ನಟ ನಿಹಾಲ್ - ನಿರ್ದೇಶಕಿ ರಿಷಿಕಾ ಶರ್ಮಾ ಮದುವೆಯ ಚಿತ್ರಪಟ

Curated byಹರ್ಷಿತಾ ಎನ್ | Vijaya Karnataka Web 16 Feb 2023, 10:38 pm

ನಿರ್ದೇಶಕಿ ರಿಷಿಕಾ ಶರ್ಮಾ ಹಾಗೂ ನಟ ನಿಹಾಲ್ ವೈವಾಹಿಕ ಜೀವನ ಆರಂಭಿಸಿದ್ದಾರೆ. ರಿಷಿಕಾ - ನಿಹಾಲ್ ಮದುವೆಯ ಚಿತ್ರಪಟ ಇಲ್ಲಿದೆ ನೋಡಿ…

  • ​<strong>ವಿವಾಹ ಬಂಧನಕ್ಕೆ ಒಳಗಾದ ನಿಹಾಲ್ - ರಿಷಿಕಾ ಶರ್ಮಾ</strong>​

    ಕನ್ನಡ ನಟ ನಿಹಾಲ್ ಹಾಗೂ ನಿರ್ದೇಶಕಿ ರಿಷಿಕಾ ಶರ್ಮಾ ಮದುವೆಯಾಗಿದ್ದಾರೆ. ಫೆಬ್ರವರಿ 15 ರಂದು ನಿಹಾಲ್ ಮತ್ತು ರಿಷಿಕಾ ಶರ್ಮಾ ಅವರ ವಿವಾಹ ಮಹೋತ್ಸವ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಟಿಟಿಡಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಜರುಗಿದೆ. ಕುಟುಂಬಸ್ಥರು ಹಾಗೂ ಆತ್ಮೀಯರು ನಿಹಾಲ್ - ರಿಷಿಕಾ ಶರ್ಮಾ ಮದುವೆಯಲ್ಲಿ ಪಾಲ್ಗೊಂಡು, ನವದಂಪತಿಗೆ ಶುಭ ಹಾರೈಸಿದ್ದಾರೆ.


    2018 ರಲ್ಲಿ ರಿಲೀಸ್ ಆಗಿದ್ದ ‘ಟ್ರಂಕ್’ ಹಾಗೂ 2022 ರಲ್ಲಿ ತೆರೆಕಂಡಿದ್ದ ‘ವಿಜಯಾನಂದ’ ಸಿನಿಮಾಗಳಿಗೆ ರಿಷಿಕಾ ಶರ್ಮಾ ಆಕ್ಷನ್ ಹೇಳಿದ್ದಾರೆ. ಈವೆರಡೂ ಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯಿಸಿರುವವರು ನಿಹಾಲ್. ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿರುವ ರಿಷಿಕಾ ಶರ್ಮಾ ಹಾಗೂ ನಿಹಾಲ್ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಮದುವೆಯೆಂಬ ಅಧಿಕೃತ ಮುದ್ರೆ ಅವರಿಬ್ಬರಿಗೆ ಸಿಕ್ಕಿದೆ. ರಿಷಿಕಾ ಶರ್ಮಾ - ನಿಹಾಲ್ ಮದುವೆಯ ಫೋಟೋ ಆಲ್ಬಂ ಇಲ್ಲಿದೆ ನೋಡಿ…

  • ಹೊಸ ಜೀವನ ಆರಂಭಿಸಿದ ನಿಹಾಲ್ - ರಿಷಿಕಾ ಶರ್ಮಾ

  • ತಾಳಿ ಕಟ್ಟುವ ಶುಭ ವೇಳೆ…

  • ಲವ್ ಕಮ್ ಅರೇಂಜ್ಡ್ ಮ್ಯಾರೇಜ್

  • ಇನ್ನಷ್ಟು ಚಿತ್ರಗಳುಡೌನ್‌ಲೋಡ್‌ ಆ್ಯಪ್‌
  • 9 ವರ್ಷಗಳಿಂದ ನಿಹಾಲ್ - ರಿಷಿಕಾ ಮಧ್ಯೆ ಸ್ನೇಹ, ಪ್ರೀತಿ ಇದೆ