ಆ್ಯಪ್ನಗರ

Two Headed snake : ನಿಮಗೆ ಗೊತ್ತಾ...? ಈ ಹಾವಿಗಿದೆ ಎರಡು ತಲೆ...!

ನಮ್ಮಲ್ಲಿ ಮಣ್ಣುಮುಕ್ಕ ಎಂಬ ಹಾವಿದೆ. ಇದನ್ನು ಎಲ್ಲರೂ ಕರೆಯುವುದು `ಎರಡು ತಲೆ ಹಾವು' ಎಂದೇ. ವಾಸ್ತವವಾಗಿ ಈ ಹಾವಿಗೆ ಎರಡು ತಲೆ ಇಲ್ಲ. ಆದರೆ, ನಿಜವಾಗಿಯೂ ಎರಡು ತಲೆ ಇರುವ ಹಾವೊಂದು ಈಗ ಕಾಣಸಿಕ್ಕಿದೆ.

Vijaya Karnataka Web 3 Oct 2019, 3:59 pm
ನ್ಯೂಜೆರ್ಸಿ : ಎರಡು ತಲೆ ಹಾವಿನ ಬಗ್ಗೆ ನೀವು ಕೇಳಿರಬಹುದು. ಅಂತೆ ಕಂತೆಗಳ ಸುದ್ದಿಗೂ ಕಿವಿಯಾಗಿರಬಹುದು. ಆದರೆ, ನಿಜವಾಗಿಯೂ ಎರಡು ತಲೆಯ ಹಾವುಗಳು ನೋಡ ಸಿಗುವುದು ವಿರಳಾತಿವಿರಳ. ಆದರೆ, ನ್ಯೂಜೆರ್ಸಿಯಲ್ಲಿ ಇಂತಹ ಅಪರೂಪದ ಹಾವೊಂದು ಕಾಣಸಿಕ್ಕಿದೆ.
Vijaya Karnataka Web two headed sanke


ಇದು ಮರಿ ಹಾವು. ಇದು ಹುಟ್ಟಿ ಕೆಲವೇ ವಾರಗಳಾಗಿವೆಯಷ್ಟೇ. 9 ಇಂಚು (23 ಸೆಂಟಿ ಮೀಟರ್) ಇರುವ ಈ ಹಾವನ್ನು ನ್ಯೂಜೆರ್ಸಿಯ ಪೆಂಬರ್ಟನ್‌ನ ಹರ್ಪಿಟಲಾಜಿಕಲ್ ಅಸೋಸಿಯೇಟ್ಸ್‌ ಜೊತೆ ಕೆಲಸ ಮಾಡುವ ಡೇವ್ ಷ್ನೇಯ್ಡರ್ ಮತ್ತು ಡೇವ್ ಬುರ್ಕೆಟ್ ದಟ್ಟಾರಣ್ಯದಲ್ಲಿ ಪತ್ತೆ ಹಚ್ಚಿದ್ದಾರೆ.

ಈ ಹಾವಿಗೆ ಒಂದು ದೇಹ ಇದ್ದು ಎರಡು ಪ್ರತ್ಯೇಕ ತಲೆಗಳಿವೆ. ಸಾಮಾನ್ಯವಾಗಿ ಇಂತಹ ಹಾವುಗಳು ತುಂಬಾ ದೊಡ್ಡದಾಗುವ ತನಕ ಬದುಕುವುದು ಬಹಳ ಕಷ್ಟ. ಈ ಹಾವಿನಲ್ಲಿ ಬಲಗಡೆಯ ತಲೆ ಬಲಯುತವಾಗಿದೆ. ಆದರೆ, ಇನ್ನೊಂದು ತಲೆ ಇನ್ನೊಂದು ದಿಕ್ಕಿನತ್ತ ಸಾಗಲು ಮನಸ್ಸು ಮಾಡುತ್ತಿರುತ್ತದೆ. ಹೀಗಾಗಿ, ಅವುಗಳ ನಡುವೆಯೇ ಸಂಘರ್ಷವೇರ್ಪಡುವ ಸಾಧ್ಯತೆಯೂ ಇದೆ. ಇಂತಹ ಹಾವುಗಳು ಹುಟ್ಟುವುದು ತೀರಾ ಅಪರೂಪವಾಗಿದ್ದು, ತಜ್ಞರು ಇದರ ಅಧ್ಯಯನದಲ್ಲಿ ತೊಡಗಿದ್ದಾರೆ.

ಕನ್ನಡದಲ್ಲಿ ಇದಕ್ಕೆ ಬುಡುಬುಡಿಕೆ ಹಾವು ಎಂದು ಹೇಳುತ್ತಾರೆ. ಕ್ರೋಟಾಲಿಡೀ ಕುಟುಂಬಕ್ಕೆ ಸೇರಿದ ವಿಷಪೂರಿತ ಹಾವಿದು. ಇಂಗ್ಲೀಷಿನಲ್ಲಿ ಇದ್ದಕ್ಕೆ ರ್ಯಾಟಲ್ ಸ್ನೇಕ್ ಎಂದು ಕರೆಯುತ್ತಾರೆ. ಇದು ಕೆರಳಿದಾಗ ಬುಡುಬುಡಿಕೆಯನ್ನು ಅಲ್ಲಾಡಿಸಿದಾಗ ಬರುವ ಶಬ್ದ ಮಾಡುತ್ತದೆ. ಈ ಶಬ್ದ ಈ ಹಾವು ಕಚ್ಚುವ ಮುನ್ಸೂಚನೆಯೂ ಹೌದು ಎಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