ವಿಜಯ್‌ ಸೇತುಪತಿ ಸಿನಿಮಾದಲ್ಲಿ ಕನ್ನಡತಿ ರುಕ್ಮಿಣಿ ವಸಂತ್

Vijaya Karnataka Web 22 May 2023, 8:51 am



  • ​ವಿಜಯ್‌ ಸೇತುಪತಿ ಸಿನಿಮಾದಲ್ಲಿ ಕನ್ನಡತಿ ರುಕ್ಮಿಣಿ ವಸಂತ್​

    ಕೆಲವು ವರ್ಷಗಳ ಹಿಂದೆ ಕನ್ನಡದ ಬಹುತೇಕ ಸಿನಿಮಾಗಳಲ್ಲಿಇತರೆ ಭಾಷೆಯ ನಟಿಯರೇ ನಾಯಕಿಯಾಗಿರುತ್ತಿದ್ದರು. ಈಗ ಇತರ ಭಾಷೆಯ ಸ್ಟಾರ್‌ ಸಿನಿಮಾಗಳಿಗೆ ಕನ್ನಡದ ಹುಡುಗಿಯರು ನಾಯಕಿಯಾಗುತ್ತಿದ್ದಾರೆ.

    ಈ ಸಾಲಿಗೆ ಈಗ ‘ಬೀರ್‌ಬಲ್‌’, ‘ಬಾನದಾರಿಯಲಿ’, ‘ಬಘೀರ’ ಸಿನಿಮಾಗಳಲ್ಲಿ ನಟಿಸಿರುವ ರುಕ್ಮಿಣಿ ವಸಂತ್‌ ಸೇರಿದ್ದಾರೆ. ಅವರೀಗ ತಮಿಳಿನ ಸ್ಟಾರ್‌ ನಟನ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ.

    ಬೀರ್‌ಬಲ್‌ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟ ಚೆಲುವೆ ರುಕ್ಮಿಣಿ ವಸಂತ್‌ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಕನ್ನಡ ಚಿತ್ರರಂಗದಲ್ಲಿ ರಕ್ಷಿತ್‌ ಶೆಟ್ಟಿ, ಗಣೇಶ್‌, ಶ್ರೀಮುರಳಿಗೆ ನಾಯಕಿಯಾಗಿರುವ ಅವರು ಈಗ ಕಾಲಿವುಡ್‌ನಲ್ಲಿ ಬಂಪರ್‌ ಅವಕಾಶ ಗಿಟ್ಟಿಸಿಕೊಂಡಿದ್ದು, ಸ್ಟಾರ್‌ ನಟ ವಿಜಯ್‌ ಸೇತುಪತಿಗೆ ಜೋಡಿಯಾಗಿದ್ದಾರೆ.

    ಕನ್ನಡದಲ್ಲಿ ಅವರ ನಟನೆಯ ‘ಬಾನದಾರಿಯಲ್ಲಿ’, ‘ಸಪ್ತ ಸಾಗರದಾಚೆ ಎಲ್ಲೋ’, ‘ಬಘೀರ’ ಸಿನಿಮಾಗಳು ಬಿಡುಗಡೆಯಾಗುವುದಕ್ಕೂ ಮುನ್ನವೇ ಅವರು ತಮಿಳಿನಲ್ಲಿ ಸ್ಟಾರ್‌ ಅವಕಾಶವನ್ನೇ ಪಡೆದಿದ್ದಾರೆ.





  • ​ತಮಿಳಿನ ಆರ್ಮುಗ ಕುಮಾರ್‌ ನಿರ್ದೇಶನ​


    ತಮಿಳಿನ ಆರ್ಮುಗ ಕುಮಾರ್‌ ನಿರ್ದೇಶನದ ಈ ಹೊಸ ಚಿತ್ರದಲ್ಲಿ ವಿಜಯ… ಮತ್ತು ರುಕ್ಮಿಣಿ ಜೋಡಿಯಾಗಿ ನಟಿಸುತ್ತಿದ್ದಾರೆ. ಇದರ ಮುಹೂರ್ತ ಮಲ್ಯೇಷದಲ್ಲಿ ಅದ್ಧೂರಿಯಾಗಿ ನಡೆದಿದೆ. ಸದ್ಯದಲ್ಲಿಯೇ ಸಿನಿಮಾ ಶೂಟಿಂಗ್‌ ಅಲ್ಲಿಯೇ ಶುರುವಾಗಲಿದೆ.

  • ಈ ಹಿಂದೆಯೂ ಒಟ್ಟಿಗೆ ಕೆಲಸ

    ಈ ಹಿಂದೆ ತಮಿಳಿನ ಆರ್ಮುಗ ಕುಮಾರ್‌ ಜೊತೆಗೆ ’ಒರು ನಲ್ಲನಾಲ್‌ ಪಾತು ಸೊಲ್ರೇನ್‌’ ಎಂಬ ಸಿನಿಮಾದಲ್ಲಿ ವಿಜಯ್‌ ಸೇತುಪತಿ ನಟಿಸಿದ್ದರು.

  • ​ನಟಿ ರುಕ್ಮಿಣಿ ವಸಂತ್‌ ಏನಂದ್ರು?​

    "ವಿಜಯ್‌ ಸೇತುಪತಿ ಜತೆಗೆ ಸಿನಿಮಾ ಮಾಡುತ್ತಿರುವುದಕ್ಕೆ ನನಗೆ ಬಹಳ ಖುಷಿಯಾಗುತ್ತಿದೆ. ಈ ಸಿನಿಮಾದ ಮುಹೂರ್ತ ಇತ್ತೀಚೆಗೆ ನಡೆದಿದೆ" ಎಂದು ನಟಿ ರುಕ್ಮಿಣಿ ವಸಂತ್‌ ಅವರು ಹೇಳಿದ್ದಾರೆ.

  • ಇನ್ನಷ್ಟು ಚಿತ್ರಗಳುಡೌನ್‌ಲೋಡ್‌ ಆ್ಯಪ್‌