ಪ್ರಸ್ತುತ ಕೊರೊನಾ ವೈರಸ್ನಿಂದ ಇಡೀ ವಿಶ್ವದಾದ್ಯಂತ ಕ್ರೀಡಾಚಟುವಟಿಕೆಗಳು ಸ್ಥಗಿತಗೊಂಡಿವೆ. ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯು ಇದೀಗ ಬಿಸಿಸಿಐ ತಾತ್ಕಲಿಕವಾಗಿ ರದ್ಧು ಮಾಡಿದೆ. ಇದರ ನಡುವೆ ಎಲ್ಲ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿ ಹಾಗೂ ಸರಣಿಗಳು ಕೂಡ ರದ್ದಾಗಿವೆ. ಈ ಹಿನ್ನೆಲೆಯಲ್ಲಿ ಎಲ್ಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ತಮ್ಮದೇ ಆದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಂತೆ ಐಪಿಎಲ್ ಅತ್ಯಂತ ದುಬಾರಿ ಆಟಗಾರ ಪ್ಯಾಟ್ ಕಮಿನ್ಸ್ ಅವರು ಇದೀಗ ಬಿಡುವಿನ ವೇಳೆಯಲ್ಲಿ ತಮ್ಮ ಕುಟುಂಬದ ಜತೆ ಕಳೆಯುತ್ತಿದ್ದು, ಕಠಿಣ ಫಿಟ್ನೆಸ್ ನಲ್ಲಿಯೂ ತಲ್ಲೀನರಾಗಿದ್ದಾರೆ. ಅವರ ಇತ್ತೀಚಿನ ಕೆಲ ಫೋಟೊಗಳು ಇಲ್ಲಿವೆ..