ಕರ್ನಾಟಕದ ಅತ್ಯಂತ ಅಪೇಕ್ಷಣೀಯ ಪುರುಷ 2017

Vijaya Karnataka Web 20 Dec 2018, 12:37 pm

Times Most Desirable Men of 2017

  • ಕರ್ನಾಟಕದ ಅತ್ಯಂತ ಮಾದಕ ಪುರುಷರು

    ನಮ್ಮ ಸಹೋದರ ಪತ್ರಿಕೆ ಬೆಂಗಳೂರು ಟೈಮ್ಸ್‌ ಪ್ರತಿವರ್ಷವೂ ತನ್ನ ಓದುಗರಿಗಾಗಿ ಪ್ರಸ್ತುತಪಡಿಸುವ ಕರ್ನಾಟಕದ ಅತ್ಯಂತ ಅಪೇಕ್ಷಣೀಯ ಪುರುಷರ ಪಟ್ಟಿಯನ್ನು ಈ ವರ್ಷದಿಂದ ವಿಜಯ ಕರ್ನಾಟಕ - ಲವಲ್ಖಓ ಕೂಡ ಸಾದರಪಡಿಸುತ್ತಿದೆ. ಸೂಜಿಗಲ್ಲಿನಂತೆ ಸೆಳೆಯುವ 30 ಪುರುಷರ ಪಟ್ಟಿ ಇಲ್ಲಿದೆ.

  • ಕರ್ನಾಟಕದ ಅತ್ಯಂತ ಅಪೇಕ್ಷಣೀಯ ಪುರುಷ ರಕ್ಷಿತ್‌ ಶೆಟ್ಟಿ

    2017 ಅತ್ಯಂತ ಮಾದಕ ನಟ ಎನಿಸಿಕೊಂಡಿರುವುದಕ್ಕೆ ಸಂತೋಷವಾಗಿದೆ ಎನ್ನುತ್ತಾರೆ ರಕ್ಷಿತ್‌ ಶೆಟ್ಟಿ

  • 2. ಯಶ್‌

    ಜನಪ್ರಿಯತೆ: ಇವರ ಮಹತ್ವಾಕಾಂಕ್ಷೆಯ ಚಿತ್ರ ‘ಕೆಜಿಎಫ್‌’ನ ಮೊದಲ ಭಾಗ ಈ ವರ್ಷದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೀಗಾಗಿ ರಾಕಿಂಗ್‌ ಸ್ಟಾರ್‌ ಈ ಚಿತ್ರದಲ್ಲಿ ಬಿಝಿ ಇದ್ದಾರೆ.

    ರಿಲೇಷನ್‌ಶಿಪ್‌ ಸ್ಟೇಟಸ್‌: ನಟಿ ರಾಧಿಕಾ ಪಂಡಿತ್‌ ಜತೆ ಹಲವು ವರ್ಷಗಳ ಗೆಳೆತನದ ಬಳಿಕ ಅವರನ್ನು ವಿವಾಹವಾಗಿದ್ದಾರೆ.

    ಅಪೇಕ್ಷಿತ ಗುಣ: ತಮ್ಮ ಲುಕ್‌ನಲ್ಲಿ ಹಲವಾರು ಪ್ರಯೋಗಗಳನ್ನು ಮಾಡುವುದಕ್ಕೇ ಇವರು ಖ್ಯಾತರು. ಕೆಜಿಎಫ್‌ಗಾಗಿ ಅವರು ವರ್ಷದಿಂದೀಚೆಗೆ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

  • 3 ಕೆಎಲ್‌ ರಾಹುಲ್‌

    ಜನಪ್ರಿಯತೆ: ಭಾರತೀಯ ಕ್ರಿಕೆಟ್‌ ತಂಡದ ಅತ್ಯಂತ ಹಾಟ್‌ ಆಟಗಾರರಲ್ಲಿ ಒಬ್ಬರು ಹಾಗೂ ಬಹು ಭರವಸೆಯ ಆಟಗಾರ ಕೂಡ. ಇವರ ಸ್ಥಿರವಾದ ಆಟ ಭಾರತವನ್ನು ಹಲವು ಬಾರಿ ಗೆಲ್ಲಿಸಿದೆ ಕೂಡ.

    ರಿಲೇಷನ್‌ಶಿಪ್‌ ಸ್ಟೇಟಸ್‌: ಒಳ್ಳೆಯ ಕ್ರೀಡಾ ಮನೋಭಾವ ಇರುವ ಇವರು ಸದ್ಯ ಒಬ್ಬ ಮಾಡೆಲ್‌ನಿಂದ ಇನ್ನೊಬ್ಬರೆಡೆಗೆ ಶಿಫ್ಟ್‌ ಆಗಿದ್ದಾರೆ.

    ಅಪೇಕ್ಷಿತ ಗುಣ: ಇವರ ರಿಪ್ಪ್‌ಡ್‌ ಫಿಸಿಕ್‌ ಮತ್ತು ಬ್ಯಾಡ್‌ ಬಾಯ್‌

    ಚಾರ್ಮ್‌ನಿಂದಾಗಿ ಇವರತ್ತ ಸೆಳೆತ ಹೊಂದಿರದ ಹುಡುಗಿಯರೇ ಇಲ್ಲವೇನೋ.

