ಜೀ ಕನ್ನಡ ವಾಹಿನಿ ಪ್ರತಿವರ್ಷ ನಡೆಸಿಕೊಡುವ 'ಜೀ ಕುಟುಂಬ ಅವಾರ್ಡ್ಸ್ 2020' ಸಮಾರಂಭವನ್ನು ಈಚೆಗೆ ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜೀ ಕುಟುಂಬದ ಎಲ್ಲ ತಾರೆಯರೂ ಭಾಗವಹಿಸಿದ್ದರು. ಅವರಿಗಾಗಿಯೇ 'ಕಾರ್ನಿವಾಲ್' ಥೀಮ್ ಹೊಂದಿದ ರೆಡ್ ಕಾರ್ಪೆಟ್ ಸಿದ್ಧಪಡಿಸಲಾಗಿತ್ತು. ಈ ರೆಡ್ ಕಾರ್ಪೆಟ್ ನಲ್ಲಿ ಜಗಮಗಿಸುವ ಬೆಳಕಿನಲ್ಲಿ ಜೀ ಕುಟುಂಬದ ತಾರೆಯರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಒಟ್ಟು 44 ಪ್ರಶಸ್ತಿ ವಿಭಾಗಗಳಿದ್ದು, ಅವುಗಳಲ್ಲಿ ಆರು ಜನಪ್ರಿಯ ವಿಭಾಗಗಳನ್ನು ಕರ್ನಾಟಕದ ಮೂಲೆ ಮೂಲೆಗೂ ತಲುಪಿದ ರಸಿಕರ ಎಕ್ಸ್ ಪ್ರೆಸ್ ಜನರ ಹತ್ತಿರ ಸುರಕ್ಷಿತ ಹಾಗೂ ಎಚ್ಚರಿಕೆಯನ್ನು ಅನುಸರಿಸಿ ಈ ಮತಗಳನ್ನು ಸಂಗ್ರಹಿಸಿದೆ. ಇದರ ಜೊತೆಯಲ್ಲಿ ಎಸ್.ಎಂ.ಎಸ್ ಮತ್ತು ಆಪ್ ಮೂಲಕ ಕೂಡ ವೋಟಿಂಗ್ ನಡೆಸಲಾಯಿತು. ವಿಜೇತರಿಗೆ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್, ರಮೇಶ್ ಅರವಿಂದ್ ಪ್ರಶಸ್ತಿ ಪ್ರದಾನ ಮಾಡಿದರು. ಅಕ್ಟೋಬರ್ 31 ಹಾಗೂ ನವೆಂಬರ್ 1ರ ಶನಿವಾರ ಮತ್ತು ಭಾನುವಾರ ಸಂಜೆ 7ಕ್ಕೆ ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ಆ ಸುಂದರ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ.