ಮಗಳ ಜೊತೆಗೆ ಮೊದಲ ಕ್ರಿಸ್‌ಮಸ್‌ ಆಚರಣೆಯ ಸಂಭ್ರಮದಲ್ಲಿ 'ರಾಧಾ ರಮಣ' ಧಾರಾವಾಹಿ ನಟ ಸ್ಕಂದ ಅಶೋಕ್!

Vijaya Karnataka Web 25 Dec 2020, 3:23 pm
  • ಮಗಳ ಜೊತೆಗೆ ಮೊದಲ ಕ್ರಿಸ್‌ಮಸ್‌ ಆಚರಣೆಯ ಸಂಭ್ರಮದಲ್ಲಿ 'ರಾಧಾ ರಮಣ' ಧಾರಾವಾಹಿ ನಟ ಸ್ಕಂದ ಅಶೋಕ್!

    'ರಾಧಾ ರಮಣ' ಧಾರಾವಾಹಿ ನಟ ಸ್ಕಂದ ಅಶೋಕ್ ಮಗಳ ಫೋಟೋ ಹಂಚಿಕೊಂಡು ಕ್ರಿಸ್‌ಮಸ್ ಹಬ್ಬದ ಹಾರ್ದಿಕ ಶುಭಾಶಯ ಕೋರಿದ್ದಾರೆ. ವಿಶೇಷವಾಗಿ ಮಗಳ ಫೋಟೋಶೂಟ್ ಕೂಡ ಮಾಡಿಸಲಾಗಿದೆ. ಸ್ಕಂದ ಹಾಗೂ ಶಿಖಾ ಪ್ರಸಾದ್ ಮಗಳು ಮೊದಲ ಬಾರಿಗೆ ಕ್ರಿಸ್‌ಮಸ್ ಆಚರಣೆಯ ಖುಷಿಯಲ್ಲಿದ್ದಾಳೆ. ಇನ್ನೂ ಈ ದಂಪತಿ ಮಗಳಿಗೆ ನಾಮಕರಣ ಮಾಡಿಲ್ಲ. ಆಗಸ್ಟ್ ತಿಂಗಳಲ್ಲಿ ಶಿಖಾ ಪ್ರಸಾದ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ದೀಪಾವಳಿ ಹಬ್ಬದ ಸಮಯದಲ್ಲಿ ಸ್ಕಂದ ದಂಪತಿ ಮಗಳ ಫೋಟೋವನ್ನು ಮೊದಲ ಬಾರಿಗೆ ಶೇರ್ ಮಾಡಿದ್ದರು. 2018ರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸ್ಕಂದ ಹಾಗೂ ಶಿಖಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರದ್ದು ಲವ್ ಮ್ಯಾರೇಜ್. ಈ ಜೋಡಿ ಮದುವೆಗೆ ಸ್ಯಾಂಡಲ್‌ವುಡ್‌ನ ಅನೇಕ ಕಲಾವಿದರು ಆಗಮಿಸಿದ್ದರು. ಸದ್ಯ ಸ್ಕಂದ ಅಶೋಕ್ ಅವರು ಸಿನಿಮಾ ಹಾಗೂ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.

  • ಅಮ್ಮ ಶಿಖಾ ಪ್ರಸಾದ್ ಜೊತೆ

  • ಇನ್ನೂ ನಾಮಕರಣವಾಗಿಲ್ಲ

  • ಆಗಸ್ಟ್‌ನಲ್ಲಿ ಸ್ಕಂದ-ಶಿಖಾ ಜೋಡಿಗೆ ಮಗಳು ಜನನ

  • ಇನ್ನಷ್ಟು ಚಿತ್ರಗಳುಡೌನ್‌ಲೋಡ್‌ ಆ್ಯಪ್‌
  • ಸರಸು ಧಾರಾವಾಹಿಯಲ್ಲಿ ಸ್ಕಂದ ನಟನೆ

  • ಸಿನಿಮಾಗಳಲ್ಲಿಯೂ ಸ್ಕಂದ ಬ್ಯುಸಿ