ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮನೆಯಲ್ಲೀಗ ಮದುವೆ ಸಂಭ್ರಮ. ಫೆ.14ರ ಪ್ರೇಮಿಗಳ ದಿನದಂದೇ ಈ ಜೋಡಿ ಹಸೆಮಣೆ ಏರಲಿದೆ. ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಈಗ ಮದುವೆ ಸಂಭ್ರಮದಲ್ಲಿದೆ. ಕಳೆದ ವರ್ಷ ತೆರೆಕಂಡ 'ಲವ್ ಮಾಕ್ಟೇಲ್' ಚಿತ್ರವನ್ನು ಕೃಷ್ಣ-ಮಿಲನಾ ಒಟ್ಟಿಗೆ ಸೇರಿ ಮಾಡಿದ್ದರು. ಆನಂತರ ತಾವಿಬ್ಬರು ಪ್ರೀತಿಯಲ್ಲಿದ್ದು, ಶೀಘ್ರದಲ್ಲೇ ಮದುವೆ ಆಗಲಿರುವುದಾಗಿಯೂ ಹೇಳಿದ್ದರು. ಇದೀಗ ಮದುವೆ ದಿನಾಂಕ ನಿಗದಿಯಾಗಿದ್ದು, ಆಪ್ತರನ್ನು ಮದುವೆಗೆ ಆಹ್ವಾನಿಸುವ ಕೆಲಸದಲ್ಲಿ ಕೃಷ್ಣ-ಮಿಲನಾ ಬ್ಯುಸಿ ಆಗಿದ್ದಾರೆ. ಈಚೆಗೆ ಅವರು ಸುದೀಪ್, ಯಶ್, ನಿಖಿಲ್ ಕುಮಾರಸ್ವಾಮಿ, ತಮನ್ನಾ ಸೇರಿದಂತೆ ಅನೇಕರನ್ನು ಮದುವೆಗೆ ಆಹ್ವಾನಿಸಿದ್ದಾರೆ. ಆ ಫೋಟೋಗಳು ಇಲ್ಲಿವೆ.