'ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ..' ಎಂಬ ಹಾಡಿನಲ್ಲಿ ಈ ಬಾರಿಯ ಯುಗಾದಿಯನ್ನು ನಾವೆಲ್ಲರೂ ಸಂಭ್ರಮದಿಂದ ಆಚರಿಸಿದ್ದೇವೆ. ಪ್ಲವ ನಾಮ ಸಂವತ್ಸವರವನ್ನು ಸ್ವಾಗತಿಸಿದ್ದೇವೆ. ಆದರೆ, ಬಿಗ್ ಬಾಸ್ ಮನೆಯಲ್ಲಿರುವ 14 ಜನ ಸ್ಪರ್ಧಿಗಳು ಈ ಬಾರಿ ಹಬ್ಬದ ಆಚರಣೆ ಮಾಡಿದ್ರಾ? ಖಂಡಿತಾ ಮಾಡಿದ್ರು. ಅವರಿಗೆಂದೇ ಬಿಗ್ ಬಾಸ್ ವಿಶೇಷ ವ್ಯವಸ್ಥೆ ಮಾಡಿದ್ದರು. ಅದ್ದೂರಿಯಾಗಿ ಹಬ್ಬದ ಆಚರಣೆ ಮಾಡಲು ಅನುಕೂಲ ಮಾಡಿಕೊಟ್ಟರು. ಪ್ರತಿಯೊಬ್ಬರು ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ಸಂಭ್ರಮಿಸಿದರು. ಒಬ್ಬರಿಗೊಬ್ಬರು ಬೇವು ಬೆಲ್ಲ ನೀಡಿ ಖುಷಿ ಪಟ್ಟರು. ಈ ವೇಳೆ ಬಿಗ್ ಬಾಸ್ ಮನೆಯ ಎಲ್ಲ ಸದಸ್ಯರಿಗೆ ಹಬ್ಬದ ಅಡುಗೆಯನ್ನು ಕಳುಹಿಸಿಕೊಟ್ಟರು. ಎಲ್ಲರೂ ಊಟ ಮಾಡಿ, ಎಂದಿನಂತೆ ಟಾಸ್ಕ್ನಲ್ಲಿ ಪಾಲ್ಗೊಂಡರು. ಈ ಎಲ್ಲ ಸುಂದರ ಕ್ಷಣಗಳ ಫೋಟೋಗಳು ಇಲ್ಲಿವೆ.