Please enable javascript.ಜಿರಳೆ ಓಡಿಸುವ ವಿಧಾನ,ಮನೆಯೊಳಗೆ ಜಿರಳೆಗಳು ಬರಬಾರದೆಂದರೆ, ಈ ಟಿಪ್ಸ್ ಅನುಸರಿಸಿ ಸಾಕು - simple tricks to get rid of cockroaches from your home - vijaykarnataka

ಮನೆಯೊಳಗೆ ಜಿರಳೆಗಳು ಬರಬಾರದೆಂದರೆ, ಈ ಟಿಪ್ಸ್ ಅನುಸರಿಸಿ ಸಾಕು

Produced byಮನೋಹರ್ ಶೆಟ್ಟಿ | Vijaya Karnataka Web 14 Jul 2023, 12:27 pm

ಮನುಷ್ಯರ ಆರೋಗ್ಯವನ್ನು ಹಾಳು ಮಾಡುವ ಈ ಜಿರಳೆಗಳನ್ನು, ಮನೆಯೊಳಗೆ ಬರದೇ ಇರುವ ಹಾಗೆ ನೋಡಿಕೊಳ್ಳಬೇಕು. ಇದಕ್ಕಾಗಿ ಕೆಲವೊಂದು ಸಿಂಪಲ್ ಟ್ರಿಕ್ಸ್ ಇಲ್ಲಿದೆ ನೋಡಿ..

  • ಮನೆಯಲ್ಲಿ ಜಿರಳೆಗಳ ಕಾಟ

    ಮನೆಯಲ್ಲಿ ಜಿರಳೆಗಳ ಕಾಟ

    ಮನೆಯಲ್ಲಿ ಜಿರಳೆಗಳ ಕಾಟ ಹೆಚ್ಚಾದರೆ ಕಾಯಿಲೆಗಳು ಕೂಡ ಹೆಚ್ಚಾದಂತೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ! ಅದರಲ್ಲೂ ಮನೆಯಲ್ಲಿ ಅತ್ತಿಂದಿತ್ತ ಓಡಾಡುವ ಸಣ್ಣ ಮಕ್ಕಳು, ವಯಸ್ಸಾದವರು, ಬಹಳ ಎಚ್ಚರಿಕೆಯನ್ನು ವಹಿಸಿಕೊಳ್ಳಬೇಕು. ಯಾಕೆಂದ್ರೆ ಜಿರಳೆಗಳಿಂದಾಗಿ ಬರುವ ಕೆಲವೊಂದು ಕಾಯಿಲೆ ಗಳು ಬಹಳ ಬೇಗನೇ ಮಕ್ಕಳು, ಹಾಗೂ ವಯಸ್ಸಾದವರನ್ನು ಟಾರ್ಗೆಟ್ ಮಾಡಿಬಿಡುತ್ತವೆ! ಹೀಗಾಗಿ ಮೊದಲು ಜಿರಳೆಗಳು ಮನೆಯೊಳಗೆ ಬರದೇ ಇರುವ ಹಾಗೆ ನೋಡಿಕೊಳ್ಳಬೇಕು! ಹಾಗಾದ್ರೆ ಏನೆಲ್ಲಾ ಟಿಪ್ಸ್ ಅನುಸರಿಸಬೇಕು? ಇಲ್ಲಿದೆ ನೋಡಿ ಟಿಪ್ಸ್...

  • ಮಲಗುವ ಮುನ್ನ ಈ ಟಿಪ್ಸ್ ಅನುಸರಿಸಿ

    ಮಲಗುವ ಮುನ್ನ ಈ ಟಿಪ್ಸ್ ಅನುಸರಿಸಿ

    ಮಲಗುವ ಮುನ್ನ ಅಡುಗೆ ಮನೆಯ ಸಿಂಕ್ ಸ್ವಚ್ಛಪಡಿಸಿಕೊಳ್ಳಿ ಹಾಗೂ ಟಾಯ್ಲೆಟ್ ಮತ್ತು ಬಾತ್‌‌ ರೂಮ್ ಸಿಂಕ್‌‌ಗಳಿಗೆ ಜಿರಳೆ ಸ್ಪ್ರೇ ಮಾಡುವುದನ್ನು ಮರೆಯಬೇಡಿ.

