ಪರಭಾಷೆಯಲ್ಲೂ ಮಿಂಚಿರುವ ಕನ್ನಡ ನಟಿ ಸಂಜನಾ ಗಲ್ರಾನಿ ಇದೀಗ ತುಂಬು ಗರ್ಭಿಣಿ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಸಂಜನಾ ಗಲ್ರಾನಿ ಅವರ ಸೀಮಂತ ಸಮಾರಂಭ ಇತ್ತೀಚೆಗಷ್ಟೇ ಅದ್ಧೂರಿಯಾಗಿ ನಡೆಯಿತು. ಮೊದಲು ಹಿಂದು ಸಂಪ್ರದಾಯದಂತೆ ಸಂಜನಾ ಗಲ್ರಾನಿ ಅವರ ಸೀಮಂತ ಕಾರ್ಯಕ್ರಮ ಜರುಗಿತು. ಬಳಿಕ ಪತಿ ಡಾ.ಅಜೀಜ್ ಪಾಶಾ ಅವರ ಕುಟುಂಬಸ್ಥರು ಸಂಜನಾ ಗಲ್ರಾನಿ ಅವರ ಸೀಮಂತ ಕಾರ್ಯಕ್ರಮವನ್ನು ಮುಸ್ಲಿಂ ಸಂಪ್ರದಾಯದಂತೆ ನೆರವೇರಿಸಿದರು. ಸೀಮಂತ ಸಮಾರಂಭದಲ್ಲಿ ಬಿಳಿ ಬಣ್ಣದ ಡಿಸೈನರ್ ಸೀರೆಯಲ್ಲಿ ಸಂಜನಾ ಗಲ್ರಾನಿ ಕಂಗೊಳಿಸಿದರೆ, ಡಾ.ಅಜೀಜ್ ಪಾಶಾ ಬಿಳಿ ಬಣ್ಣದ ಶೇರ್ವಾನಿ ತೊಟ್ಟಿದ್ದರು. ಸಂಜನಾ ಗಲ್ರಾನಿ ಅವರ ಸೀಮಂತ ಸಮಾರಂಭದ ವಿಶಿಷ್ಟ ಕ್ಷಣಗಳ ಫೋಟೋಗಳು ಇಲ್ಲಿವೆ ನೋಡಿ…