  • ಇನ್ನಷ್ಟು ಚಿತ್ರಗಳುಡೌನ್‌ಲೋಡ್‌ ಆ್ಯಪ್‌
  • 4. ಶ್ರೀಮುರಳಿ

    ಜನಪ್ರಿಯತೆ: ‘ಉಗ್ರಂ’ ಚಿತ್ರದ ಕಮ್‌ಬ್ಯಾಕ್‌ ಬಳಿಕ ಈ ರೋರಿಂಗ್‌ ಸ್ಟಾರ್‌ ರಥಾವರ, ಮಫ್ತಿಯಂತಹ ದೊಡ್ಡ ಬಜೆಟ್‌ ಚಿತ್ರಗಳಲ್ಲೂ ನಟಿಸಿದರು.

    ರಿಲೇಷನ್‌ಶಿಪ್‌ ಸ್ಟೇಟಸ್‌: ಈ ವರ್ಷ ತಮ್ಮ ಪತ್ನಿ ವಿದ್ಯಾ ಜತೆಗಿನ ವೈವಾಹಿಕ ಜೀವನದ ದಶಮಾನೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ.

    ಅಪೇಕ್ಷಿತ ಗುಣ: ಕನ್ನಡದ ಹಾಟ್‌ ಸ್ಟಾರ್‌ಗಳಲ್ಲಿ ಒಬ್ಬರಾದ ಶ್ರೀಮುರಳಿಗೆ ತಮ್ಮ ಕುಟುಂಬದ ಜತೆ ಸಮಯ ಕಳೆಯುವುದೆಂದರೆ ಇಷ್ಟ.

  • 5. ವಿಷ್ಣುರಾಜ್ ಎಸ್ ಮೆನನ್

    ಜನಪ್ರಿಯತೆ: 2016ರ ಪೀಟರ್‌ ಇಂಗ್ಲೆಂಡ್‌ ಮಿ.ಇಂಡಿಯಾ ಆಗಿರುವ ವಿಷ್ಣುರಾಜ್‌ ಬೆಂಗಳೂರಿನ ಹುಡುಗ. ಅವರೊಬ್ಬ ಎಂಜಿನಿಯರ್‌.

    ಸಾಧಕ ಅಥ್ಲೀಟ್‌ ಕೂಡ.

    ರಿಲೇಷನ್‌ಶಿಪ್‌ ಸ್ಟೇಟಸ್‌: ತಾನು ಈಗಲೂ ಸಿಂಗಲ್‌ ಅನ್ನುತ್ತಾರೆ ಈತ. ಹೇಗೆ ಅನ್ನುವುದು ನಮಗಾಗುವ ಅಚ್ಚರಿ!

    ಅಪೇಕ್ಷಿತ ಗುಣ: ಆ ನಗುಮುಖ, ತೀಕ್ಷ್ಣ ಕಣ್ಣುಗಳು, ಮಾಡೆಲ್‌ಗಳಿಗೆ ತಕ್ಕುದಾದ ದೇಹ ಎಲ್ಲ ಸೇರಿ ಒಂದು ಪರಿಪೂರ್ಣ ಪ್ಯಾಕೇಜ್‌ನಂತಿದ್ದಾರೆ ಇವರು.

  • 6. ಸೂರಜ್‌ ಗೌಡ

    ಜನಪ್ರಿಯತೆ: ಇವರು ಮಿ.ಕರ್ನಾಟಕ ವಿಜೇತರು. ತನ್ನ ನಟನೆಯ ಪ್ರತಿಭೆಯನ್ನು ಒರೆಗೆ ಹಚ್ಚಲು ಕಹಿ (2016) ಮತ್ತು ಸಿಲಿಕಾನ್‌ ಸಿಟಿ (2017)ಯಂತಹ ಚಿತ್ರಗಳಲ್ಲಿ ನೆಗೆಟಿವ್‌ ಶೇಡ್‌ ಉಳ್ಳ ಪಾತ್ರಗಳನ್ನೂ ಆಯ್ದುಕೊಂಡಿದ್ದಾರೆ.

    ರಿಲೇಷನ್‌ಶಿಪ್‌ ಸ್ಟೇಟಸ್‌: ಇವರು ಬೇಡಿಕೆಯಲ್ಲಿದ್ದಾರೆ!

    ಅಪೇಕ್ಷಿತ ಗುಣ: ಚಾಕೊಲೇಟ್‌ ಬಾಯ್‌ ಲುಕ್‌ ಮೀರಿದ್ದು ಇವರಲ್ಲಿ ಇನ್ನೂ ಬಹಳಷ್ಟಿದೆ.

  • 7. ವಿಜಯ್‌ ಸೂರ್ಯ

    ಜನಪ್ರಿಯತೆ: ಕಿರುತೆರೆಯಲ್ಲಿ ಜನಪ್ರಿಯವಾಗಿ ಪ್ರಸಾರವಾಗುತ್ತಿರುವ ಧಾರಾವಾಹಿಯೊಂದರ ನಾಯಕ. ಚಿತ್ರಗಳಲ್ಲೂ ನಟಿಸಿದ್ದಾರೆ. ಕಾಮಿಡಿ ಶೋ ನಿರೂಪಕ ಕೂಡ.

