ಅಸ್ತಮಾ ಕಾಯಿಲೆಯನ್ನು ಸೋಲಿಸುವ ಆಹಾರಗಳು

Vijaya Karnataka Web 27 Jun 2023, 11:32 pm

ಅಸ್ತಮಾ ಕಾಯಿಲೆಯಿಂದ ಬಳಲುತ್ತಿರುವವರು, ಆಹಾರ ಕ್ರಮದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡರೆ, ಖಂಡಿತವಾಗಿಯೂ ಕೂಡ ಅಸ್ತಮಾ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

  • ಅಸ್ತಮಾ ರೋಗ

    ಇಂದಿನ ದಿನಗಳಲ್ಲಿ ಬಿಪಿ-ಶುಗರ್‌ ಕಾಯಿಲೆಯ ಹಾಗೆ, ಅಸ್ತಮಾ ರೋಗ ಕೂಡ, ಹೆಚ್ಚಿನ ಜನರ ಪ್ರಾಣ ಹಿಂಡುತ್ತಿದೆ. ಉಬ್ಬಸ, ಉಸಿರಾಟದ ಸಮಸ್ಯೆ ಹಾಗೂ ಪದೇ ಪದೇ ಕೆಮ್ಮು ಕಾಣಿಸಿ ಕೊಳ್ಳುದು ಈ ಕಾಯಿಲೆಯ ಪ್ರಮುಖ ಲಕ್ಷಣಗಳು. ಈ ಕಾಯಿಲೆ ಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂದರೆ, ಕೆಲ ವೊಂದು ನೈಸರ್ಗಿಕವಾಗಿ ಸಿಗುವ ಆಹಾರಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

  • ವಿಟಮಿನ್ ಸಿ ಅಂಶ ಹೆಚ್ಚಿರುವ ಹಣ್ಣು-ತರಕಾರಿಗಳನ್ನು ಸೇವಿಸಿ

    ವಿಟಮಿನ್ ಸಿ ಅಂಶ ಹೆಚ್ಚಿರುವ ಹಣ್ಣು-ತರಕಾರಿಗಳಾದ ಸೀಬೆ ಹಣ್ಣು, ಪರಂಗಿ ಹಣ್ಣು, ಕಿತ್ತಳೆ ಹಣ್ಣು, ಸ್ಟ್ರಾಬೆರಿ, ಬ್ರೊಕೋಲಿ, ಟೊಮೆಟೊ ಹಣ್ಣು, ಪಾಲಕ್ ಸೊಪ್ಪು, ಇತ್ಯಾದಿ ಆಹಾರ ಪದಾರ್ಥಗಳನ್ನು ಸೇವನೆ ಮಾಡಿ.

  • ಬೀಟಾ ಕ್ಯಾರೋಟಿನ್ ಆಹಾರಗಳನ್ನು ಸೇವನೆ ಮಾಡಿ

    ಬೀಟಾ ಕ್ಯಾರೋಟಿನ್ ಅಂಶ ಹೆಚ್ಚಾಗಿ ಕಂಡು ಬರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಿ ಉದಾಹರಣೆಗೆ ಹಸಿರೆಲೆ ತರಕಾರಿಗಳು, ಕ್ಯಾರೆಟ್ ಇದರಲ್ಲಿ ಮುಖ್ಯವಾದದ್ದು.

  • ವಿಟಮಿನ್ ಡಿ ಅಂಶ ಹೆಚ್ಚಾಗಿರುವ ಆಹಾರಗಳು

    ದಿನಕ್ಕೊಂದು ಬೇಯಿಸಿದ ಮೊಟ್ಟೆ, ಮಶ್ರೂಮ್, ಮೊಸರು ಟ್ಯೂನಾ ಮೀನು ಇತ್ಯಾದಿ ಆಹಾರ ಪದಾರ್ಥಗಳಲ್ಲಿ ವಿಟಮಿನ್ ಡಿ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ.

  • ಇನ್ನಷ್ಟು ಚಿತ್ರಗಳುಡೌನ್‌ಲೋಡ್‌ ಆ್ಯಪ್‌
  • ಈರುಳ್ಳಿ

    ಅಸ್ತಮಾ ಇರುವವರು ಅರ್ಧ ಹಸಿ ಈರುಳ್ಳಿಯನ್ನು ಕತ್ತರಿಸಿ ತಿನ್ನಬೇಕು. ಈರುಳ್ಳಿಯಲ್ಲಿ ಕಂಡುಬರುವ ಥಿಯೋಸೆಲ್ಫಿನೇಟ್ ಸಂಯುಕ್ತವು ಅಸ್ತಮಾ ಸಮಸ್ಯೆಯನ್ನು ನಿಯಂತ್ರಿಸುತ್ತದೆ.

  • ಅರಿಶಿನ ನೀರು

    ಒಂದು ಲೋಟ ಬಿಸಿ ನೀರಿಗೆ, ಚಿಟಿಕೆಯಷ್ಟು ಅರಿಶಿನವನ್ನು ಹಾಕಿಕೊಂಡು ಕುಡಿದರೆ, ಅಸ್ತಮಾದ ರೋಗಲಕ್ಷಣಗಳು ನಿಧಾನಕ್ಕೆ ಕಡಿಮೆ ಆಗುವುದು

  • ಆಂಟಿ ಆಕ್ಸಿಡೆಂಟ್ ಹೆಚ್ಚಾಗಿರುವ ಹಣ್ಣುಗಳು

    ನೈಸರ್ಗಿಕವಾಗಿ ಸಿಗುವ ಹಣ್ಣುಗಳಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ. ಇವು ಅಸ್ತಮಾ ಕಾಯಿಲೆಯ ಲಕ್ಷಣಗಳನ್ನು ನಿವಾರಿಸಲು ನೆರವಾಗುತ್ತದೆ. ಉದಾಹರಣೆಗೆ ದಾಳಿಂಬೆ, ಬೆರ್ರಿ ಹಣ್ಣುಗಳು