ಭಾರೀ ಮಳೆಗೆ ಬೆಂಗಳೂರು ತತ್ತರ: ವರುಣನ ಅಬ್ಬರದ ರಣಭೀಕರ ದೃಶ್ಯ!

Vijaya Karnataka Web 24 Oct 2020, 4:55 pm
  • ಅಬ್ಬರಿಸಿ ಬೊಬ್ಬಿರಿದ ವರುಣ

    ಬೆಂಗಳೂರಿನಲ್ಲಿ ಮೂರು ತಾಸಿಗೂ ಹೆಚ್ಚು ಕಾಲ ಸುರಿದ ದಾಖಲೆ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಸುಮಾರು 500 ಮನೆಗಳಿಗೆ ನೀರು ನುಗ್ಗಿದೆ. ವರುಣನ ಅಬ್ಬರಕ್ಕೆ ಹಲವು ಬಡಾವಣೆಗಳು ಜಲಾವೃತವಾಗಿವೆ. ರಸ್ತೆಗಳು ನದಿಗಳಂತಾಗಿ ವಾಹನಗಳು ಆಟಿಕೆಗಳಂತೆ ತೇಲಿ ಹೋಗಿವೆ. ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ, ಕೋರಮಂಗಲ, ಜೆ.ಪಿ.ನಗರ, ವಿಲ್ಸನ್‌ಗಾರ್ಡನ್‌, ಹೊಸಕೆರೆಹಳ್ಳಿ, ಕೆಂಗೇರಿ, ರಾಜರಾಜೇಶ್ವರಿನಗರದ ಬೆಮೆಲ್‌ ಲೇಔಟ್‌, ಐಡಿಯಲ್‌ ಹೋಮ್ಸ್‌, ಸರ್‌ ಎಂ.ವಿ. ವಿಶ್ವೇಶ್ವರಯ್ಯ ಬಡಾವಣೆ ಸೇರಿದಂತೆ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಮಳೆ ನೀರು ಹೊರಹಾಕಲು ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡಿದರು. ರಸ್ತೆಗಳು ಹೊಳೆಗಳಾಗಿ ವಾಹನಗಳು ತೇಲಿ ಹೋದವು. ತಗ್ಗು ಪ್ರದೇಶಗಳಲ್ಲಿನ ಹಲವು ಬಡಾವಣೆಗಳು ಜಲದಿಗ್ಭಂಧನಕ್ಕೆ ಒಳಗಾಗಿದ್ದವು. ನವರಾತ್ರಿ ಸಂಭ್ರಮ, ವ್ಯಾಪಾರ ವಹಿವಾಟಿಗೂ ಈ ಮಳೆ ಹೊಡೆತ ನೀಡಿದೆ. ರಸ್ತೆ ಬದಿಯಲ್ಲಿ ಮಾರಾಟಕ್ಕಿದ್ದ ಕುಂಬಳ, ಬಾಳೆ ಕಂಬ ಸಹಿತ ಹಲವು ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಬಿಬಿಎಂಪಿಯು ಎನ್‌ಡಿಆರ್‌ಎಫ್‌ನ 20 ಮಂದಿಯ ತಂಡವನ್ನು ಪ್ರವಾಹ ಉಂಟಾಗಿದ್ದ ಪ್ರದೇಶಗಳಿಗೆ ಕಳಿಸಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸುವುದು ತಪ್ಪಿದೆ.

  • ಬದುಕು ಅತಂತ್ರ!

  • ಕುಸಿಯಿತು ಕಟ್ಟಡ!

  • ಏಕಾಏಕಿ ಮನೆಗೆ ನುಗ್ಗಿತು ನೀರು!

  • ಇನ್ನಷ್ಟು ಚಿತ್ರಗಳುಡೌನ್‌ಲೋಡ್‌ ಆ್ಯಪ್‌
  • ಬದುಕು ಮೂರಾಬಟ್ಟೆ

  • ನೀರಿನೊಂದಿಗೆ ಹರಿದು ಬಂತು ಕೊಳಚೆ!

  • ಜಲದಿಗ್ಭಂಧನ

  • ಮಳೆಯಲ್ಲೂ ಭರ್ಜರಿ ಖರೀದಿ

  • ಹಲವು ಬಡಾವಣೆಗಳು ಸಂಪೂರ್ಣ ಜಲಾವೃತ

  • ಹಬ್ಬಕ್ಕೆ ಬ್ರೇಕ್!

  • ರಣ ಭೀಕರ ಮಳೆಯ ಅವಾಂತರ!

  • ಮೂರು ತಾಸು ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತ!

  • ಹಬ್ಬದ ಸಂಭ್ರಮ ಕಸಿದ ಮಳೆ!

  • ರಸ್ತೆಗಳು ನದಿಗಳಾಗಿ, ತೇಲಿ ಹೋಗಿವೆ ವಾಹನಗಳು!

  • 'ದಾಖಲೆ' ಮಳೆಗೆ ಕೊಚ್ಚಿ ಹೋದ ದಾಖಲೆಗಳು

  • ಮಳೆ ಅನಾಹುತ

  • ರಕ್ಕಸ ಮಳೆ ಆರ್ಭಟ

  • ಮನೆಗಳಿಗೆ ನುಗ್ಗಿದ ಮಳೆ ನೀರು