ಕನ್ನಡ ಕಿರುತೆರೆ ನಟಿ ಇಶಿತಾ ವರ್ಷ ಸಂಭ್ರಮದಲ್ಲಿದ್ದಾರೆ. ಇಶಿತಾ ವರ್ಷ ಹಾಗೂ ಮುರುಗಾನಂದ ಇತ್ತೀಚೆಗಷ್ಟೇ ತಮ್ಮ ಮೂರನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನ ಆಚರಿಸಿಕೊಂಡರು. ವಿವಾಹ ವಾರ್ಷಿಕೋತ್ಸವದ ನಿಮಿತ್ತ ಇಶಿತಾ ವರ್ಷ ಹಾಗೂ ಮುರುಗಾನಂದ ದಂಪತಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ತಿರುಮಲ ತಿರುಪತಿ ದೇವಾಲಯದಲ್ಲಿ ತಾವು ಕ್ಲಿಕ್ಕಿಸಿಕೊಂಡ ಫೋಟೋಗಳನ್ನ ಇಶಿತಾ ವರ್ಷ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಅಂದ್ಹಾಗೆ, 2019ರಲ್ಲಿ ಇಶಿತಾ ವರ್ಷ ಹಾಗೂ ಮುರುಗಾನಂದ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಮಯಾ ಪಾತ್ರವನ್ನ ಇಶಿತಾ ವರ್ಷ ನಿಭಾಯಿಸಿದ್ದರು. ಮುರುಗಾನಂದ ನೃತ್ಯ ಸಂಯೋಜಕ. ಡ್ಯಾನ್ಸ್ ಟ್ರೂಪ್ ಹೊಂದಿರುವ ಮುರುಗಾನಂದ ಟಿವಿ ಈವೆಂಟ್ಸ್ನಲ್ಲಿ ಪಾಲ್ಗೊಳ್ಳುತ್ತಾರೆ.