ಭರ್ಜರಿಯಾಗಿ ಜರುಗಿದ ‘ಗೀತಾ’ ಸೀರಿಯಲ್ ನಟ ಧನುಷ್ ಬಾಚ್ಯುಲರ್ ಪಾರ್ಟಿ: Photos ಇಲ್ಲಿವೆ

Curated byಹರ್ಷಿತಾ ಎನ್ | Vijaya Karnataka Web 26 Apr 2024, 5:58 pm

‘ಗೀತಾ’ ಸೀರಿಯಲ್‌ನಲ್ಲಿ ನಾಯಕ ವಿಜಯ್ ಆಗಿ ನಟಿಸಿದ್ದ ಧನುಷ್ ಗೌಡ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚೆಗಷ್ಟೇ ಧನುಷ್ ಗೌಡ ಅವರ ಬಾಚ್ಯುಲರ್ ಪಾರ್ಟಿ ಭರ್ಜರಿಯಾಗಿ ನಡೆಯಿತು. ಪಾರ್ಟಿಯಲ್ಲಿ ಧನುಷ್ ಗೌಡ ಸ್ನೇಹಿತರು ಹಾಜರಿದ್ದರು. ಬಾಚ್ಯುಲರ್ ಪಾರ್ಟಿಯ ಫೋಟೋ ಆಲ್ಬಂ ಇಲ್ಲಿದೆ ನೋಡಿ…

  • ಭವ್ಯಾ ಗೌಡ ಹಾಗೂ ಫ್ರೆಂಡ್ಸ್ ಜೊತೆಗೆ ಬಾಚ್ಯುಲರ್ ಪಾರ್ಟಿ ಮಾಡಿಕೊಂಡ ನಟ ಧನುಷ್

    ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ‘ಗೀತಾ’. ಸುಧೀರ್ಘವಾಗಿ 4 ವರ್ಷಗಳ ಕಾಲ ಪ್ರಸಾರ ಕಂಡ ‘ಗೀತಾ’ ಸೀರಿಯಲ್‌ ಮುಕ್ತಾಯಗೊಂಡಿದೆ. ‘ಗೀತಾ’ ಸೀರಿಯಲ್‌ನಲ್ಲಿ ನಾಯಕನಾಗಿ ಮಿಂಚಿದ್ದವರು ನಟ ಧನುಷ್ ಗೌಡ. ‘ಗೀತಾ’ ಧಾರಾವಾಹಿ ಮುಗಿಯುತ್ತಿದ್ದ ಹಾಗೆ ಧನುಷ್ ಗೌಡ ವೈವಾಹಿಕ ಬದುಕಿಗೆ ನಾಂದಿ ಹಾಡುತ್ತಿದ್ದಾರೆ.

    ದಾಂಪತ್ಯ ಜೀವನಕ್ಕೆ ಕಾಲಿಡುವ ಮುನ್ನ ಬಾಚ್ಯುಲರ್ ಪಾರ್ಟಿಯನ್ನ ಧನುಷ್ ಗೌಡ ಭರ್ಜರಿಯಾಗಿ ಆಚರಿಸಿಕೊಂಡರು. ಧನುಷ್ ಗೌಡ ಅವರ ಬಾಚ್ಯುಲರ್ ಪಾರ್ಟಿಯಲ್ಲಿ ‘ಗೀತಾ’ ನಾಯಕಿ ಭವ್ಯಾ ಗೌಡ, ನಿರ್ದೇಶಕ ರಾಮ್‌ಜಿ ಹಾಗೂ ಸ್ನೇಹಿತರು ಪಾಲ್ಗೊಂಡಿದ್ದರು. ಧನುಷ್ ಗೌಡ ಅವರ ಬಾಚ್ಯುಲರ್ ಪಾರ್ಟಿಯ ಫೋಟೋ ಆಲ್ಬಂ ಇಲ್ಲಿದೆ ನೋಡಿ…

  • ಬಾಚ್ಯುಲರ್ ಪಾರ್ಟಿ

    ಧನುಷ್ ಗೌಡ ಅವರ ಬಾಚ್ಯುಲರ್ ಪಾರ್ಟಿ ಭರ್ಜರಿಯಾಗಿ ನೆರವೇರಿದೆ.

  • ಸ್ಪೆಷಲ್ ಕೇಕ್

    ಬಾಚ್ಯುಲರ್ ಪಾರ್ಟಿ ಕೇಕ್‌ನಲ್ಲಿ ‘ಗೇಮ್‌ ಓವರ್’ ಅಂತ ಬರೆಸಲಾಗಿದೆ.

  • ಮದುವೆ ಗಂಡು

    ತಮ್ಮ ಸ್ನೇಹಿತರ ಜೊತೆಗೆ ಮದುವೆ ಗಂಡು ಧನುಷ್ ಗೌಡ ಪಾರ್ಟಿ ಮಾಡಿದ್ದಾರೆ.

  • ಇನ್ನಷ್ಟು ಚಿತ್ರಗಳುಡೌನ್‌ಲೋಡ್‌ ಆ್ಯಪ್‌
  • ‘ಗೀತಾ’

    ಧನುಷ್ ಗೌಡ ಬಾಚ್ಯುಲರ್ ಪಾರ್ಟಿಯಲ್ಲಿ ‘ಗೀತಾ’ ನಾಯಕಿ ಭವ್ಯಾ ಗೌಡ ಹಾಜರಿದ್ದರು.

  • ಸರ್‌ಪ್ರೈಸ್

    ಧನುಷ್ ಗೌಡಗೆ ಭವ್ಯಾ ಗೌಡ ಸರ್‌ಪ್ರೈಸ್ ನೀಡಿದರು.

  • ಫ್ರೆಂಡ್ಸ್ ಗ್ಯಾಂಗ್

    ಮದುವೆ ಗಂಡು ಧನುಷ್ ಗೌಡ ಅವರ ಫ್ರೆಂಡ್ಸ್ ಗ್ಯಾಂಗ್ ಇದು.

  • ಕೇಕ್ ಕಟ್ ಮಾಡಿದ ಧನುಷ್

    ಬಾಚ್ಯುಲರ್ ಪಾರ್ಟಿ ವೇಳೆ ಕೇಕ್ ಕಟ್‌ ಮಾಡಿ ಧನುಷ್ ಸಂಭ್ರಮಿಸಿದರು.

  • ನಾಯಕ - ನಾಯಕಿ

    ‘ಗೀತಾ’ ಸೀರಿಯಲ್‌ನಲ್ಲಿ ಧನುಷ್ ಗೌಡ ಹಾಗೂ ಭವ್ಯಾ ಗೌಡ ನಾಯಕ - ನಾಯಕಿ ಆಗಿ ಅಭಿನಯಿಸಿದ್ದರು.

  • ಕೇಕ್ ತಿನ್ನಿಸಿದ ಭವ್ಯಾ ಗೌಡ

    ಧನುಷ್ ಗೌಡಗೆ ಭವ್ಯಾ ಗೌಡ ಕೇಕ್ ತಿನ್ನಿಸಿದರು.

  • ಹುಡುಗಿ ಯಾರು?

    ಸಂಜನಾ ಎಂಬುವರನ್ನ ಧನುಷ್ ಗೌಡ ಮದುವೆಯಾಗುತ್ತಿದ್ದಾರೆ.