕ್ಕೂ ಮನಸ್ಸು ಹಿತವಾಗುತ್ತದೆ. ಇದಕ್ಕೆ ಸಾಕ್ಷಿಯೆಂಬಂತೆ ನೆಟ್ಟಿಗರು ಕೂಡಾ ಬಲು ಮೆಚ್ಚುಗೆ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