    ರಿಲೇಷನ್‌ಶಿಪ್‌ ಸ್ಟೇಟಸ್‌: ಸದ್ಯಕ್ಕೆ ಯಾರೊಂದಿಗೂ ಹೆಸರು ಕೇಳಿಬರುತ್ತಿಲ್ಲ.

    ಅಪೇಕ್ಷಿತ ಗುಣ: ಟಿಪಿಕಲ್‌ ದಕ್ಷಿಣ ಭಾರತೀಯ ಲುಕ್‌ ಮತ್ತು ಡಿಂಪಲ್‌ ಕೆನ್ನೆ ಪ್ರಮುಖ ಆಕರ್ಷಣೆ.

  • 8. ಜೆ.ಕಾರ್ತಿಕ್‌

    ಜನಪ್ರಿಯತೆ: ಕನ್ನಡ ಕಿರುತೆರೆಯಲ್ಲಿ ಜನಮನ ಗೆದ್ದ ಜೆಕೆ ಬಿಗ್‌ ಬಾಸ್‌ ರಿಯಾಲಿಟಿ ಶೋದಲ್ಲೂ ಜನಪ್ರಿಯರಾಗಿದ್ದಾರೆ.

    ರಿಲೇಷನ್‌ಶಿಪ್‌ ಸ್ಟೇಟಸ್‌: ಸದ್ಯಕ್ಕೆ ಒಬ್ಬ ಬಿಗ್‌ಬಾಸ್‌ ಸ್ಪರ್ಧಿಯ ಮೇಲಷ್ಟೇ ಅವರ ಕಣ್ಣಿದೆ ಎನ್ನುತ್ತಿದೆ ಗಾಳಿಸುದ್ದಿ.

    ಅಪೇಕ್ಷಿತ ಗುಣ: ನೋಡಿದವರನ್ನು ನಿಂತಲ್ಲೇ ಶಿಲೆಯಾಗಿಸುವ ಚೆಂದದೊಂದು ನಗೆ, ಸ್ಪರ್ಧಿಗಳೂ ಅಸೂಯೆಪಡುವಂತಹ ದೇಹ.

  • 9. ಧ್ರುವ ಸರ್ಜಾ

    ಜನಪ್ರಿಯತೆ: ಈ ಆ್ಯಕ್ಷನ್‌ ಪ್ರಿನ್ಸ್‌ಗೆ ಇರುವ ಜನಪ್ರಿಯತೆ ದೊಡ್ಡದು. 2017ರಲ್ಲಿ ಬಿಡುಗಡೆಯಾದ ‘ಭರ್ಜರಿ’ ಇದನ್ನು ಸಾಬೀತುಪಡಿಸಿತು.

    ರಿಲೇಷನ್‌ಶಿಪ್‌ ಸ್ಟೇಟಸ್‌: ಈ ಮಾಹಿತಿ ಸೀಕ್ರೆಟ್‌ ಆಗಿಟ್ಟಿದ್ದಾರೆ.ಅಪೇಕ್ಷಿತ ಗುಣ: ಬಾಡಿ ಬಿಲ್ಡರ್‌ನನ್ನೂ ಚಿತ್ತಾಗಿಸುವಷ್ಟು ಗಟ್ಟಿ ದೇಹ, ಡಾನ್ಸ್‌ನಲ್ಲಂತೂ ಸಾಟಿಯಿಲ್ಲದ ಚುರುಕು ಹೆಜ್ಜೆ ಇವರಿಗಿದೆ.

  • 10. ಚಂದನ್‌

    ಜನಪ್ರಿಯತೆ: ಕಿರುತೆರೆಯಿಂದ ಹಿರಿತೆರೆಗೆ ಯಶಸ್ವಿಯಾಗಿ ಶಿಫ್ಟ್‌ ಆಗಿರುವ ಇವರು ತಾವು ಮಾಡುತ್ತಿರುವ ಪ್ರಾಜೆಕ್ಟ್ಗೆ ತನ್ನೆಲ್ಲ ಶಕ್ತಿಯನ್ನೂ ಹಾಕುತ್ತಾರೆ.

    ರಿಲೇಷನ್‌ಶಿಪ್‌ ಸ್ಟೇಟಸ್‌: ನಟಿಯೊಬ್ಬರ ಜತೆ ಡೇಟ್‌ ಮಾಡುತ್ತಿದ್ದಾರೆ ಎಂಬ ಗಾಳಿ ಸುದ್ದಿ ಇದೆ.

    ಅಪೇಕ್ಷಿತ ಗುಣ: ರಿಪ್ಪ್‌ಡ್‌ ಮೇಕೋವರ್‌ ಪ್ಲಸ್‌ ಪಾಯಿಂಟ್‌.

  • 11. ಧನಂಜಯ

    ಜನಪ್ರಿಯತೆ: ಸುಮಾರು 8 ಸಿನಿಮಾಗಳಲ್ಲಿ ಲೀಡ್‌ ಸ್ಟಾರ್‌ ಆಗಿ ನಟಿಸಿರುವ ಇವರು 2018 ರಲ್ಲಿ ಬಿಡುಗಡೆಯಾದ ಟಗರು ಸಿನಿಮಾದಲ್ಲಿ ವಿಲನ್‌ ಪಾತ್ರ ನಿರ್ವಹಿಸಿ ಗಮನ ಸೆಳೆದಿದ್ದಾರೆ. ಬರಹಗಾರ ಮತ್ತು ಕವಿಯಾಗಿಯೂ ಗುರುತಿಸಿಕೊಂಡಿದ್ದಾರೆ.

