ಸಿಕ್ಕಿದ ಅವಕಾಶದಲ್ಲೇ ತಾಯ್ನಾಡು ಸೇರಿಬಿಡುವ ತವಕ, ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ದೃಶ್ಯಗಳಿವು!

Vijaya Karnataka Web 2 May 2020, 12:36 pm
  • ಸಿಕ್ಕಿದ ಅವಕಾಶದಲ್ಲೇ ತಾಯ್ನಾಡು ಸೇರಿಬಿಡುವ ತವಕ, ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ದೃಶ್ಯಗಳಿವು!

    ಬೆಂಗಳೂರು: ಕೊರೊನಾ ವೈರಸ್‌ಅನ್ನು ಹತೋಟಿಯಲ್ಲಿಡಲು ಸರ್ವ ಪ್ರಯತ್ನ ಪಡುತ್ತಿರುವ ರಾಜ್ಯ ಮತ್ತು ಕೇಂದ್ರ ಸರಕಾರಗಳು ನಿರೀಕ್ಷೆಯಂತೆ ಮೇ 3ರ ವರೆಗೆ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ ಮೇ 17ರ ವರೆಗೆ ವಿಸ್ತರಣೆಗೊಳಿಸಿವೆ. ಈ ಮಧ್ಯೆ ಅನ್ಯ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತಿತರರಿಗೆ ಒಂದು ಬಾರಿಗೆ ಅನ್ವಯವಾಗುವಂತೆ ತವರಿಗೆ ಮರಳಲು ರಾಜ್ಯ ಸರಕಾರ ಅವಕಾಶ ಮಾಡಿಕೊಟ್ಟಿದೆ.

    ಅಂತರ ರಾಜ್ಯ ಮತ್ತು ಅಂತರ ಜಿಲ್ಲಾ ಪ್ರಯಾಣಕ್ಕೆ ಒಂದು ಬಾರಿ ಅವಕಾಶ ಸಿಕ್ಕಿರುವ ಹಿನ್ನೆಲೆ ಹೆಚ್ಚಿನ ಸಂಖ್ಯೆಯ ಕಾರ್ಮಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಊರಿಗೆ ಮರಳುತ್ತಿದ್ದಾರೆ. ಆದರೆ ಊರಿಗೆ ಮರಳಿದ ನಂತರ ಲಾಕ್‌ಡೌನ್‌ ಸಂಪೂರ್ಣ ತೆರವುಗೊಳ್ಳುವ ವರೆಗೆ ಮತ್ತೆ ಹಿಂತಿರುಗಿ ಬರುವಂತಿಲ್ಲ ಎಂಬ ನಿಯಮ ಜಾರಿಯಲ್ಲಿದೆ.

    ಈ ಪ್ರಯಾಣಕ್ಕೂ ಮುನ್ನ ಕೋವಿಡ್‌-19 ಪರೀಕ್ಷೆಯನ್ನು ಮಾಡಿಸಿಕೊಂಡಿರಬೇಕು. ಪ್ರಯಾಣದ ಖರ್ಚನ್ನು ಜನರೇ ಬರಿಸಿಕೊಳ್ಳಬೇಕು. ನಿಯಮಿತ ವೇಳೆಗೆ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆಯಿದೆ. ಹೆಚ್ಚು ಜನರು ಇಲ್ಲದಿದ್ದರೆ ಟ್ಯಾಕ್ಸಿ, ಇನ್ನಿತರ ಲಘು ವಾಹನ ಮಾಡಿಕೊಂಡು ಹೋಗಲು ಪರವಾನಗಿ ಇದೆಯಾದರೂ ಹೆಚ್ಚು ಹಣ ಕೇಳುತ್ತಿರುವುದರಿಂದ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಹೆಚ್ಚಿನ ಮಂದಿ ಅವಲಂಬಿತರಾಗಿದ್ದಾರೆ.

    ಪರ ಊರಲ್ಲಿ ಸಿಲುಕಿದವರಿಗೆ ತಾಯ್ನಾಡಿಗೆ ಮರಳಲು ಇರುವ ಷರತ್ತುಗಳೇನು? ಇಲ್ಲಿದೆ ಮಾಹಿತಿ

    ಈ ನಡುವೆ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಊರಿಗೆ ಮರಳಲು ಉಚಿತ ಅಥವಾ ದರ ರಿಯಾಯಿತಿ ವ್ಯವಸ್ಥೆಯನ್ನು ಸರಕಾರ ಮಾಡಬೇಕು ಎಂಬ ವಾದ ಎಲ್ಲೆಡೆ ಕೇಳಿ ಬರುತ್ತಿದೆ.

    ಬೆಂಗಳೂರಿನ ಮೆಜೆಸ್ಟಿಕ್‌ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಊರಿಗೆ ಮರಳಲು ಕಾದು ಕುಳಿತಿರುವ ದೃಶ್ಯಗಳು ಇಲ್ಲಿವೆ.

  • ಊರಿಗೆ ಯಾವಾಗ ತಲುಪ್ತಿವೋ...

  • ಸಜ್ಜಾದ ಗಂಟುಮೂಟೆಗಳು!

  • ಬಿಗಿ ಬಂದೋಬಸ್ತ್

  • ಇನ್ನಷ್ಟು ಚಿತ್ರಗಳುಡೌನ್‌ಲೋಡ್‌ ಆ್ಯಪ್‌
  • ಊರಿಗೆ ಮರಳಲು ಸರದಿ ಸಾಲು

  • ಕೆಎಸ್‌ಆರ್‌ಟಿಸಿ ಬಸ್‌ಗಾಗಿ ಕಾಯುತ್ತಿರುವ ಜನ

  • ನಿಯಮಿತ ಬಸ್‌ ವ್ಯವಸ್ಥೆ

  • ಯಾವಾಗ ಬಸ್‌ ಬರುತ್ತೋ...

  • ಊರಿಗೆ ಹೋಗಿ ಮಾಡುವುದೇನು?

  • ತವರಿಗೆ ಮರಳುವ ಕಾತುರ

  • ಕೊರೊನಾ ಕಳವಳ