ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜನ್ಮದಿನ ಇಂದು. ನಟ ಪುನೀತ್ ರಾಜ್ಕುಮಾರ್ ಇವತ್ತು ನಮ್ಮೊಂದಿಗೆ ಇದ್ದಿದ್ದರೆ ತಮ್ಮ 47ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ ದುರಾದೃಷ್ಟವಶಾತ್ ಪುನೀತ್ ರಾಜ್ಕುಮಾರ್ ಇಂದು ನಮ್ಮೊಂದಿಗೆ ಇಲ್ಲ. ದೈಹಿಕವಾಗಿ ಪುನೀತ್ ರಾಜ್ಕುಮಾರ್ ನಮ್ಮೊಂದಿಗೆ ಇಲ್ಲದಿದ್ದರೂ, ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ಅಪ್ಪು ಎಂದೆಂದಿಗೂ ಅಜರಾಮರ. ಪುನೀತ್ ರಾಜ್ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಇಂದು ‘ಜೇಮ್ಸ್’ ಚಿತ್ರ ರಿಲೀಸ್ ಆಗಿದೆ. ಅಪ್ಪು ನಟನೆಯ ಕಡೆಯ ಸಿನಿಮಾ, ಚೇತನ್ ಕುಮಾರ್ ನಿರ್ದೇಶನದ ‘ಜೇಮ್ಸ್’ ಚಿತ್ರವನ್ನ ಅಭಿಮಾನಿಗಳು ಗ್ರ್ಯಾಂಡ್ ಆಗಿ ವೆಲ್ಕಮ್ ಮಾಡಿದ್ದಾರೆ. ಎಲ್ಲಾ ಥಿಯೇಟರ್ಗಳ ಮುಂದೆ ‘ಜೇಮ್ಸ್’ ಜಾತ್ರೆ ನಡೆಯುತ್ತಿದೆ. ಪುನೀತ್ ರಾಜ್ಕುಮಾರ್ ಅವರನ್ನ ಕಡೆಯ ಬಾರಿಗೆ ತೆರೆಮೇಲೆ ಕಣ್ತುಂಬಿಕೊಂಡ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಅವರ ಅಪರೂಪದ ಫೋಟೋಗಳ ಗುಚ್ಛ ಇಲ್ಲಿದೆ ನೋಡಿ…