    ರಿಲೇಷನ್‌ಶಿಪ್‌ ಸ್ಟೇಟಸ್‌: ಮದುವೆಯಲ್ಲಿ ಆಸಕ್ತಿಯಿಲ್ಲ ಎಂದು ಇವರು ಹೇಳಿದ್ದರೂ ಅದನ್ನು ನಂಬಲಾಗುತ್ತಿಲ್ಲ.

    ಅಪೇಕ್ಷಿತ ಗುಣ: ಎತ್ತರ ಕಾಯ ಮತ್ತು ಹ್ಯಾಂಡ್‌ಸಮ್‌ ಲುಕ್‌.

  • 12.ಕಿರಣ್‌ ರಾಜ್‌

    ಜನಪ್ರಿಯತೆ: ಹಿಂದಿ ಮತ್ತು ಕನ್ನಡ ಎರಡೂ ಭಾಷೆಯ ಕಿರುತೆರೆ ಕ್ಷೇತ್ರಗಳಲ್ಲಿ ಇವರು ಗಳಿಸಿರುವ ಜನಪ್ರಿಯತೆಯಿಂದಾಗಿ 2017ರಲ್ಲಿ ಕೋಡ್ಲು ರಾಮಕೃಷ್ಣ ಅವರ ‘ಮಾರ್ಚ್‌ 22’ ಚಿತ್ರದಲ್ಲಿ ಅವಕಾಶ ಸಿಕ್ಕಿತು.

    ರಿಲೇಷನ್‌ಶಿಪ್‌ ಸ್ಟೇಟಸ್‌: ‘ಸಿಂಗಲ್‌’ ಎಂದು ಪೋಸ್‌ ಕೊಡುತ್ತಿದ್ದಾರೆ.

    ಅಪೇಕ್ಷಿತ ಗುಣ: ಇವರ ಪಕ್ಕಾ ಹುಡುಗರ ಚಾರ್ಮ್‌ ಮತ್ತು ಡೌನ್‌ ಟು ಅರ್ತ್‌ ಗುಣ ಡೇಟ್‌ ಮಾಡುವುದಕ್ಕೆ ಹೇಳಿ ಮಾಡಿಸಿದಂತಿದೆ.

  • 13. ಇಶಾನ್‌

    ಜನಪ್ರಿಯತೆ: ಕಳೆದ ವರ್ಷ ದ್ವಿಭಾಷಾ ಚಿತ್ರ ‘ರೋಗ್‌’ನಲ್ಲಿ ನಟಿಸಿದ ಬಳಿಕ ಇವರು ಪೂರಿ

    ಜಗನ್ನಾಥ್‌ ಜತೆ ತಮ್ಮ ಎರಡನೇ ಚಿತ್ರಕ್ಕೆ ಸಿದ್ಧರಾಗುತ್ತಿದ್ದಾರೆ.

    ರಿಲೇಷನ್‌ಶಿಪ್‌ ಸ್ಟೇಟಸ್‌: ಯಾವುದೇ ಬಂಧಗಳನ್ನು ಇವರು ಹೊಂದಿಲ್ಲ.

    ಅಪೇಕ್ಷಿತ ಗುಣ: ಗ್ರೀಕ್‌ ದೇವತೆಯಂತೆ ಕಾಣುವ ಇವರ ಲುಕ್‌ ಪ್ರಮುಖ ಆಕರ್ಷಣೆ.

  • 14. ಮನೀಷ್‌ ಪಾಂಡೆ

    ಜನಪ್ರಿಯತೆ: ಇಂಡಿಯಾ ಟಿ20 ಕ್ರಿಕೆಟ್‌ ಟೀಮ್‌ನಲ್ಲಿ ಗುರುತಿಸಿಕೊಂಡಿರುವ ಇವರು, ಇತ್ತೀಚೆಗೆ ನಡೆದ ಸೌತ್‌ ಆಫ್ರಿಕಾ ಸಿರೀಸ್‌ನಲ್ಲೂ ಗಮನ ಸೆಳೆದಿದ್ದಾರೆ.

    ರಿಲೇಷನ್‌ಶಿಪ್‌ ಸ್ಟೇಟಸ್‌: ಯುವತಿಯರ ಪಾಲಿಗೆ ಇವರು ಹಾಟ್‌ ಫೇವರಿಟ್‌.

    ಅಪೇಕ್ಷಿತ ಗುಣ: ಮಾಡೆಲ್‌ಗೆ ಇರಬೇಕಾದ ಲುಕ್‌ ಇವರಲ್ಲಿದೆ.