  • ಕಸದ ಬುಟ್ಟಿ

    ಕಸದ ಬುಟ್ಟಿ

    ಮನೆಯ ಕಸದ ಬುಟ್ಟಿಯನ್ನು ಆದಷ್ಟು ಸ್ವಚ್ಛವಾಗಿಟ್ಟುಕೊಳ್ಳಿ. ಅಲ್ಲದೆ ಯಾವಾಗಲೂ, ಕಸದ ಬುಟ್ಟಿಯ ಮುಚ್ಚಳ ಮುಚ್ಚಿರುವಂತೆ ನೋಡಿಕೊಳ್ಳಿ.

  • ಅಡುಗೆ ಮನೆಯಲ್ಲಿ ಆಹಾರಗಳನ್ನು ಇಡಬೇಡಿ

    ಅಡುಗೆ ಮನೆಯಲ್ಲಿ ಆಹಾರಗಳನ್ನು ಇಡಬೇಡಿ

    ಅಡುಗೆ ಮನೆಯ ಕಿಚನ್ ಸೆಲ್ಫ್‌ನಲ್ಲಿ ಅಳಿದುಳಿದ ಆಹಾರ ಗಳನ್ನು ಇಡುವುದಕ್ಕೆ ಹೋಗಬೇಡಿ. ಯಾಕೆಂದ್ರೆ ಅಡುಗೆ ಮನೆ ಯಲ್ಲಿ ಆಹಾರಗಳು ಇದ್ದರೆ ಅದು ಜಿರಳೆಗಳಿಗೆ ಆಹ್ವಾನ ಕೊಟ್ಟಂತೆ!

  • ಆಹಾರಗಳನ್ನು ಡಬ್ಬಿಗಳಲ್ಲಿ ಇಟ್ಟು ಮುಚ್ಚಳ ಮುಚ್ಚಿ

    ಆಹಾರಗಳನ್ನು ಡಬ್ಬಿಗಳಲ್ಲಿ ಇಟ್ಟು ಮುಚ್ಚಳ ಮುಚ್ಚಿ

    ಯಾವುದೇ ಆಹಾರ ಪದಾರ್ಥಗಳನ್ನು ಡಬ್ಬಿಗಳಲ್ಲಿ ಇಟ್ಟು ಮುಚ್ಚಳ ಮುಚ್ಚಿ ಇಲ್ಲಾಂದ್ರೆ ಆಹಾರ ಪದಾರ್ಥಗಳು ಇರುವ ಪಾತ್ರೆಗೆ ಪ್ಲೇಟ್ ಮುಚ್ಚಿ


    Image Source: Timesofindia

  • ಹಳೆಯ ಪುಸ್ತಕಗಳು!

    ಹಳೆಯ ಪುಸ್ತಕಗಳು!

    ಮನೆಯಲ್ಲಿರುವ ಹಳೆಯ ಪುಸ್ತಕಗಳು, ದಿನಪತ್ರಿಕೆಗಳು ಹಾಗೂ ಮ್ಯಾಗಜಿನ್‌ಗಳನ್ನು ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಬಿಸಾಡ ಬೇಡಿ. ಯಾಕೆಂದ್ರೆ ಇದು ಕೂಡ ಜಿರಳೆಗಳಿಗೆ ವಾಸಸ್ಥಾನ ವಾಗಬಹುದು!

  • ಬೋರಿಕ್ ಆಮ್ಲ

    ಬೋರಿಕ್ ಆಮ್ಲ

    ಮನೆಯ ಬಾಗಿಲುಗಳ ಹಾಗೂ ಕಿಟಕಿ ಸಂದಿಗಳಲ್ಲಿ, ಸ್ವಲ್ಪ ಬೋರಿಕ್ ಆಮ್ಲವನ್ನು ನೀರಿನಲ್ಲಿ ಮಿಕ್ಸ್ ಮಾಡಿ ಸಿಂಪಡಿಸಿ. ಇದರಿಂದ ಕೂಡ ಜಿರಳೆಗಳನ್ನು ತಡೆಯಬಹುದು

  • ದಾಲ್ಚಿನ್ನಿ ಪುಡಿ

    ದಾಲ್ಚಿನ್ನಿ ಪುಡಿ

    ಸ್ವಲ್ಪ ದಾಲ್ಚಿನ್ನಿ ಪುಡಿಯನ್ನು ಜಿರಳೆಗಳು, ಓಡಾಡುವ ಕಡೆ ಗಳಲ್ಲಿ ಚುಮುಕಿಸಿದರೆ, ಜಿರಳೆಗಳ ಸಮಸ್ಯೆ ದೂರವಾಗುತ್ತವೆ.