ನಟಿ ರಶ್ಮಿಕಾ ಮಂದಣ್ಣ ಬಹುಬೇಡಿಕೆಯ ನಟಿ. ಈಗಾಗಲೇ ಕನ್ನಡ, ತೆಲುಗು, ತಮಿಳಿನಲ್ಲಿ ಹವಾ ಸೃಷ್ಟಿಸಿ, ಬಾಲಿವುಡ್ಗೂ ಕಾಲಿಟ್ಟಿದ್ದಾರೆ. ಒಟ್ಟೊಟ್ಟಿಗೆ ಎರಡು ಹಿಂದಿ ಸಿನಿಮಾಗಳಿಗೆ ನಾಯಕಿಯಾಗಿದ್ದಾರೆ. ಅದರ ಜೊತೆಗೆ ಅವರಿಗೆ ಪ್ರಶಸ್ತಿಗಳು ಕೂಡ ಹರಿದುಬರುತ್ತಿವೆ. ಹಿಂದೆ ಒಂದೊಂದು ಸೈಮಾ, ಫಿಲ್ಮ್ಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿರುವ ರಶ್ಮಿಕಾಗೆ ಈ ಬಾರಿ ಡಬಲ್ ಧಮಾಕ ಎಂದೇ ಹೇಳಬಹುದು. ಸದ್ಯ ಹೈದರಾಬಾದ್ನಲ್ಲಿ ಸೈಮಾ ಪ್ರಶಸ್ತಿ ಸಮಾರಂಭ ನಡೆಯುತ್ತಿದೆ. ಅಲ್ಲಿ ಅವರಿಗೆ ಎರೆಡೆರಡು ಪ್ರಶಸ್ತಿ ಸಿಕ್ಕಿರುವುದು ವಿಶೇಷ. ಕನ್ನಡ, ತೆಲುಗು ಭಾಷೆಯ ಸಿನಿಮಾಗಳಲ್ಲಿ ರಶ್ಮಿಕಾ ನಟಿಸಿದ್ದಾರೆ. ಹಾಗಾಗಿ, ಅವರು ನಟಿಸಿದ್ದ ಕನ್ನಡದ ಯಜಮಾನ ಮತ್ತು ತೆಲುಗಿನ ಡಿಯರ್ ಕಾಮ್ರೇಡ್ ಸಿನಿಮಾಗಳ ನಟನೆಗಾಗಿ ಅತ್ಯುತ್ತಮ ನಟಿ ಕ್ರಿಟಿಕ್ಸ್ ಅವಾರ್ಡ್ ಪಡೆದುಕೊಂಡಿದ್ದಾರೆ ರಶ್ಮಿಕಾ. ಇನ್ನು, ವರ್ಣದ ಉಡುಪು ಧರಿಸಿ, ಕಾರ್ಯಕ್ರಮಕ್ಕೆ ಅವರು ರಂಗು ತುಂಬಿದರು. ಅವರ ಎಕ್ಸ್ಕ್ಲೂಸಿವ್ ಫೋಟೋಗಳು ಇಲ್ಲಿವೆ ನೋಡಿ.