  • 15. ಚೇತನ್‌

    ಜನಪ್ರಿಯತೆ: ಆ ದಿನಗಳು ಸಿನಿಮಾ ಖ್ಯಾತಿಯ ನಟ ಚೇತನ್‌ ಸಿನಿಮಾಗಳ ಆಯ್ಕೆಯಲ್ಲಿ ತುಂಬಾ ಚೂಸಿ. ಕಳೆದ ವರ್ಷ ಅವರ ನೂರೊಂದು ನೆನಪು ಸಿನಿಮಾವೂ ಗಮನಾರ್ಹವಾಗಿತ್ತು. ರಿಲೇಷನ್‌ಶಿಪ್‌ ಸ್ಟೇಟಸ್‌: ಈಗ ಅವರು ಚಿತ್ರೋದ್ಯಮದ ಒಳಗೆ ಮತ್ತು ಹೊರಗಿರುವ ಸಾಮಾಜಿಕ ಸಮಸ್ಯೆಗಳತ್ತ ಗಮನ ಕೇಂದ್ರೀಕರಿಸಿದ್ದಾರೆ.

    ಅಪೇಕ್ಷಿತ ಗುಣ: ಮುಖದಲ್ಲಿ ಪ್ರಧಾನವಾಗಿ ಕಾಣುವ ಭಾವುಕ ಕಣ್ಣುಗಳು.

  • 16. ಸ್ಕಂದ ಅಶೋಕ್‌

    ಜನಪ್ರಿಯತೆ: ಅತ್ಯಂತ ಯಶಸ್ವಿ ಟಿವಿ ಸೀರಿಯಲ್‌ ರಾಧಾ ರಮಣದಲ್ಲಿ ಇವರು ನಿರ್ವಹಿಸಿದ ಪಾತ್ರ ಇವರಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ತಂದುಕೊಟ್ಟಿದೆ. ಸಿನಿಮಾವೊಂದರಲ್ಲಿ ಇವರು ನಟಿಸಿದ್ದರೂ ಟಿವಿ ಕ್ಷೇತ್ರದಲ್ಲೇ ಇವರು ಅದ್ಭುತ ಛಾಪು ಮೂಡಿಸಿದ್ದಾರೆ.

    ರಿಲೇಷನ್‌ಶಿಪ್‌ ಸ್ಟೇಟಸ್‌: ರಿಲೇಷನ್‌ಶಿಪ್‌ವೊಂದರಲ್ಲಿ ಇರುವ ಇವರು ಆ ಕುರಿತ ಮಾಹಿತಿಯನ್ನು ಗೋಪ್ಯವಾಗಿಟ್ಟಿದ್ದಾರೆ.

    ಅಪೇಕ್ಷಿತ ಗುಣ: ತುಂಬಾ ಸುಂದರವಾಗಿರುವ ಇವರ ಮಾಡ್‌ ಲುಕ್‌ ಹೆಚ್ಚು ಗಮನ ಸೆಳೆಯುತ್ತದೆ.

  • 17. ರಾಹುಲ್‌ ರಾಜಶೇಖರನ್‌ ನಾಯರ್‌

    ನಪ್ರಿಯತೆ: 2015 ರ ಮಿಸ್ಟರ್‌ ಇಂಡಿಯಾ ರನ್ನರ್‌ ಅಪ್‌ ಆಗಿರುವ ಇವರು ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಇವರು ನಟಿಸಿರುವ ಮಲಯಾಳಂ ಸಿನಿಮಾವೊಂದು ಕಳೆದ ವರ್ಷ ಬಿಡುಗಡೆಯಾಗಿದ್ದು, ಇವರ ಅಭಿನಯದ ಬಗ್ಗೆ ಉತ್ತಮ ಮಾತುಗಳು ಕೇಳಿಬಂದಿವೆ.

    ರಿಲೇಷನ್‌ಶಿಪ್‌ ಸ್ಟೇಟಸ್‌: ಬಹುಬೇಡಿಕೆಯಿರುವ ಪುರುಷರಿವರು.

    ಅಪೇಕ್ಷಿತ ಗುಣ: ಇವರ ಆಕರ್ಷಕ ಕಣ್ಣುಗಳು ಮತ್ತು ಮುಖ ಇವರ ಪ್ಲಸ್‌ ಪಾಯಿಂಟ್ಸ್‌.

  • 18. ಅನೀಶ್‌ ತೇಜೇಶ್ವರ್‌

    ಜನಪ್ರಿಯತೆ: 2017 ರಲ್ಲಿ ಮಾಂಜಾ ಸಿನಿಮಾದಲ್ಲಿ ಇವರ ಪಾತ್ರ ಮತ್ತು ವಾಸು ನಾನ್‌ ಪಕ್ಕಾ ಕಮರ್ಷಿಯಲ್‌ ಸಿನಿಮಾ ಟೀಸರ್‌ಗಳು ಸಿನಿ ಪ್ರಿಯರ ಗಮನ ಸೆಳೆದಿವೆ.

    ರಿಲೇಷನ್‌ಶಿಪ್‌ ಸ್ಟೇಟಸ್‌: ಕನ್ನಡದ ಸ್ಟ್ಯಾಂಡ್‌ಅಪ್‌ ಕಾಮಿಡಿಯನ್‌ ಒಬ್ಬರ ಮಗಳ ಜೊತೆಗೆ ಇವರ ಸಂಬಂಧವಿದೆ ಎಂಬ ವದಂತಿ ಇದೆ.

    ಅಪೇಕ್ಷಿತ ಗುಣ: ಕಟ್ಟುಮಸ್ತಾದ ದೇಹ ಮತ್ತು ರಗಡ್‌ ಲುಕ್‌.

