ಆರ್‌ಆರ್‌ ಕದನಕ್ಕೆ ಆರ್‌ಸಿಬಿ ಸಂಭಾವ್ಯ XI

Curated byರಮೇಶ ಕೋಟೆ | Vijaya Karnataka Web 25 Apr 2022, 4:11 pm

ಆರ್‌ಆರ್‌ ಕದನಕ್ಕೆ ಆರ್‌ಸಿಬಿ ಸಂಭಾವ್ಯ XI

  • ಆರ್‌ಸಿಬಿ vs ಆರ್‌ಆರ್‌ ಕದನ!

  • ಆರ್‌ಸಿಬಿ vs ಆರ್‌ಆರ್‌ ಕದನ!

    ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಕಳೆದ ಪಂದ್ಯದ 9 ವಿಕೆಟ್‌ಗಳ ಹೀನಾಯ ಸೋಲಿನ ಬೇಸರದಲ್ಲಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಮಂಗಳವಾರ ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್ ಮೈದಾನದಲ್ಲಿ ಸಂಜು ಸ್ಯಾಮ್ಸನ್‌ ನಾಯಕತ್ವದ ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಸೆಣಸಲಿದ್ದು, ಗೆಲುವಿನ ಲಯಕ್ಕೆ ಮರಳಲು ಎದುರು ನೋಡುತ್ತಿದೆ.

  • 2. ಅನುಜ್ ಬದಲು ಲೊಮ್ರೊರ್‌?

    ಅನುಜ್‌ ರಾವತ್‌ ಸ್ಥಾನದಲ್ಲಿ ನಾಯಕ ಫಾಫ್‌ ಡು ಪ್ಲೆಸಿಸ್‌ ಜೊತೆ ಮಹಿಪಾಲ್‌ ಲೊಮ್ರೊರ್‌ ಇನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ.

  • 3. ವಿರಾಟ್‌ ಕೊಹ್ಲಿ

    ಕಳೆದ ಎರಡು ಪಂದ್ಯಗಳಲ್ಲಿ ಗೋಲ್ಡನ್‌ ಡಕ್ಔಟ್‌ ಆಗಿದ್ದ ವಿರಾಟ್‌ ಕೊಹ್ಲಿ ಮೇಲೆ ಈ ಪಂದ್ಯದಲ್ಲಿ ಭಾರಿ ನಿರೀಕ್ಷೆ ಇಡಲಾಗಿದೆ.

  • ಇನ್ನಷ್ಟು ಚಿತ್ರಗಳುಡೌನ್‌ಲೋಡ್‌ ಆ್ಯಪ್‌
  • 4. ಗ್ಲೆನ್‌ ಮ್ಯಾಕ್ಸ್‌ವೆಲ್‌

    ಎಂದಿನಂತೆ ನಾಲ್ಕನೇ ಕ್ರಮಾಂಕದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಆಡಲಿದ್ದಾರೆ.

  • 5. ಸುಯಷ್‌ ಪ್ರಭುದೇಸಾಯಿ

    ಐದನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಸುಯಷ್‌ ಪ್ರಭುದೇಸಾಯಿ.

  • 6. ಶಹಬಾಜ್‌ ಅಹ್ಮದ್‌

    ಸ್ಪಿನ್‌ ಆಲ್‌ರೌಂಡರ್‌ ಆಗಿ ಶಹಬಾಜ್‌ ಅಹ್ಮದ್‌ ಕಣಕ್ಕೆ ಇಳಿಯುವುದು ಬಹುತೇಕ ಖಚಿತ.

  • 7. ದಿನೇಶ್‌ ಕಾರ್ತಿಕ್

    ವಿಕೆಟ್ ಕೀಪಿಂಗ್‌ ಜೊತೆಗೆ ಮ್ಯಾಚ್‌ ಫಿನಿಷರ್‌ ಜವಾಬ್ದಾರಿಯನ್ನು ದಿನೇಶ್‌ ಕಾರ್ತಿಕ್‌ ನಿರ್ವಹಿಸಲಿದ್ದಾರೆ.

  • 8. ವಾನಿಂದು ಹಸರಂಗ

    ವಾನಿಂದು ಹಸರಂಗ ಸ್ಪಿನ್‌ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  • 9. ಹರ್ಷಲ್‌ ಪಟೇಲ್‌

    ಈ ಪಂದ್ಯದಲ್ಲಿ ಹರ್ಷಲ್‌ ಪಟೇಲ್‌ ಅವರ ಮೇಲೆ ಸಾಕಷ್ಟು ಜವಾಬ್ದಾರಿ ಇದೆ.

  • 10. ಜಾಶ್‌ ಹೇಝಲ್‌ವುಡ್‌

    ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಜಾಶ್‌ ಹೇಝಲ್‌ವುಡ್‌ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದ್ದಾರೆ.

  • 11. ಮೊಹಮ್ಮದ್‌ ಸಿರಾಜ್‌

    ಎಂದಿನಂತೆ ವೇಗದ ಬೌಲಿಂಗ್‌ ವಿಭಾಗವನ್ನು ಮೊಹಮ್ಮದ್‌ ಸಿರಾಜ್‌ ಮುನ್ನಡೆಸಲಿದ್ದಾರೆ.