  • 19. ದಿಗಂತ್‌

    ಜನಪ್ರಿಯತೆ: ಧೂದ್‌ಪೇಡ ಎಂದೇ ಖ್ಯಾತಿಯ ಈ ನಟ ಕಳೆದ ವರ್ಷ ಯಶಸ್ವಿ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಬಾಲಿವುಡ್‌ ಸಿನಿಮಾವೊಂದರಲ್ಲೂ ನಟಿಸಿರುವ ಇವರ ಚೌಕ ಮತ್ತು ಹ್ಯಾಪಿ ನ್ಯೂ ಯಿಯರ್‌ ಸಿನಿಮಾಗಳು ಇವರಿಗೆ ಉತ್ತಮ ಹೆಸರು ತಂದುಕೊಟ್ಟಿವೆ.

    ರಿಲೇಷನ್‌ಶಿಪ್‌ ಸ್ಟೇಟಸ್‌: ಇವರು ನಟಿ ಐಂದ್ರಿತಾ ರೇ ಜೊತೆ ಡೇಟಿಂಗ್‌ನಲ್ಲಿದ್ದಾರೆ.

    ಅಪೇಕ್ಷಿತ ಗುಣ: ಇವರ ಚಾಕ್ಲೇಟ್‌ ಬಾಯ್‌ ಲುಕ್‌ ಮತ್ತು ಗುಳಿಕೆನ್ನೆಗೆ ಮಾರು ಹೋಗದವರಿಲ್ಲ!

  • 20. ವಸಿಷ್ಠ ಎನ್‌ ಸಿಂಹ

    ಜನಪ್ರಿಯತೆ: ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದಿಂದ ಜನಪ್ರಿಯರಾದ ಇವರ ಕೈಯಲ್ಲಿ ಟಗರು ಮತ್ತು ಕವಚದಂಥ ಪ್ರಮುಖ ಸಿನಿಮಾಗಳಿವೆ. ಇವರು ಸಿಂಗರ್‌ ಕೂಡಾ ಹೌದು. ರಿಲೇಷನ್‌ಶಿಪ್‌ ಸ್ಟೇಟಸ್‌: ಸಿಂಗಲ್‌.
    ಅಪೇಕ್ಷಿತ ಗುಣ: ಇವರ ಕಂಠ ಸಿರಿಯೂ ಎಲ್ಲರನ್ನು ಮೋಡಿ ಮಾಡುತ್ತದೆ.

  • 21. ಅರವಿಂದ ಅಯ್ಯರ್‌

    ಜನಪ್ರಿಯತೆ: ಕಿರಿಕ್‌ ಪಾರ್ಟಿ ಸಿನಿಮಾದಲ್ಲಿ ವಿಶಿಷ್ಟ ಪಾತ್ರ ನಿರ್ವಹಿಸಿರುವ ಅರವಿಂದ ಅಯ್ಯರ್‌, 2017 ರಲ್ಲಿ ಭೀಮ ಸೇನಾ ನಳ ಮಹಾರಾಜ ಮತ್ತು 777 ಚಾರ್ಲಿ ಸಿನಿಮಾಗಳಿಗೆ ಮಾಡಿಕೊಂಡ ರಗ್‌ಡ್‌ ಮೇಕ್‌ಓವರ್‌ ಇವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟವು.

    ರಿಲೇಷನ್‌ಶಿಪ್‌ ಸ್ಟೇಟಸ್‌: ಸಿಂಗಲ್‌ ಆಗಿರುವ ಇವರು ಅನೇಕ ಯುವತಿಯರ ಹೃದಯಕ್ಕೆ ಕನ್ನ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

    ಅಪೇಕ್ಷಿತ ಗುಣ: ಸೂಪರ್‌ ಹಾಟ್‌ ಬಾಡಿ ಲುಕ್‌ ಹೊಂದಿರುವ ಇವರು ಯಾವುದಾದರೂ ಸ್ಪರ್ಧೆಯಲ್ಲಿ ಪಾಲ್ಗೊಂಡರೆ ಮಿಸ್ಟರ್‌ ಫೋಟೊಜೆನಿಕ್‌ ಪ್ರಶಸ್ತಿಗೆ ಪಾತ್ರರಾಗುತ್ತಾರೆ.

  • 22. ಕರುಣ್‌ ನಾಯರ್‌

    ಜನಪ್ರಿಯತೆ: 2016 ರಲ್ಲಿ ಇವರು ಇಂಗ್ಲೆಂಡ್‌ ವಿರುದ್ಧ ಬಾರಿಸಿದ ತ್ರಿಶತಕ ಎಲ್ಲೆಡೆ ಹೊಸ ಸಂಚಲನ ಸೃಷ್ಟಿಸಿತ್ತು.

    ರಿಲೇಷನ್‌ಶಿಪ್‌ ಸ್ಟೇಟಸ್‌: ಇವರು ಸಿಂಗಲ್‌ ಆಗಿದ್ದಾರೆ.

    ಅಪೇಕ್ಷಿತ ಗುಣ: ಇವರ ಸುಂದರವಾದ ಕನಸು ಕಂಗಳಿಗೆ ಫಿದಾ ಆಗದ ಯುವತಿಯರಿಲ್ಲ.

  • 23.ಅವಿನಾಶ್‌ ನರಸಿಂಹರಾಜು

    ಜನಪ್ರಿಯತೆ: ದಿವಂಗತ ನರಸಿಂಹರಾಜು ಅವರ ಮೊಮ್ಮಗನಾಗಿರುವ ಇವರು 2016 ರಲ್ಲಿ ಬಂದ ಲಾಸ್ಟ್‌ ಬಸ್‌ ಸಿನಿಮಾ ಮೂಲಕ. 2017 ರಲ್ಲಿ ತಮಿಳು ಜಾಹೀರಾತೊಂದಕ್ಕೂ ಇವರ ಕೆಲಸ ಮಾಡಿದ್ದಾರೆ. ರಿಲೇಷನ್‌ಶಿಪ್‌ ಸ್ಟೇಟಸ್‌: ಪಾರ್ವತಿ ರವೀಂದ್ರನಾಥ್‌ರನ್ನು ಮದುವೆಯಾಗಿರುವ ಇವರಿಗೆ ಎರಡು ವರ್ಷದ ಗಂಡು ಮಗುವಿದೆ.

    ಅಪೇಕ್ಷಿತ ಗುಣ: ಸುಂದರ ನಗು ಮತ್ತು ಗುಡ್‌ ಲುಕ್‌.

  • 24. ಗಣೇಶ್‌

    ಜನಪ್ರಿಯತೆ: 2017ರಲ್ಲಿ ಪಟಾಕಿ, ಮುಗುಳುನಗೆ ಹಾಗೂ ಚಮಕ್‌ನಂತಹ 3 ಹಿಟ್‌ ಚಿತ್ರಗಳನ್ನು ನೀಡಿರುವುದು ಮಾತ್ರವಲ್ಲ, ಇಂದಿಗೂ ಈ ಸಿನಿಮಾಗಳ ಹಾಡುಗಳು ಎಲ್ಲೆಡೆ ಗುನುಗಲ್ಪಡುತ್ತಿವೆ. ರಿಲೇಷನ್‌ಶಿಪ್‌ ಸ್ಟೇಟಸ್‌: ಪತ್ನಿ ಶಿಲ್ಪಾ ಮತ್ತು ಮಕ್ಕಳಿದ್ದಾರೆ. ಅಪೇಕ್ಷಿತ ಗುಣ: ಸೆನ್ಸ್‌ ಆಫ್‌ ಹ್ಯೂಮರ್‌ ಹಾಗೂ ನಕ್ಕು ನಗಿಸುವ ಟ್ಯಾಲೆಂಟ್‌.

  • 25. ಚಿರಂಜೀವಿ ಸರ್ಜಾ

    ಜನಪ್ರಿಯತೆ: 2017ರಲ್ಲಿ ‘ಆಕೆ ’ ಚಿತ್ರದ ಮೂಲಕ ಮತ್ತೊಮ್ಮೆ ಸುದ್ದಿಯಾದರು. ಇದೀಗ ಒಂದಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಇರಾದೆ ಹೊಂದಿದ್ದಾರೆ.

    ರಿಲೇಷನ್‌ಶಿಪ್‌ ಸ್ಟೇಟಸ್‌: 2017ರಲ್ಲಿ ಮೇಘನಾ ರಾಜ್‌ರೊಂದಿಗೆ ನಿಶ್ಚಿತಾರ್ಥ ಆಗಿದೆ.

    ಅಪೇಕ್ಷಿತ ಗುಣ: ಇವರ ಫ್ರೆಂಡ್ಲಿ ನೇಚರ್‌ ಎಲ್ಲರಿಗೂ ಇಷ್ಟವಾಗುತ್ತದೆ.

  • 26. ಜಗನ್‌ ಚಂದ್ರಶೇಖರ್‌

    ಜನಪ್ರಿಯತೆ: ಧಾರಾವಾಹಿಗಳಲ್ಲಿನ ನಟನೆ, ರಿಯಾಲಿಟಿ ಷೋ ಹಾಗೂ ಬಿಗ್‌ಬಾಸ್‌ನಲ್ಲಿ ಭಾಗವಹಿಸುವುದರ ಮೂಲಕ ಹೆಸರು ಮಾಡಿದ್ದಾರೆ.

    ರಿಲೇಷನ್‌ಶಿಪ್‌ ಸ್ಟೇಟಸ್‌: ಇದೀಗ ಸಿಂಗಲ್‌ ಆಗಿದ್ದಾರೆ.

    ಅಪೇಕ್ಷಿತ ಗುಣ: ಜಗನ್‌ ಕಣ್ಣುಗಳ ಆಕರ್ಷಣೆ ಎಂತಹವರನ್ನೂ ತಮ್ಮತ್ತ ಸೆಳೆಯುವ ಶಕ್ತಿ ಹೊಂದಿದೆ.

  • 27. ಕಿರಣ್‌ ಶ್ರೀನಿವಾಸ್‌

    ಜನಪ್ರಿಯತೆ: ಹಿಂದಿ ಕಿರುತೆರೆಯ ಮೇಲೆ ಕಾಣಿಸಿಕೊಂಡು ಹೆಸರು ಮಾಡಿದ ನಂತರ ‘ನಿರುತ್ತರ ’(2017) ಕನ್ನಡ ಚಲನಚಿತ್ರದ ಮೂಲಕ ವಾಪಸ್ಸಾದರು. ಪಕ್ಕದ ಮನೆ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡರು.

    ರಿಲೇಷನ್‌ಶಿಪ್‌ ಸ್ಟೇಟಸ್‌: ಕರಿಯರ್‌ ಎಂದು ಮುಂಬಯಿಗೆ ಕಾಲಿಟ್ಟ ನಂತರ ಅಲ್ಲಿ ಪ್ರೀತಿ ಕಂಡುಕೊಂಡರಾದರೂ ಇದೀಗ ಬೆಂಗಳೂರಿಗೆ ಮರಳಿದ್ದಾರೆ.

    ಅಪೇಕ್ಷಿತ ಗುಣ: ಫೇರ್‌ ಅ್ಯಂಡ್‌ ಹ್ಯಾಂಡ್‌ಸಮ್‌ ಕಿರಣ್‌ರ ಆಕರ್ಷಕ ಫಿಸಿಕ್‌ ಪ್ಲಸ್‌ ಪಾಯಿಂಟ್‌.

  • 28. ಸೃಜನ್‌ ಲೋಕೇಶ್‌

    ಜನಪ್ರಿಯತೆ: ಕನ್ನಡದ ಜನಪ್ರಿಯ ಕಾಮಿಡಿ ಶೋ ಮಜಾ ಟಾಕೀಸ್‌ ಮೂಲಕ ಕರ್ನಾಟಕದೆಲ್ಲೆಡೆ ಮನೆಮಾತಾಗಿರುವ ಇವರು, 2017 ರಲ್ಲಿ ಆ ಶೋನಿಂದ ಬ್ರೇಕ್‌ ಪಡೆದುಕೊಂಡು ಇತರ ಶೋಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ.

    ರಿಲೇಷನ್‌ಶಿಪ್‌ ಸ್ಟೇಟಸ್‌: ಇವರು ಗ್ರೀಷ್ಮಾ ಎಂಬವರನ್ನು ಮದುವೆಯಾಗಿದ್ದಾರೆ.

    ಅಪೇಕ್ಷಿತ ಗುಣ: ಉತ್ತಮ ವಾಗ್ಮಿಯಾಗಿರುವ ಇವರು ಟಾಕಿಂಗ್‌ ಸ್ಟಾರ್‌ ಎಂದೇ ಜನಪ್ರಿಯರಾಗಿದ್ದಾರೆ.

  • 29. ಬೆಹ್ರಮ್‌ ಸಿಗಂಪೊರಿಯ

    ಜನಪ್ರಿಯತೆ: ಲೇಟೆಸ್ಟ್‌ ಹಾಡುಗಳ ಮೂಲಕ ಸಂಚಲನ ಸೃಷ್ಟಿಸಿರುವ ಈ ಗಾಯಕ ಹಿಂದಿ ಪಾಪ್‌ ಸಾಂಗ್‌ ಹಾಡುವ ಮೂಲಕವೂ ಗಮನ ಸೆಳೆದಿದ್ದಾರೆ.

    ರಿಲೇಷನ್‌ಶಿಪ್‌ ಸ್ಟೇಟಸ್‌: ಅವರು ಯುವ ನಟಿಯೊಬ್ಬರೊಂದಿಗೆ ಡೇಟಿಂಗ್‌ನಲ್ಲಿದ್ದಾರೆ ಎಂದು ತಿಳಿದು ಬರುತ್ತದೆ.

    ಅಪೇಕ್ಷಿತ ಗುಣ: ಅವರ ಕಂಠವೇ ಅವರ ಪ್ಲಸ್‌ ಪಾಯಿಂಟ್‌. ಪೈಲಟ್‌ ಕೂಡಾ ಆಗಿರುವ ಅವರ ಲುಕ್‌ ಕೂಡಾ ಚೆನ್ನಾಗಿದೆ.

  • 30. ನಿರೂಪ್‌ ಭಂಡಾರಿ

    ಜನಪ್ರಿಯತೆ: ರಂಗಿತರಂಗ ಖ್ಯಾತಿಯ ಇವರು 2017 ರಲ್ಲಿ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲವಾದರೂ, ಇತ್ತೀಚೆಗೆ ಬಿಡುಗಡೆಯಾದ ರಾಜರಥ ಸಿನಿಮಾದ ಮೂಲಕ ಮತ್ತೆ ಲೈಮ್‌ಲೈಟ್‌ಗೆ ಬಂದಿದ್ದಾರೆ. ಶೀಘ್ರದಲ್ಲೇ ಅವರು ಕಾಮಿಡಿ ಸಿನಿಮಾವೊಂದರಲ್ಲೂ ಕಾಣಿಸಿಕೊಳ್ಳಲಿದ್ದಾರೆ.ರಿಲೇಷನ್‌ಶಿಪ್‌ ಸ್ಟೇಟಸ್‌: ಇವರು ಧನ್ಯಾ ಎಂಬವರನ್ನು ಮದುವೆಯಾಗಿದ್ದಾರೆ.

    ಅಪೇಕ್ಷಿತ ಗುಣ: ಸೈಲೆಂಟ್‌ ಕಿಲ್ಲರ್‌ ಟೈಪ್‌ ಲುಕ್‌ ಇರುವ ಇವರಿಗೂ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ.